ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಅವರಿಗೆ Email ಮೂಲಕ ಜೀವ ಬೆದರಿಕೆ ಹಾಕಲಾಗಿದ್ದು, ಈ ಕುರಿತು ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಪೊಲೀಸ್ ಠಾಣೆ ಹಾಗೂ ಜಿಲ್ಲಾ DCPಗೆ ದೂರು ನೀಡಿದ್ದಾರೆ.
ಐಸಿಸ್ ಭಯೋತ್ಪಾದಕ ಸಂಘಟನೆ ಕಾಶ್ಮೀರದಿಂದ ತನಗೆ ಜೀವ ಬೆದರಿಕೆ ಇ-ಮೇಲ್ ಕಳುಹಿಸಿದೆ ಎಂದು ಗೌತಮ್ ಗಂಭೀರ್ ಆರೋಪ ಮಾಡಿದ್ದು, ಕುಟುಂಬಕ್ಕೂ ಬೆದರಿಕೆ ಬಂದಿರುವ ಕಾರಣದಿಂದ ಪ್ರಸ್ತುತ ಅವರು ವಾಸವಿರುವ ರಾಜೇಂದ್ರ ನಗರದ ಮನೆಗೆ ಭದ್ರತೆ ನೀಡಲಾಗಿದೆ ಎಂದು ಡಿಸಿಪಿ ಶ್ವೇತ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮೇಲ್‌ನಲ್ಲಿ ಬಂದಿರುವ ಬೆದರಿಕೆಯ ಬಗ್ಗೆ ಕೇಂದ್ರ ಜಿಲ್ಲಾ ಪೊಲೀಸರು ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ ಮಾಹಿತಿ ನೀಡಿದ್ದಾರೆ. ಅವರ ಮಟ್ಟದಲ್ಲೂ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Video: ಮೃಗಾಲಯದಲ್ಲಿ ಸಿಂಹದ ಆವರಣ ಪ್ರವೇಶಿಸಿದ ಯುವಕನ ರಕ್ಷಣೆ