ETV Bharat / bharat

ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಮಗಳು ಸಾವು ಆರೋಪ: ₹1000 ಕೋಟಿ ರೂ. ಪರಿಹಾರ ಕೇಳಿ ಹೈಕೋರ್ಟ್​ಗೆ ಅರ್ಜಿ - ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಮಗಳು ಸಾವು

ಕೋವಿಡ್​ ವ್ಯಾಕ್ಸಿನೇಷನ್ ಪಡೆದುಕೊಂಡ ನಂತರ ಆಗಿರುವ ಅಡ್ಡ ಪರಿಣಾಮಗಳಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪಿಸಿ ವ್ಯಕ್ತಿಯೋರ್ವ ಹೈಕೋರ್ಟ್​​ನಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

Man seeks Rs 1,000 crore compensation
Man seeks Rs 1,000 crore compensation
author img

By

Published : Feb 1, 2022, 10:28 PM IST

ಮುಂಬೈ(ಮಹಾರಾಷ್ಟ್ರ): ಕೊರೊನಾ ಮಹಾಮಾರಿಗೋಸ್ಕರ ನೀಡಲಾಗುವ ಕೋವಿಡ್​ ವ್ಯಾಕ್ಸಿನ್ ಡೋಸ್​​​ನ ಅಡ್ಡ ಪರಿಣಾಮದಿಂದಾಗಿ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪ ಮಾಡಿರುವ ತಂದೆಯೋರ್ವ, ಕೇಂದ್ರ ಸರ್ಕಾರದಿಂದ ಸಾವಿರ ಕೋಟಿ ರೂ. ಪರಿಹಾರಕ್ಕೆ ಒತ್ತಾಯಿಸಿ ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಂಗಳವಾರ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಮೃತ ಬಾಲಕಿಯ ತಂದೆಯು ತಮ್ಮ ಮಗಳ ಸಾವಿಗೆ ಪರಿಹಾರವಾಗಿ ಸಾವಿರ ಕೋಟಿ ರೂ. ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ನಾಸಿಕ್​ ಮೂಲದ ದಿಲೀಪ್ ಮುನಾವತ್ ಎಂಬಾತ ಬಾಂಬೆ ಹೈಕೋರ್ಟ್​​ನಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮುಂದಿನ ಕೆಲ ದಿನಗಳಲ್ಲೇ ಇದರ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿರಿ: ಕೇಂದ್ರ ಬಜೆಟ್ 2022: 400 ಹೊಸ ತಲೆಮಾರಿನ 'ವಂದೇ ಭಾರತ್​ ರೈಲು' ಸೇರಿ ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು?

ಕೋವಿಡ್​ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೇ ಕಾರಣಕ್ಕಾಗಿ ನನ್ನ ಮಗಳು ಸ್ನೇಹಲ್​​ ಕಳೆದ ವರ್ಷ ಜನವರಿ 28ರಂದು ಲಸಿಕೆ ಪಡೆದುಕೊಂಡಿದ್ದಳು. ಇದರ ಅಡ್ಡ ಪರಿಣಾಮದಿಂದಾಗಿ ಮಾರ್ಚ್​​ 1, 2021ರಂದು ಸಾವನ್ನಪ್ಪಿದ್ದಾಳೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸ್ನೇಹಲ್​​ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ವ್ಯಾಕ್ಸಿನ್ ಪಡೆದುಕೊಂಡಿದ್ದರಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದು, ಕೋವಿಡ್ ಲಸಿಕೆ​ ಅಸುರಕ್ಷಿತವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.