ಉಧಗಮಂಡಲಂ(ತಮಿಳುನಾಡು): ರಾಷ್ಟ್ರೀಯ ಭದ್ರತೆಗಾಗಿ ರಕ್ಷಣಾ ಸಿಬ್ಬಂದಿ ಸದಾ ಸವಾಲುಗಳ ಮೇಲೆಯೇ ವಾಸಿಸುತ್ತಿರುತ್ತಾರೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾನ್ ಹೇಳಿದರು. ತಮಿಳುನಾಡಿನ ಕೂನಾರಿನಲ್ಲಿರುವ ಆರ್ಮಿ ಕಾಲೇಜಿನಲ್ಲಿಂದು ಅವರು ಮಾತನಾಡಿದರು.
ವೆಲ್ಲಿಂಗ್ಟನ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನ (ಡಿಎಸ್‌ಎಸ್‌ಸಿ) ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡುತ್ತಾ, ಸಶಸ್ತ್ರ ಪಡೆಗಳನ್ನು ಬಲಪಡಿಸಲು ಸರ್ಕಾರದ ವಿವಿಧ ಉಪಕ್ರಮಗಳ ಬಗೆಗೂ ಮಾಹಿತಿ ಹಂಚಿಕೊಂಡರು. ಕಾಲೇಜಿನ ವಿವಿಧ ತರಬೇತಿ ಚಟುವಟಿಕೆಗಳ ಅವಲೋಕನ ಮಾಡಿ, ಅಗತ್ಯ ಮೂಲಸೌಕರ್ಯಗಳನ್ನು ನವೀಕರಿಸಲು ಸೇನಾಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:ಭಾರತ ನೇಪಾಳ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ: ಕಲ್ಲು ತೂರಾಟ, ಭಾರತೀಯ ಕಾರ್ಮಿಕನಿಗೆ ಗಾಯ