ETV Bharat / bharat

ಆ್ಯಪ್‌, ವೆಬ್‌ಸೈಟ್‌ ಮೂಲಕ ಬುಕ್‌ ಮಾಡಿದವ್ರಿಗೆ ಮನೆ ಬಾಗಿಲಿಗೆ ಮದ್ಯ ಪೂರೈಕೆ

ಪರವಾನಗಿ ಹೊಂದಿರುವ ಬಾರ್​-ವೈನ್​ ಶಾಪ್​ಗಳು ಆನ್​ಲೈನ್​ನಲ್ಲಿ ಮದ್ಯ ಬುಕ್​ ಮಾಡಿದವರಿಗೆ ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ.

Delhi govt allows home delivery of liquor
ಮನೆ ಬಾಗಿಲಿಗೇ ಮದ್ಯ ವಿತರಿಸಲು ದೆಹಲಿ ಸರ್ಕಾರ ಅನುಮತಿ
author img

By

Published : Jun 1, 2021, 1:05 PM IST

ನವದೆಹಲಿ: ಲಾಕ್​ಡೌನ್​ ನಿರ್ಬಂಧಗಳಿಂದ ರಾಷ್ಟ್ರ ರಾಜಧಾನಿಯನ್ನು ಹಂತ ಹಂತವಾಗಿ ಮುಕ್ತಗೊಳಿಸಲು ಮುಂದಾಗಿರುವ ದೆಹಲಿ ಸರ್ಕಾರ ಇದೀಗ ಮದ್ಯ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡಿದವರ ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಅವಕಾಶ ಮಾಡಿಕೊಡುವುದಾಗಿ ಸರ್ಕಾರ ಘೋಷಿಸಿದೆ.

2021ರ ದೆಹಲಿ ಅಬಕಾರಿ (ತಿದ್ದುಪಡಿ) ನಿಯಮದ ಅಡಿಯಲ್ಲಿ ಪರವಾನಗಿ ಹೊಂದಿರುವ ಬಾರ್​-ವೈನ್​ ಶಾಪ್​ಗಳು ಆನ್​ಲೈನ್​ನಲ್ಲಿ ಮದ್ಯ ಬುಕ್​ ಮಾಡಿದವರಿಗೆ ಹೋಂ ಡೆಲಿವರಿ ಮಾಡಬಹುದು. ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಹಡಿ ಮೇಲೆ, ಪ್ರಾಂಗಣಗಳಂತ ತೆರೆದ ಸ್ಥಳಗಳಲ್ಲಿ ಮದ್ಯವನ್ನು ಮಾರಾಟ ಮಾಡಬಹುದು. ಆದರೆ ಒಳಗಡೆ ಯಾರೂ ಕುಳಿತು ಕುಡಿಯುಂತಿಲ್ಲ, ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಗೆ ಲಾಕ್​ಡೌನ್​ನಿಂದ ಮುಕ್ತಿ: ಸೋಮವಾರದಿಂದ ಅನ್​​ಲಾಕ್​​​​ ಪ್ರಕ್ರಿಯೆ ಆರಂಭ

ಕಠಿಣ ಲಾಕ್​ಡೌನ್​ ವಿಧಿಸಿ ರಾಷ್ಟ್ರ ರಾಜಧಾನಿಯಲ್ಲಿನ ಭೀಕರ ಕೋವಿಡ್​ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಶಸ್ವಿಯಾಗಿದ್ದು, ಮೇ 28ರಂದು ಅನ್​​ಲಾಕ್​ನತ್ತ ಹೆಜ್ಜೆ ಹಾಕುತ್ತಿರುವುದಾಗಿ ತಿಳಿಸಿದ್ದರು. ಇದರ ಪ್ರಕಾರ ನಿನ್ನೆ ಸಂಜೆಗೆ ಲಾಕ್‌ಡೌನ್ ನಿಯಮ ಮುಗಿದಿದ್ದು, ದಿನಗೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಚಟುವಟಿಕೆಗಳು ಮತ್ತು ಕಾರ್ಖಾನೆಗಳನ್ನು ಮತ್ತೆ ತೆರೆಯಲು ಅವಕಾಶ ನೀಡುವುದಾಗಿ ಹೇಳಿದ್ದರು.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 648 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಮಾರ್ಚ್​ 19ರ ಬಳಿಕ ರಾಜ್ಯದಲ್ಲಿ ವರದಿಯಾದ ಅತಿ ಕಡಿಮೆ ಕೇಸ್​ ಇದಾಗಿದೆ. ಪಾಸಿಟಿವಿಟಿ ರೇಟ್​ ಶೇ. 0.99ಕ್ಕೆ ಇಳಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.