ETV Bharat / bharat

ದೆಹಲಿಗೆ ನೂತನ ಅಬಕಾರಿ ನೀತಿ : ಮುಂಜಾನೆ 3 ಗಂಟೆವರೆಗೂ ಬಾರ್​ ತೆರೆಯಲು ಅವಕಾಶ - ನೂತನ ಅಬಕಾರಿ ನೀತಿ

ಡ್ರಾಫ್ಟ್ ಬಿಯರ್ ಅನ್ನು ಬಾರ್‌ಗಳಿಗೆ ಪೂರೈಸಲು ಈ ನೀತಿಯು ಮೈಕ್ರೊ ಬ್ರೂವರೀಸ್‌ಗೆ ಅವಕಾಶ ನೀಡುತ್ತದೆ. "ಡ್ರಾಫ್ಟ್ ಬಿಯರ್ ಅನ್ನು ಬಾಟಲಿಗಳಲ್ಲಿ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದು. ಮದ್ಯ ಸೇವಿಸಲು ಪರವಾನಿಗೆ ಹೊಂದಿರುವ ಇತರ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಮೈಕ್ರೊ ಬ್ರೂವರಿಯನ್ನು ಪೂರೈಸಲು ಸಹ ಅನುಮತಿಸಲಾಗುವುದು" ಎಂದು ಈ ಅಬಕಾರಿ ನೀತಿ ಹೇಳುತ್ತದೆ..

bars
3 ಗಂಟೆವರೆಗೂ ಬಾರ್​ ತೆರೆಯಲು ಅವಕಾಶ
author img

By

Published : Jul 6, 2021, 1:42 PM IST

ನವದೆಹಲಿ : ದೆಹಲಿ ಸರ್ಕಾರ ಘೋಷಿಸಿದ 2021-22ರ ಹೊಸ ಅಬಕಾರಿ ನೀತಿಯು ರಾಷ್ಟ್ರ ರಾಜಧಾನಿಯಲ್ಲಿನ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಬಾರ್‌ಗಳು ನಸುಕಿನ ಜಾವ 3 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.

ದೆಹಲಿ ಸರ್ಕಾರ 2021-22ರ ಹೊಸ ಅಬಕಾರಿ ನೀತಿಯನ್ನು ಸೋಮವಾರ ಪ್ರಕಟಿಸಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿನ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಬಾರ್‌ಗಳನ್ನು ಮುಂಜಾನೆ 3 ಗಂಟೆಯವರೆಗೆ ತೆರೆಯಲು ಅನುವು ಮಾಡಿಕೊಡುತ್ತದೆ. ದೆಹಲಿಯ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಟೆರೇಸ್, ಬಾಲ್ಕನಿ ಸೇರಿದಂತೆ ಪರವಾನಿಗೆ ಪಡೆದ ಆವರಣದೊಳಗಿನ ಯಾವುದೇ ಪ್ರದೇಶದಲ್ಲಿ ಭಾರತೀಯ ಅಥವಾ ವಿದೇಶಿ ಮದ್ಯವನ್ನು ಪೂರೈಸಲು ಸರ್ಕಾರ ಅನುಮತಿ ನೀಡಿದೆ.

2021-22ರ ಅಬಕಾರಿ ನೀತಿಯ ಪ್ರಕಾರ, ನಗರದ ಪ್ರತಿ ಮದ್ಯದಂಗಡಿ ತನ್ನ ಗ್ರಾಹಕರಿಗೆ ಅನೇಕ ಆಯ್ಕೆಗಳ ಬ್ರ್ಯಾಂಡ್‌ಗಳನ್ನು ಹೊಂದಿರುವ ವಾಕ್-ಇನ್ ಅನುಭವವನ್ನು ನೀಡುತ್ತದೆ. ಸಂಪೂರ್ಣ ಆಯ್ಕೆ ಮತ್ತು ಮಾರಾಟ ಪ್ರಕ್ರಿಯೆಯು ಮಾರಾಟದ ಪ್ರಮೇಯದಲ್ಲಿ ಪೂರ್ಣಗೊಳ್ಳುತ್ತದೆ. ಇದರೊಂದಿಗೆ, ಯಾವುದೇ ಮಾರುಕಟ್ಟೆ, ಮಾಲ್, ಶಾಪಿಂಗ್​ ಸ್ಟ್ರೀಟ್, ಸ್ಥಳೀಯ ಶಾಪಿಂಗ್ ಸಂಕೀರ್ಣ ಮತ್ತು ಇತರ ಸ್ಥಳಗಳಲ್ಲಿ ಎಲ್-7ವಿ (ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ತೆರೆಯಬಹುದು ಎಂದು ಈ ನೂತನ ನೀತಿ ಹೇಳುತ್ತದೆ.

ಹೊಸ ಅಬಕಾರಿ ನೀತಿಯ ಪ್ರಕಾರ ದೆಹಲಿಯ 68 ವಿಧಾನಸಭಾ ಕ್ಷೇತ್ರಗಳಲ್ಲಿ 272 ಪುರಸಭೆ ವಾರ್ಡ್‌ಗಳನ್ನು 30 ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಲಯವು ಗರಿಷ್ಠ 27 ಚಿಲ್ಲರೆ ವ್ಯಾಪಾರಿಗಳನ್ನು ಹೊಂದಿರುತ್ತದೆ. ಪ್ರತಿ ವಾರ್ಡ್‌ನಲ್ಲಿ ಸರಾಸರಿ ಮೂರು ಚಿಲ್ಲರೆ ಮದ್ಯ ಮಾರಾಟಗಾರರು ಇರುತ್ತಾರೆ.

ಹೊಸ ಅಬಕಾರಿ ವ್ಯವಸ್ಥೆಯಡಿ, ದೆಹಲಿಯ ಜನರು ನಗರದ ಯಾವುದೇ ಮೈಕ್ರೊ ಬ್ರೂವರಿಯಿಂದ ಹೊಸದಾಗಿ ತಯಾರಿಸಿದ ಬಿಯರ್‌ನೊಂದಿಗೆ ತಮ್ಮ ಬಾಟಲಿಗಳನ್ನು ಅಥವಾ 'ಮದ್ಯವನ್ನು' ತುಂಬಲು ಸಾಧ್ಯವಾಗುತ್ತದೆ. ಡ್ರಾಫ್ಟ್ ಬಿಯರ್ ಅನ್ನು ಬಾರ್‌ಗಳಿಗೆ ಪೂರೈಸಲು ಈ ನೀತಿಯು ಮೈಕ್ರೊ ಬ್ರೂವರೀಸ್‌ಗೆ ಅವಕಾಶ ನೀಡುತ್ತದೆ. "ಡ್ರಾಫ್ಟ್ ಬಿಯರ್ ಅನ್ನು ಬಾಟಲಿಗಳಲ್ಲಿ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದು. ಮದ್ಯ ಸೇವಿಸಲು ಪರವಾನಿಗೆ ಹೊಂದಿರುವ ಇತರ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಮೈಕ್ರೊ ಬ್ರೂವರಿಯನ್ನು ಪೂರೈಸಲು ಸಹ ಅನುಮತಿಸಲಾಗುವುದು" ಎಂದು ಈ ಅಬಕಾರಿ ನೀತಿ ಹೇಳುತ್ತದೆ.

ಹವಾನಿಯಂತ್ರಿತವಾದ ಸಗಟು ಮಾರಾಟ ಪ್ರದೇಶವು ಗಾಜಿನ ಬಾಗಿಲುಗಳನ್ನು ಹೊಂದಿರುತ್ತದೆ. ಗ್ರಾಹಕರು ಮಾರಾಟ ಅಥವಾ ಪಾದಚಾರಿ ಮಾರ್ಗದ ಹೊರಗೆ ಗುಂಪುಗೂಡಲು ಮತ್ತು ಕೌಂಟರ್ ಮೂಲಕ ಖರೀದಿಸಲು ಅನುಮತಿಸುವುದಿಲ್ಲ ಎಂದು ಅದು ಹೇಳಿದೆ. ಮದ್ಯ ಮಾರಾಟಕ್ಕೆ ಪರವಾನಿಗೆ ಪಡೆದವರು ಸಿಸಿಟಿವಿ ಕ್ಯಾಮೆರಾಗಳನ್ನು ಮಾರಾಟ ಜಾಗದ ಒಳಗೆ ಮತ್ತು ಹೊರಗೆ ಅಳವಡಿಸಬೇಕು. ಸಾಕಷ್ಟು ಭದ್ರತಾ ವ್ಯವಸ್ಥೆಗಳ ಹೊರತಾಗಿ ಮಾರಾಟಗಾರರೇ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಆವರಣದ ಸುತ್ತಲಿನ ಭದ್ರತೆಗೆ ಜವಾಬ್ದಾರರಾಗಿರುತ್ತಾರೆ ಎನ್ನುತ್ತದೆ ಈ ಅಬಕಾರಿ ನೀತಿ.

ಒಂದು ವೇಳೆ ಮದ್ಯದ ಅಂಗಡಿಯಿಂದ ನೆರೆಹೊರೆಯವರಿಗೆ ತೊಂದರೆ ಆಗುತ್ತಿರುವುದು ಕಂಡು ಬಂದರೆ ಮತ್ತು ದೆಹಲಿ ಸರ್ಕಾರಕ್ಕೆ ದೂರು ಬಂದರೆ ಪರವಾನಿಗೆ ರದ್ದಾಗುವ ಸಾಧ್ಯತೆ ಇದೆ. ಎಣ್ಣೆ ಅಂಗಡಿ ಆವರಣದಲ್ಲಿ ಮನರಂಜನೆ ಕಾರ್ಯಕ್ರಮ ಪ್ರದರ್ಶನಕ್ಕೆ ಬಾರ್‌ಗಳಿಗೆ ಅನುಮತಿ ನೀಡಲಾಗಿದೆ. ಬಾರ್ ಕೌಂಟರ್‌ನಲ್ಲಿ ತೆರೆದ ಮದ್ಯದ ಬಾಟಲಿಗಳ ಶೆಲ್ಫ್‌ಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಹೊಸ ನೀತಿಯ ಪ್ರಕಾರ, ಬಿಯರ್‌ಗೆ 200 ರೂ.ಗಿಂತ ಹೆಚ್ಚಿನ ಮತ್ತು 1,000 ರೂ.ಗಿಂತ ಹೆಚ್ಚಿನ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬಹುದು. ಇದರಲ್ಲಿ ವಿಸ್ಕಿ,ಜಿನ್ ಸೇರಿದಂತೆ ವೋಡ್ಕಾ, ಬ್ರಾಂಡಿ, ಇತ್ಯಾದಿಗಳನ್ನು ಮಾರಾಟ ಮಾಡಬಹುದು.

ಔತಣಕೂಟ, ಪಾರ್ಟಿ ಸ್ಥಳಗಳು, ಫಾರ್ಮ್‌ಹೌಸ್‌ಗಳು, ಹೋಟೆಲ್‌ಗಳು, ವಿವಾಹ/ಪಾರ್ಟಿ/ಈವೆಂಟ್ ಸ್ಥಳಗಳಿಗೆ ಸರ್ಕಾರವು ಹೊಸ ಪರವಾನಿಗೆ ಎಲ್-38 ಅನ್ನು ಪರಿಚಯಿಸಿದೆ. ನಿಗದಿತ ಹಣ ಪಾವತಿಸಿ ತಮ್ಮ ಆವರಣದಲ್ಲಿ ಆಯೋಜಿಸಲಾಗಿರುವ ಎಲ್ಲಾ ಬಗೆಯ ಸಮಾರಂಭಗಳಿಗೆ ಭಾರತೀಯ ಮತ್ತು ವಿದೇಶಿ ಮದ್ಯವನ್ನು ಪೂರೈಸಲು ಅನುಮತಿ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.