ಗುಜರಾತ್: ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ನೇಮಕಗೊಂಡಿದ್ದಾರೆ. ಭೂಪೇಂದ್ರಗೆ ಹಿರಿಯ ನಾಯಕರು, ವರಿಷ್ಠರು ಸೇರಿ ಹಲವಾರು ಮಂದಿ ಶುಭ ಕೋರಿದ್ದಾರೆ. ಇಂದು ಭೂಪೇಂದ್ರ ಪಟೇಲ್ರನ್ನು ಭೇಟಿ ಮಾಡಿದ ಡಿಸಿಎಂ ನಿತಿನ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ನಿತಿನ್ ಪಟೇಲ್, ಭೂಪೇಂದ್ರ ಪಟೇಲ್ ನನ್ನ ಕುಟುಂಬದ ಹಳೆಯ ಸ್ನೇಹಿತ. ಅವರಿಗೆ ಅಭಿನಂದಿಸುವ ನಿಟ್ಟಿನಲ್ಲಿ ಭೇಟಿ ಮಾಡಿದ್ದೆ. ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡವುದಕ್ಕೆ ನಮಗೆ ತುಂಬಾ ಸಂತೋಷವಿದೆ. ಅಗತ್ಯವಿದ್ದಾಗ ಅವರು ನನ್ನ ಮಾರ್ಗದರ್ಶನವನ್ನೂ ಕೇಳಿದ್ದಾರೆ ಎಂದರು.
ಇದನ್ನೂ ಓದಿ: ಮೋದಿಯಂತೆಯೇ ‘ಯೋಗಿ’ಯೂ.. ಉತ್ತರಪ್ರದೇಶ ಡಿಸಿಎಂ ಹೀಗಂದಿದ್ಯಾಕೆ?
ಕಳೆದ ಮೂರು ದಿನಗಳ ಹಿಂದೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದರು. 2022 ರ ಡಿಸೆಂಬರ್ನಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು, ಹೈಕಮಾಂಡ್ನ ಈ ನಿರ್ಧಾರ ಭಾರಿ ಕುತೂಹಲ ಮೂಡಿಸಿದೆ.