ಹರಿದ್ವಾರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಮತ್ತು ಸಹ ಸರಕಾರ್ಯವಾಹ ಡಾ. ಕೃಷ್ಣ ಗೋಪಾಲ್ ಶುಕ್ರವಾರದಂದು ಹರಿದ್ವಾರ ತಲುಪಿದ್ದಾರೆ. ಗಂಗೆಯ ಶುದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸೋಣ ಎಂಬ ಸಂದೇಶ ಸಾರಿದ್ದಾರೆ.
ಇವರು ಹರ್ಕಿ ಪೌರಿಯನ್ನು ತಲುಪಿ ಗಂಗಾ ಆರತಿಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದು ಸುಮಾರು 2 ತಿಂಗಳ ನಂತರ ಹರ್ಕಿ ಪೈದಿಯಲ್ಲಿ ಅತಿಥಿಯಿಂದ ಗಂಗಾರತಿ ನೇರವೇರಿದಂತಾಗಿದೆ. ಗಂಗಾ ಆರತಿಗೆ ಹಾಜರಾದ ನಂತರ ದತ್ತಾತ್ರೇಯ ಹೊಸಬಾಳೆ ತಮ್ಮ ಆಲೋಚನೆಗಳನ್ನು ಗಂಗಾಸಭೆಯ ಪುಸ್ತಕದಲ್ಲಿ ಬರೆದಿದ್ದಾರೆ.
ಗಂಗಾ ಸಂರಕ್ಷಣಾ ಆಂದೋಲನದ ನಂತರ ಗಂಗಸಭೆಯನ್ನು ಮಹಾಮಣ ಮದನ್ ಮೋಹನ್ ಮಾಲ್ವಿಯಾ ಅವರು 1916ರಲ್ಲಿ ಸ್ಥಾಪಿಸಿದರು. 105 ವರ್ಷಗಳ ನಂತರವೂ ಗಂಗಾಸಭೆಯು ಗಂಗಾ ರಕ್ಷಣೆಯಲ್ಲಿ ಮತ್ತು ಎಲ್ಲ ಯಾತ್ರಿಕರ ಸೇವೆಯಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಒಂದು ಉತ್ತಮ ವಿಷಯ. ಎಲ್ಲರೂ ಸುರಕ್ಷಿತವಾಗಿ ಮತ್ತು ಸಂತೋಷವಾಗಿರಬೇಕು ಎಂದು ಹಾರೈಸಿದರು.
ಇದನ್ನೂ ಓದಿ: ಅಯೋಧ್ಯಾ ರಾಮ ಮಂದಿರ ನಿರ್ಮಾಣ.. ರೂಪುರೇಷೆ ಸೇರಿ ಕಾರ್ಯಪ್ರಗತಿ ಪರಿಶೀಲಿಸಿದ ನಮೋ
ಗಂಗೆಯನ್ನು ಶುದ್ಧವಾಗಿಸಲು ಎಲ್ಲ ದೇಶವಾಸಿಗಳು ಮುಂದೆ ಬರಬೇಕಾಗುತ್ತದೆ, ಒಗ್ಗಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಸಂಘದ ಸ್ವಯಂ ಸೇವಕರು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.