ETV Bharat / bharat

ದೆಹಲಿಯಲ್ಲಿ BS-III ಪೆಟ್ರೋಲ್​, BS-IV ಡೀಸೆಲ್ ವಾಹನ ಸಂಚಾರ ಬಂದ್​ - BS III ಪೆಟ್ರೋಲ್

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಹದಗೆಡುತ್ತಿರುವ ಗಾಳಿ ಗುಣಮಟ್ಟದಿಂದಾಗಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದನ್ವಯ ದೆಹಲಿ ಸರ್ಕಾರವು ನಾಲ್ಕು ಚಕ್ರದ ವಾಹನಗಳ ಮೇಲೆ ನಿಯಂತ್ರಣ ಆದೇಶ ಹೊರಡಿಸಿದೆ.

Delhi NCR air pollution  Centre bans non essential  ಗಾಳಿಯ ಗುಣಮಟ್ಟ  BS III ಪೆಟ್ರೋಲ್  BS IV ಡೀಸೆಲ್  ನಿಷೇಧಿಸಲು ಆದೇಶ
ರಾಷ್ಟ್ರ ರಾಜಧಾನಿ
author img

By PTI

Published : Jan 15, 2024, 8:13 AM IST

ನವದೆಹಲಿ: ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ನಗರದಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ (4 ಚಕ್ರಗಳು) ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿದೆ. ಜನವರಿ 2ರಂದು ಸಾರಿಗೆ ಇಲಾಖೆಯು ಈ ನಿರ್ಬಂಧಗಳನ್ನು ತೆಗೆದುಹಾಕಿತ್ತು.

ಡಿ.22ರಂದು GRAP-3 ಜಾರಿಗೆ ಕೇಂದ್ರ ಸರ್ಕಾರ ಆದೇಶಿಸಿತ್ತು. ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟವು ಹಲವಾರು ದಿನಗಳವರೆಗೆ 'ತೀವ್ರ' ಕಳಪೆ ವರ್ಗದಲ್ಲಿತ್ತು. ಹೀಗಾಗಿ, ಗಾಳಿಯ ಗುಣಮಟ್ಟವನ್ನು ನಿಯಂತ್ರಿಸಲು ಡಿಸೆಂಬರ್ 22ರಂದು ಕ್ರಮ ಕೈಗೊಳ್ಳಲಾಗಿತ್ತು. ಜನವರಿ 2ರಂದು ಈ ನಿಷೇಧ ಹಿಂತೆಗೆದುಕೊಂಡ ನಂತರ ಭಾನುವಾರ ಮತ್ತೆ ವಿಧಿಸಲಾಗಿದೆ. ವಾಯು ಗುಣಮಟ್ಟವನ್ನು ನಾಲ್ಕು ಹಂತಗಳಲ್ಲಿ ಅಳೆಯಲಾಗುತ್ತದೆ.

  1. ಹಂತ 1-AQI ಮಟ್ಟ 201ರಿಂದ 300ರ ನಡುವೆ (ಕಳಪೆ ಗುಣಮಟ್ಟ)
  2. ಹಂತ 2-AQI ಮಟ್ಟ 301ರಿಂದ 400ರ ನಡುವೆ (ತುಂಬಾ ಕಳಪೆ)
  3. ಹಂತ 3-AQI ಮಟ್ಟ 401ರಿಂದ 450ರ ನಡುವೆ (ತೀವ್ರ ಕಳಪೆ)
  4. ಹಂತ 4-AQI ಮಟ್ಟ 450ಕ್ಕಿಂತ ಹೆಚ್ಚು (ಗಂಭೀರ)

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಶೀತ ವಾತಾವರಣದ ನಡುವೆ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಭಾನುವಾರ 'ತೀವ್ರ' ಹಂತ ತಲುಪಿದೆ. "ಉಪ-ಸಮಿತಿಯು ಸಂಪೂರ್ಣ ಎನ್‌ಸಿಆರ್‌ನಲ್ಲಿ ಪರಿಷ್ಕೃತ GRAP-3 ರ ಪ್ರಕಾರ 8 ಅಂಶಗಳ ಕ್ರಿಯಾ ಯೋಜನೆಯನ್ನು ತಕ್ಷಣವೇ ಜಾರಿಗೆ ತರಲು ನಿರ್ಧರಿಸಿದೆ" ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದ ನಂತರ, ಜನವರಿ 1ರಂದು ನಿಷೇಧ ತೆಗೆದುಹಾಕಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಆನಂದ್ ವಿಹಾರ್‌ನಲ್ಲಿ ಎಕ್ಯೂಐ 478, ಜೆಎಲ್‌ಎನ್ ಸ್ಟೇಡಿಯಂನಲ್ಲಿ 465, ಐಜಿಐ ಏರ್‌ಪೋರ್ಟ್‌ನಲ್ಲಿ (ಟಿ3) 465 ಮತ್ತು ಐಟಿಒ ದೆಹಲಿಯಲ್ಲಿ 455 ದಾಖಲಾಗಿತ್ತು. ಹೀಗಾಗಿ ನಗರ ಮತ್ತು ಎನ್‌ಸಿಆರ್‌ನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ದೆಹಲಿ ಹಾಗು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅನಿವಾರ್ಯವಲ್ಲದ ನಿರ್ಮಾಣ ಕಾರ್ಯ ಮತ್ತು BS-III ಪೆಟ್ರೋಲ್ ಮತ್ತು BS-IV ಡೀಸೆಲ್ ನಾಲ್ಕು ಚಕ್ರಗಳ ವಾಹನಗಳ ಓಡಾಟವನ್ನು ಭಾನುವಾರ ನಿಷೇಧಿಸಲಾಗಿದೆ.

ದೆಹಲಿ ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ, ಮೋಟಾರು ವಾಹನಗಳ ಕಾಯಿದೆ, 1988ರ ಸೆಕ್ಷನ್ 115ರ ಅಡಿಯಲ್ಲಿ ನೀಡಲಾದ ನಿರ್ದೇಶನಗಳಿಗೆ ಅನುಸಾರವಾಗಿ, BS-III ಪೆಟ್ರೋಲ್ ಮತ್ತು BS-IV ಡೀಸೆಲ್ LMVಗಳನ್ನು (ನಾಲ್ಕು ಚಕ್ರಗಳು) ದೆಹಲಿ ಎನ್‌ಸಿಟಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ (ತುರ್ತು ಸೇವೆಗಳಲ್ಲಿ ನಿಯೋಜಿಸಲಾದ ವಾಹನಗಳು, ಪೊಲೀಸ್ ವಾಹನಗಳು ಮತ್ತು ಸರ್ಕಾರಿ ವಾಹನಗಳನ್ನು ಹೊರತುಪಡಿಸಿ) ನಿಷೇಧಿಸಲಾಗಿದೆ.

ಯಾವುದೇ BS-III ಪೆಟ್ರೋಲ್ ಮತ್ತು BS-IV ಡೀಸೆಲ್ LMVಗಳು (ನಾಲ್ಕು ಚಕ್ರದ ವಾಹನಗಳು) ರಸ್ತೆಯಲ್ಲಿ ಸಂಚರಿಸಿದರೆ, ಮೋಟಾರು ವಾಹನ ಕಾಯ್ದೆ, 1988ರ ಸೆಕ್ಷನ್ 194 (1)ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಇದರ ಜೊತೆಗೆ, 20 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಕಾರುಗಳ ನಡುವೆ ಭೀಕರ ಅಪಘಾತ: 6 ಜನರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.