ETV Bharat / bharat

ಜಾತಿ ಅನ್ನೋ ರೋಗ ಹೀಗಿರುತ್ತೆ.. ಮೇಲ್ಜಾತಿಯವನ ಕಾಲಿಗೆರಗಿ ಕ್ಷಮೆ ಕೇಳಿದ ದಲಿತ ಗ್ರಾಪಂ ಸಿಬ್ಬಂದಿ - Caste abuse

ಈ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿರುವ ಗೋಪಿನಾಥ್, ಮುತ್ತುಸಾಮಿ ಬಳಿ ನಾನು ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ನನ್ನ ತಪ್ಪು ಕೂಡ ಇದೆ ಎಂದು ಹೇಳಿದ್ದಾನೆ. ಆದರೆ, ಗ್ರಾಮ ಲೆಕ್ಕಾಧಿಕಾರಿಯ ಸಹಾಯಕ ವ್ಯಕ್ತಿಯೊಬ್ಬನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿರುವ ವಿಡಿಯೋ ಈಗ ವೈರಲ್ ಆಗಿದೆ..

Watch: Dalit village assistant forced to fall at feet of upper-caste man
ದಲಿತ ವ್ಯಕ್ತಿಗೆ ಜಾತಿ ನಿಂದನೆ
author img

By

Published : Aug 7, 2021, 2:38 PM IST

Updated : Aug 7, 2021, 2:44 PM IST

ಕೊಯಂಬತ್ತೂರು ( ತಮಿಳುನಾಡು ): ಮೇಲ್ಜಾತಿಯ ವ್ಯಕ್ತಿ ದಲಿತ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಒತ್ತಾಯಿಸಿದ ವಿಡಿಯೋವೊಂದು ವೈರಲ್ ಆಗಿದೆ. ಕಲೈಸೇಲ್ವಿ ಎಂಬ ಮಹಿಳೆ ಕೊಯಮತ್ತೂರಿನ ಅಣ್ಣೂರಿನ ಒಟ್ಟಾರಪಾಳ್ಯಂ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಾರೆ. ಅದೇ ಗ್ರಾಮದ ನಿವಾಸಿಯಾಗಿರುವ ಮುತ್ತುಸಾಮಿ ಆಕೆಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.

ಒಟ್ಟಾರಪಾಳ್ಯಂ ಗ್ರಾಮದ ಕೊಬ್ರಾಸಿಪುರಂ ನಿವಾಸಿ ಗೋಪಿನಾಥ್ (ಮೇಲ್ಜಾತಿಯ ವ್ಯಕ್ತಿ) ಶುಕ್ರವಾರ (ಆ. 6) ಆಸ್ತಿ ವಿವರಗಳನ್ನು ಪರಿಶೀಲಿಸಲು ಗ್ರಾಮ ಪಂಚಾಯತ್​ ಕಚೇರಿಗೆ ಬಂದಿದ್ದರು. ಈ ವೇಳೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರವೇ ಕಚೇರಿಗೆ ಬರುವಂತೆ ಕಲೈಸೇಲ್ವಿ ಗೋಪಿನಾಥ್‌ಗೆ ಸೂಚಿಸಿದ್ದರು.

ಈ ವೇಳೆ ಗೋಪಿನಾಥ್ ಗ್ರಾಮ ಲೆಕ್ಕಾಧಿಕಾರಿಯೊಂದಿಗೆ ಗಲಾಟೆ ಮಾಡಲು ಮುಂದಾಗಿದ್ದ. ಈ ವೇಳೆ ಅಲ್ಲೇ ಇದ್ದ ಸಹಾಯಕ ಮುತ್ತುಸಾಮಿ ಗೋಪಿನಾಥ್​ ಅನ್ನು ತಡೆಯಲು ಮುಂದಾಗಿದ್ದ. ಮಹಿಳಾ ಅಧಿಕಾರಿಯೊಂದಿಗೆ ಗಲಾಟೆ ಮಾಡದಂತೆ ಹೇಳಿದ್ದ.

ಇದರಿಂದ ಕೋಪಗೊಂಡ ಗೋಪಿನಾಥ್, ಮುತ್ತುಸಾಮಿಗೆ ಕೆಲಸದಿಂದ ತೆಗೆದುಸ ಹಾಕುವುದಾಗಿ ಬೆದರಸಿದ್ದ. ಅಲ್ಲದೆ, ಆತನಿಗೆ ಜಾತಿ ನಿಂದನೆ ಮಾಡಿ, ಗ್ರಾಮವನ್ನು ತೊರೆಯುವಂತೆ ತಾಕೀತು ಮಾಡಿದ್ದ. ಇದರಿಂದ ಹೆದರಿದ ಮುತ್ತುಸ್ವಾಮಿ ಗೋಪಿನಾಥ್ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯನ್ನು ಕೇಳಿದಾಗ, ಗೋಪಿನಾಥ್ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಕಚೇರಿಗೆ ಬಂದಿದ್ದರು. ಈ ವೇಳೆ ಗಲಾಟೆ ಮಾಡಿದ್ದರು. ಅದನ್ನು ತಡೆಯಲು ಮುಂದಾದಾಗ ಗೋಪಿನಾಥ್ ಮತ್ತು ಮುತ್ತುಸಾಮಿ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಮುತ್ತಸಾಮಿ ಗೋಪಿನಾಥ್ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ. ಇದು ಜಾತಿನಿಂದನೆ ಪ್ರಕರಣ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿರುವ ಗೋಪಿನಾಥ್, ಮುತ್ತುಸಾಮಿ ಬಳಿ ನಾನು ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ನನ್ನ ತಪ್ಪು ಕೂಡ ಇದೆ ಎಂದು ಹೇಳಿದ್ದಾನೆ. ಆದರೆ, ಗ್ರಾಮ ಲೆಕ್ಕಾಧಿಕಾರಿಯ ಸಹಾಯಕ ವ್ಯಕ್ತಿಯೊಬ್ಬನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

Last Updated : Aug 7, 2021, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.