ETV Bharat / bharat

ನಿಠಾರಿ ಕೇಸ್​: ಸರಣಿ ಹಂತಕ ಸುರೇಂದ್ರ ಕೋಲಿಗೆ 13ನೇ ಬಾರಿಗೆ ಮರಣದಂಡನೆ - ಸರಣಿ ಹಂತಕ ಸುರೇಂದ್ರ ಕೋಲಿಗೆ 13ನೇ ಬಾರಿಗೆ ಮರಣದಂಡನೆ

ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ 16 ಪ್ರಕರಣದಲ್ಲಿ 13 ನೇ ಬಾರಿಗೆ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದಾನೆ. ಈತನ ಸಹಚರ ಮಣಿಂದರ್ ಸಿಂಗ್ ಪಂಧೇರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗಾಜಿಯಾಬಾದ್​ ಕೋರ್ಟ್​ ಆದೇಶಿಸಿದೆ.

death-sentence
ಸುರೇಂದ್ರ ಕೋಲಿಗೆ 13ನೇ ಬಾರಿಗೆ ಮರಣದಂಡನೆ
author img

By

Published : May 19, 2022, 7:18 PM IST

ನವದೆಹಲಿ/ಗಾಜಿಯಾಬಾದ್: ಮಕ್ಕಳ ಸರಣಿ ಹತ್ಯೆಗೆ ಕಾರಣವಾಗಿದ್ದ ಕುಖ್ಯಾತ ನಿಠಾರಿ ಪ್ರಕರಣಗಳಲ್ಲಿ ಸರಣಿ ಹಂತಕ ಸುರೇಂದ್ರ ಕೋಲಿಗೆ 16ನೇ ಪ್ರಕರಣದಲ್ಲೂ ದೋಷಿ ಎಂದು ಸಾಬೀತಾಗಿ ಮರಣದಂಡನೆ ವಿಧಿಸಲಾಗಿದೆ. ಇದು ಸುರೇಂದ್ರ ಕೋಲಿ ವಿರುದ್ಧದ 13 ನೇ ಮರಣದಂಡನೆ ಶಿಕ್ಷೆಯಾಗಿದೆ. ಈ ಮೂಲಕ ದೇಶದ ಇತಿಹಾಸಲ್ಲಿಯೇ ಅತ್ಯಧಿಕ ಮರಣದಂಡನೆಗೆ ಒಳಗಾದ ಹಂತಕನಾಗಿದ್ದಾನೆ.

ಗಾಜಿಯಾಬಾದ್​ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ 16 ಪ್ರಕರಣಗಳಲ್ಲಿ 14 ನೇ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಶಿಕ್ಷೆಯನ್ನು ಕಾದಿರಿಸಿತ್ತು. ಇಂದು ಶಿಕ್ಷೆ ಪ್ರಕಟಿಸಿದ್ದು, ಸುರೇಂದ್ರ ಕೋಲಿಗೆ ಮತ್ತೊಂದು ಮರಣದಂಡನೆ ಶಿಕ್ಷೆ ವಿಧಿಸಿದರೆ, ಇನ್ನೊಬ್ಬ ಆರೋಪಿ ಮಣಿಂದರ್ ಸಿಂಗ್ ಪಂಧೇರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಸರ್ಕಾರಿ ವಕೀಲರು, ನಿಠಾರಿ ಘಟನೆಗೆ ಸಂಬಂಧಿಸಿದಂತೆ 16 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುರೇಂದ್ರ ಕೋಲಿ 14 ಪ್ರಕರಣಗಳಲ್ಲಿ ದೋಷಿಯಾಗಿದ್ದರೆ, ಮಣಿಂದರ್ ಸಿಂಗ್ ಪಂಧೇರ್ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳಲ್ಲಿ ಎರಡರಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ತಿಳಿಸಿದರು.

ನೋಯ್ಡಾದ ನಿಠಾರಿಯಲ್ಲಿ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಮಾಡುತ್ತಿದ್ದ ಸುರೇಂದ್ರ ಕೋಲಿ ಬಳಿಕ ಕೊಲೆ ಮಾಡಿ ಚರಂಡಿಗೆ ಬಿಸಾಡುತ್ತಿದ್ದ. ಈತನ ವಿರುದ್ಧ 17 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 16 ಕೇಸ್​ಗಳು ಇತ್ಯರ್ಥವಾಗಿವೆ.

ಓದಿ: ಭಯೋತ್ಪಾದನೆಗೆ ನೆರವು: ಯಾಸಿನ್​ ಮಲಿಕ್​ 'ದೋಷಿ' ಎಂದು ದೆಹಲಿ ವಿಶೇಷ ಕೋರ್ಟ್​ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.