ETV Bharat / bharat

ಸಾಹಿಲ್‌ ಖಾನ್ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹುಕ್ಕಾ ಪಾರ್ಟಿ! ಗಾಯಕ ಮೂಸೆ ವಾಲಾ ಹಾಡುಗಳಿಗೆ ನೃತ್ಯ - ದೆಹಲಿ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ

ಬಾಲಕಿಯನ್ನು ಬರ್ಬರವಾಗಿ ಕೊಂದ ಆರೋಪಿ ಸಾಹಿಲ್ ಖಾನ್ ಏಪ್ರಿಲ್ 14 ರಂದು ಹಂಚಿಕೊಂಡ ತನ್ನ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹುಕ್ಕಾ ಸೇದುವುದು ಮತ್ತು ಪಂಜಾಬಿ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದು.

Delhi killer Sahils
ಆರೋಪಿ ಸಾಹಿಲ್
author img

By

Published : May 30, 2023, 1:11 PM IST

ನವದೆಹಲಿ: ಇಲ್ಲಿನ ಶಹಬಾದ್‌ ಡೈರಿ ಪ್ರದೇಶದಲ್ಲಿ ಭಾನುವಾರ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಂದ ಆರೋಪಿ ಸಾಹಿಲ್ ಖಾನ್ ಬಗ್ಗೆ ಹಲವು ವಿಷಯಗಳು ಬೆಳಕಿಗೆ ಬರುತ್ತಿವೆ. ಕೊಲೆಯಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ 'ಸೆಲ್ಫ್‌ಮೇಡ್' ಹಾಡನ್ನು ಹಿನ್ನಲೆಯಲ್ಲಿ ಪ್ಲೇ ಮಾಡಿ ಹುಡುಗರ ಗುಂಪೊಂದು ಹುಕ್ಕಾ ಸೇದುತ್ತಿರುವುದನ್ನು ತೋರಿಸುವ ಪೋಸ್ಟ್ ಅನ್ನು ಆತ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ. ಆ ಪೋಸ್ಟ್​ ಇದೀಗ ವೈರಲ್​ ಆಗುತ್ತಿದೆ.

ಆರೋಪಿ sahi.lkhan3600 ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು 400 ಅನುಯಾಯಿಗಳು, 50 ಕ್ಕೂ ಹೆಚ್ಚು ಪೋಸ್ಟ್‌ಗಳು ಅದರಲ್ಲಿವೆ. ಅವನ ಬಯೋದಲ್ಲಿ.."love you dark life... daru lover... Yaaron ki yari... sab per Bhari... 5 July... Love you mom" ಎಂಬ ವಿವರಣೆ ಇದೆ. ಖಾತೆಯು ಸಾರ್ವಜನಿಕವಾಗಿದೆ. ಈ ಖಾತೆಯಲ್ಲಿ ಪೋಸ್ಟ್ ಮಾಡಿದ ಕೊನೆಯ ಪೋಸ್ಟ್‌ನಲ್ಲಿ ಕೊಲೆಗಾರ ಸಾಹಿಲ್‌ನ ನಿಜವಾದ ರೂಪ ಬಯಲಾಗಿದೆ. ಕೊನೆಯ ಪೋಸ್ಟ್‌ನಲ್ಲಿ ಅವನು ಮತ್ತು ಅವನ ಸ್ನೇಹಿತರ ಗುಂಪು ನೃತ್ಯ ಮಾಡುವುದನ್ನು ಮತ್ತು ಹುಕ್ಕಾ ಸೇದುವುದನ್ನು ಕಾಣಬಹುದು. ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ 'ಸೆಲ್ಫ್‌ಮೇಡ್' ಹಾಡನ್ನು ಹಿನ್ನಲೆಯಲ್ಲಿ ಪ್ಲೇ ಮಾಡಲಾಗಿದೆ

ಇದನ್ನೂ ಓದಿ: Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

ಈ ವಿಡಿಯೊವನ್ನು ಸುಮಾರು 6 ವಾರಗಳ ಹಿಂದೆ ಇನ್‌ಸ್ಟಾಗ್ರಾಮ್​​ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದಲ್ಲದೆ ಆತ ಪೋಸ್ಟ್ ಮಾಡಿದ ಕೆಲವು ಹಳೆಯ ಪೋಸ್ಟ್‌ಗಳಲ್ಲಿ, ಸಾಹಿಲ್ ಮತ್ತು ಅವನ ಕೆಲವು ಸ್ನೇಹಿತರು ಹುಕ್ಕಾ ಸೇದುವುದನ್ನು ಕಾಣಬಹುದು. ಇದಲ್ಲದೆ ಖಾತೆಯಲ್ಲಿ ಲಭ್ಯವಿರುವ ಒಂದು ವರ್ಷದ ಹಿಂದಿನ ಹಳೆಯ ಪೋಸ್ಟ್ ಹೈಲೈಟ್ ಆಗಿದೆ. ಅದರಲ್ಲಿ ಸಿಧು ಮೂಸೆ ವಾಲಾ ಅವರ ಸಾವಿನ ಬಗ್ಗೆ ಸಂತಾಪ ಸೂಚಿಸಿದೆ. ಸಾಹಿಲ್ ಪೋಸ್ಟ್‌ನಲ್ಲಿ "ರಿಪ್ ಪಾಜಿ" ಎಂದು ಬರೆದಿದ್ದಾನೆ.

ಕಳೆದ ವರ್ಷ ಪಂಜಾಬಿನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಖ್ಯಾತ ಪಂಜಾಬಿ ರಾಪ್ ಗಾಯಕ ಸಿಧು ಮೂಸೆ ವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. 424 ಮಂದಿ ಸೇರಿದಂತೆ ಪಂಜಾಬ್ ಪೊಲೀಸರು ಅವರ ಭದ್ರತೆಯನ್ನು ಹಿಂಪಡೆದ ಒಂದು ದಿನದ ನಂತರ ಈ ಘಟನೆ ನಡೆದಿತ್ತು.

ಅಪ್ರಾಪ್ತೆಯನ್ನು ಹತ್ಯೆಗೈದಿದ್ದ ಆರೋಪಿ: ದೆಹಲಿಯ ಶಹಬಾದ್‌ ಡೈರಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಆರೋಪಿ ಸಾಹಿಲ್​ 16 ವರ್ಷದ ಬಾಲಕಿಗೆ ಸುಮಾರು 20 ಬಾರಿ ಚಾಕುವಿನಿಂದ ಇರಿದು ಬಳಿಕ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ಜನದಟ್ಟಣೆ ನಡುವೆಯೇ ಕೃತ್ಯ ನಡೆದಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಸಾಹಿಲ್ ವಿರುದ್ಧ ದೆಹಲಿ ಪೊಲೀಸರು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಗಳನ್ನು ಬರ್ಬರವಾಗಿ ಕೊಂದ ಸಾಹಿಲ್‌ ಖಾನ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೋಷಕರ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.