ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನನ್ನು ಶುಕ್ರವಾರ ಮುಂಬೈನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅವರನ್ನು 7 ದಿನಗಳ ಇಡಿ ವಶಕ್ಕೆ ನೀಡಿ ಆದೇಶಿಸಿತು.
ಥಾಣೆ ಜೈಲಿನಲ್ಲಿದ್ದ ಕಸ್ಕರ್ನನ್ನು ಜಾರಿ ನಿರ್ದೇಶನಾಲಯ ಇಂದು ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ವಾರದ ಆರಂಭದಲ್ಲಿ, ಕಸ್ಕರ್ನನ್ನು ಪ್ರಶ್ನಿಸಲು ಅನುಮತಿ ಕೋರಿ ಇಡಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ವೆಸ್ಟ್ ಬೆಂಗಾಲ್ ರಾಜ್ಯಪಾಲ ಧನಕರ್ ವಜಾಗೊಳಿಸಲು ಕೋರಿದ್ದ ಪಿಐಎಲ್ ತಿರಸ್ಕೃತ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋರ್ಟ್ ನಿರ್ದೇಶನದಂತೆ 7 ದಿನಗಳ ಕಾಲ ಇಕ್ಬಾಲ್ ಕಸ್ಕರ್ನನ್ನು ಇಡಿ ವಶಕ್ಕೆ ಪಡೆದಿದ್ದು, ಪ್ರಕರಣದ ವಿಚಾರಣೆ ನಡೆಸಲಿದೆ. ಕಸ್ಕರ್ ವಿರುದ್ಧ 2017 ರಲ್ಲಿ ಥಾಣೆ ಪೊಲೀಸರು ಮೂರು ಸುಲಿಗೆ ಪ್ರಕರಣಗಳನ್ನು ದಾಖಲಿಸಿ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಆರೋಪ ಹೊರಿಸಿ ಜೈಲಿನಲ್ಲಿಟ್ಟಿದ್ದರು.