ETV Bharat / bharat

Omicron ಪೀಡಿತ ರಾಷ್ಟ್ರಗಳಿಂದ ಬರುವ ವಿಮಾನಗಳನ್ನ ನಿಷೇಧಿಸಿ : ಪ್ರಧಾನಿಗೆ ದೆಹಲಿ ಸಿಎಂ ಪತ್ರ - ದೇಶದಲ್ಲಿ ಓಮಿಕ್ರೋನ್ ಆತಂಕ

ಕೊರೊನಾ ವಾರಿಯರ್ಸ್​ನ ತ್ಯಾಗದಿಂದ ದೇಶ ಮತ್ತೆ ಪುನಶ್ಚೇತನಗೊಳ್ಳುತ್ತಿದೆ. ಈಗ ಬೇರೆ ರಾಷ್ಟ್ರಗಳಿಂದ ಬರುವ ವಿಮಾನಗಳನ್ನು ತಡೆಯದಿದ್ದರೆ, ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ ಎಂದು ಅರವಿಂದ ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ..

Delhi CM seeks PM to stop flights coming to India from Omicron affected regions
Omicron ಪೀಡಿತ ರಾಷ್ಟ್ರಗಳಿಂದ ಬರುವ ವಿಮಾನಗಳ ನಿಷೇಧಿಸಿ: ಪ್ರಧಾನಿಗೆ ದೆಹಲಿ ಸಿಎಂ ಪತ್ರ
author img

By

Published : Nov 28, 2021, 8:14 PM IST

ನವದೆಹಲಿ : ಕೋವಿಡ್ ವೈರಸ್​ನ ಹೊಸ ತಳಿಯಾದ ಓಮಿಕ್ರೋನ್ ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿದೆ. ಓಮಿಕ್ರೋನ್ ವೈರಸ್ ಪೀಡಿತ ರಾಷ್ಟ್ರಗಳಿಂದ ಬರುವ ವಿಮಾನಗಳನ್ನು ನಿಷೇಧಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅರವಿಂದ್ ಕೇಜ್ರಿವಾಲ್ ತಡ ಮಾಡಿದರೆ ಅಪಾಯದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶ ಒಂದೂವರೆ ವರ್ಷದಿಂದ ಕೊರೊನಾ ವಿರುದ್ಧ ಹೋರಾಡಿದೆ.

ಕೊರೊನಾ ವಾರಿಯರ್ಸ್​ನ ತ್ಯಾಗದಿಂದ ದೇಶ ಮತ್ತೆ ಪುನಶ್ಚೇತನಗೊಳ್ಳುತ್ತಿದೆ. ಈಗ ಬೇರೆ ರಾಷ್ಟ್ರಗಳಿಂದ ಬರುವ ವಿಮಾನಗಳನ್ನು ತಡೆಯದಿದ್ದರೆ, ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ ಎಂದು ಅರವಿಂದ ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Delhi CM seeks PM to stop flights coming to India from Omicron affected regions
ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂಗೆ ಬರೆದಿರುವ ಪತ್ರ

ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ಸೋಮವಾರ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯನ್ನು ಕರೆದಿದ್ದು, ಹೊಸ ತಳಿಯಾದ ಓಮಿಕ್ರೋನ್ ಬಗ್ಗೆ ಚರ್ಚಿಸಿ, ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Omicron variant ಕೋವಿಡ್ ಲಸಿಕೆಗಳಿಗೆ ಮಣಿಯದೇ ಇರಬಹುದು: ಏಮ್ಸ್​ ಮುಖ್ಯಸ್ಥ ಎಚ್ಚರಿಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.