ETV Bharat / bharat

ಸ್ಪುಟ್ನಿಕ್​ ಲಸಿಕೆ ಮೊದಲ ಡೋಸ್ ಪಡೆದಿದ್ದು ಯಾರು ಗೊತ್ತಾ? - ರಷ್ಯಾದ ಸ್ಪುಟ್ನಿಕ್​ ವಿ

ಡೆಡ್ಲಿ ವೈರಸ್ ಕೊರೊನಾ ವಿರುದ್ಧ ಹೋರಾಡಲು ಇಂದಿನಿಂದ ಮಾರುಕಟ್ಟೆಗೆ ಸ್ಪುಟ್ನಿಕ್​-ವಿ ಲಗ್ಗೆ ಹಾಕಿದ್ದು, ಹೈದರಾಬಾದ್​ನಲ್ಲಿ ಫಲಾನುಭವಿಗೆ ಮೊದಲ ಡೋಸ್ ನೀಡಲಾಗಿದೆ.

Deepak Sapra
Deepak Sapra
author img

By

Published : May 14, 2021, 4:47 PM IST

ಹೈದರಾಬಾದ್​: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಇದೀಗ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ಮಾರುಕಟ್ಟೆಗೆ ಲಗ್ಗೆ ಹಾಕಿದ್ದು, ಇಂದು ಹೈದರಾಬಾದ್​ನ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್​ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಶೇ. 91.6ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಲಸಿಕೆಯ ಮೊದಲ ಡೋಸ್​ನ ರೆಡ್ಡೀಸ್​​ ಲ್ಯಾಬ್​ನ ಕಸ್ಟಮ್​ ಫಾರ್ಮಾ ಸರ್ವೀಸಸ್​ನ ಜಾಗತಿಕ ಮುಖ್ಯಸ್ಥ ದೀಪಕ್​ ಸಪ್ರಾ ಪಡೆದುಕೊಂಡಿದ್ದಾರೆ.

  • First doses of Sputnik V administered in India. Deepak Sapra, Global Head of Custom Pharma Services at Dr Reddy's Laboratories receives the first jab of the vaccine in Hyderabad: Sputnik V#COVID19 pic.twitter.com/95eOT6gGWR

    — ANI (@ANI) May 14, 2021 " class="align-text-top noRightClick twitterSection" data=" ">

ರಷ್ಯಾದಿಂದ ಈ ಲಸಿಕೆ ಭಾರತಕ್ಕೆ ಮೇ 1ರಂದು ಆಗಮಿಸಿದ್ದು, ಇದಾದ ಬಳಿಕ ಮೇ 13ರಂದು ಕೇಂದ್ರ ಔಷಧ ಪ್ರಯೋಗಾಲಯದಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಈ ಲಸಿಕೆ ಭಾರತದಲ್ಲೇ ಉತ್ಪಾದನೆಯಾಗಲಿದ್ದು, ಈ ವೇಳೆ ಬೆಲೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಸದ್ಯ ಪ್ರತಿ ಡೋಸ್​ನ ಬೆಲೆ 995 ರೂ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕೋವಿಡ್ ಮಹಾಮಾರಿಗೆ 5 ತಿಂಗಳ ಮಗು ಬಲಿ; ಹೆಚ್ಚಿದ ಆತಂಕ

ಭಾರತದಲ್ಲಿ ಈಗಾಗಲೇ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಇದರ ಕೊರತೆ ಕಂಡು ಬಂದಿರುವ ನಡುವೆ ಇದೀಗ ಸ್ಪುಟ್ನಿಕ್​ ವಿ ಲಸಿಕೆ ಮಾರುಕಟ್ಟೆಗೆ ಬಿಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.