ETV Bharat / bharat

ಶವಾಗಾರದಲ್ಲಿ ಮೃತದೇಹ ಕೊಡಲು 800 ರೂ.ಗೆ ಬೇಡಿಕೆಯಿಟ್ಟ ಆರೋಪ: ವಿಡಿಯೋ ವೈರಲ್​ - ಫತೇಪುರ್ ಶವಾಗಾರ

ಫತೇಪುರ್ ಶವಾಗಾರದಲ್ಲಿ ಶವವನ್ನು ಕೊಡುವಾಗ ಇಬ್ಬರು ವ್ಯಕ್ತಿಗಳು ಎಂಟು ನೂರು ರೂಪಾಯಿಗೆ ಬೇಡಿಕೆಯಿಟ್ಟ ವಿಡಿಯೋವೊಂದು ವೈರಲ್​ ಆಗಿದೆ.

viral video
ವಿಡಿಯೋ ವೈರಲ್​
author img

By ETV Bharat Karnataka Team

Published : Dec 22, 2023, 12:47 PM IST

ವೈರಲ್​ ವಿಡಿಯೋ

ಫತೇಪುರ, ಉತ್ತರಪ್ರದೇಶ : ಫತೇಪುರ ಜಿಲ್ಲೆಯ ಶವಾಗಾರದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೃತ ದೇಹವನ್ನು ಕೊಡಲು ಇಬ್ಬರು ವ್ಯಕ್ತಿಗಳು ಎಂಟು ನೂರು ರೂಪಾಯಿಗೆ ಬೇಡಿಕೆ ಇಡುತ್ತಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಘಟನೆ ಕುರಿತು ಸಿಎಂಒ ಅವರಿಗೆ ಮಾಹಿತಿ ನೀಡಲಾಗಿದೆ. ವಿಡಿಯೋ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ, ತನಿಖೆ ನಂತರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂಒ ಅಶೋಕ್ ಕುಮಾರ್ ಹೇಳಿದ್ದಾರೆ. (ಆದರೆ 'ಈಟಿವಿ ಭಾರತ' ಈ ವೈರಲ್ ವಿಡಿಯೋವನ್ನು ಖಚಿತಪಡಿಸುತ್ತಿಲ್ಲ. ಇದು ವೈರಲ್​ ವಿಡಿಯೋ ಆಗಿದ್ದು, ಖಚಿತತೆ ಸಿಕ್ಕಿಲ್ಲ)

ವೈರಲ್​ ವಿಡಿಯೋದಲ್ಲೇನಿದೆ? : ಫತೇಪುರ್ ಜಿಲ್ಲಾ ಆಸ್ಪತ್ರೆಯ ಶವಾಗಾರದ ವೈರಲ್​ ವಿಡಿಯೋದಲ್ಲಿ ಶವಾಗಾರದಲ್ಲಿದ್ದ ಇಬ್ಬರು ಮೃತದೇಹವನ್ನು ಹಸ್ತಾಂತರಿಸಲು ಎಂಟು ನೂರು ರೂಪಾಯಿಗಳನ್ನು ಕೇಳಿದ್ದಾರೆ. ಈ ವಿಚಾರವಾಗಿ ಮೃತರ ಕುಟುಂಬದವರೊಂದಿಗೆ ಜಗಳವಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಆರೋಗ್ಯ ಇಲಾಖೆಯಲ್ಲಿ ಸಂಚಲನ ಮೂಡಿದ್ದು, ಕೂಡಲೇ ವಿಡಿಯೋ ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಿಎಂಒ ಸೂಚಿಸಿದ್ದಾರೆ. ಹಣ ಕೇಳಿರುವವರ ಹೆಸರು ಆದಿಲ್ ಮತ್ತು ಹಣ ಪಡೆದವರ ಹೆಸರು ಮುನ್ನಾ ಎಂದು ಹೇಳಲಾಗಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯೊಂದಿಗೆ ಮಹಿಳೆ ವಾಗ್ವಾದ ; ವಿಡಿಯೋ ವೈರಲ್

ಈ ಕುರಿತು ಮಾತನಾಡಿರುವ ಸಿಎಂಒ ಅಶೋಕ್ ಕುಮಾರ್, "ಈ ವಿಚಾರ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸಿಎಂ ಜತೆ ಮಾತನಾಡಿದ್ದೇನೆ. ಯಾವುದೇ ಮೃತದೇಹ ಆಸ್ಪತ್ರೆಗೆ ಸೇರಿದ್ದರೂ ಅದನ್ನು ಆಸ್ಪತ್ರೆಯ ಆವರಣದಲ್ಲಿಯೇ ಇರಿಸಲಾಗುತ್ತದೆ. ಶವಾಗಾರದ ಮನೆಯಲ್ಲಿ ಇಬ್ಬರು ಪುರುಷರಿದ್ದಾರೆ. ವಿಡಿಯೋದಲ್ಲಿ ಪುರುಷರ ಧ್ವನಿ ಕೇಳುತ್ತಿದೆ. ಹಾಗೂ ಒಬ್ಬರು ಹಣ ಕೇಳುವುದನ್ನು ಸಹ ಕಾಣಬಹುದು. ಮುಂದೆ ಮತ್ತೊಬ್ಬ ವ್ಯಕ್ತಿ ನಿಂತಿದ್ದಾನೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ : ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆ ಓಡಿಸಲು ಯತ್ನಿಸಿದ ಯುವಕ : ವಿಡಿಯೋ ವೈರಲ್​

ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಬಳಿಕವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ. ಮತ್ತು ಈ ವಿಡಿಯೋ ಅಸಲಿಯೋ - ನಕಲಿಯೋ ಎಂಬ ಬಗ್ಗೆಯೂ ತನಿಖೆ ಆಗಬೇಕಾದ ಅಗತ್ಯ ಇದೆ. ಶವಾಗಾರದ ಅವ್ಯವಸ್ಥೆಗಳ ಬಗ್ಗೆ ದೇಶದ ನಾನಾ ಭಾಗಗಳಿಂದ ಇಂತಹದೇ ವರದಿಗಳು ಆಗಾಗ ಬರುತ್ತಲೇ ಇರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.