ETV Bharat / bharat

ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ: ಸೇನಾ ವಲಯ ತೊರೆಯುವಂತೆ ಸೇನೆ ಮನವಿ

ರಾಷ್ಟ್ರ ರಾಜಧಾನಿಯಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ದೆಹಲಿ ಕ್ಯಾಂಟ್‌ನ ಸೆಂಟ್ರಲ್ ವೆಹಿಕಲ್ ಡಿಪೋದ ಸಮೀಪದಲ್ಲಿರುವ ಎಫ್‌ಒಎಲ್ ಡಿಪೋ ಬಳಿ ಪ್ರತಿಭಟನೆ ನಡೆಸಲಾಗಿದೆ. ಇದು ಸೇನಾ ವಲಯವಾಗಿದ್ದರಿಂದ, ಭದ್ರತೆಯ ದೃಷ್ಟಿಯಿಂದ ಪ್ರದೇಶವನ್ನು ತೊರೆಯುವಂತೆ ಭಾರತೀಯ ಸೇನೆ ಮನವಿ ಮಾಡಿದೆ.

Dalit girl death
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ
author img

By

Published : Aug 5, 2021, 12:25 PM IST

ನವದೆಹಲಿ: 9 ವರ್ಷದ ದಲಿತ ಬಾಲಕಿಯ ಮೇಲೆ ದಾರುಣವಾಗಿ ಅತ್ಯಾಚಾರವೆಸಗಿ, ಆಕೆಯ ದೇಹವನ್ನು ಸುಟ್ಟುಹಾಕಿರುವ ಘಟನೆ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದಿತ್ತು. ಈ ಘಟನೆಯನ್ನು ಖಂಡಿಸಿ ಜನರು ಇಲ್ಲಿನ ಹಳೆನಂಗಲ್​ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಕ್ಷಣಾ ಇಲಾಖೆ ಬುಧವಾರ ನೋಟಿಸ್ ನೀಡಿದ್ದು, ಭದ್ರತೆಯ ದೃಷ್ಟಿಯಿಂದ ಪ್ರದೇಶವನ್ನು ತೊರೆಯುವಂತೆ ಮನವಿ ಮಾಡಿದೆ. ಇನ್ನು ದೆಹಲಿ ಪೊಲೀಸರಿಗೂ ಈ ಪ್ರತಿಯನ್ನು ಕಳುಹಿಸಲಾಗಿದ್ದು, ಜನರನ್ನು ಅಲ್ಲಿಂದ ತೆರವುಗೊಳಿಸುವಂತೆ ಸೂಚಿಸಿದೆ.

ದೆಹಲಿ ಕ್ಯಾಂಟ್‌ನ ಸೆಂಟ್ರಲ್ ವೆಹಿಕಲ್ ಡಿಪೋದ ಸಮೀಪದಲ್ಲಿರುವ ಎಫ್‌ಒಎಲ್ ಡಿಪೋ ಬಳಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಈ ಪ್ರದೇಶದಲ್ಲಿ ಸೇನೆಯ ಹಲವು ಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಅಲ್ಲಿಂದ ಹೋಗುವುದು ಉತ್ತಮ ಎಂದು ಸೇನೆ ಪತ್ರದಲ್ಲಿ ಉಲ್ಲೇಖಿಸಿದೆ.

"ಹೆಚ್ಚಿನ ಸಂಖ್ಯೆಯ ಸ್ಥಳೀಯರು ಮತ್ತು ಹೊರಗಿನ ಪ್ರತಿಭಟನಾಕಾರರು ತೊಡಗಿದ್ದಾರೆ. ಇದು ಕ್ಯಾಂಟ್ ಪ್ರದೇಶದಲ್ಲಿ ಭದ್ರತಾ ಅಪಾಯವನ್ನುಂಟು ಮಾಡುತ್ತದೆ. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ, ಭದ್ರತಾ ಅಪಾಯಕ್ಕೆ ಕಾರಣವಾಗಬಹುದು" ಎಂದು ಹೇಳಿದೆ.

"ಸೋಮವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಮೀಸಲಾಗಿರುವ ವಲಯ ಮತ್ತು ವಲಯದ ಕಮಾಂಡರ್‌ಗೆ ಈಗಾಗಲೇ ತಮ್ಮ ಭದ್ರತಾ ತಂಡಗಳನ್ನು ಸಿದ್ಧವಾಗಿಡುವಂತೆ ಹೇಳಲಾಗಿದೆ. ರಸ್ತೆಯನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿಮ್ಮನ್ನು ವಿನಂತಿಸಲಾಗಿದೆ. ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಪ್ರತಿಭಟನಾಕಾರರನ್ನು ತಕ್ಷಣವೇ ಅಲ್ಲಿಂದ ತೆರವು ಮಾಡಿ" ಎಂದು ದೆಹಲಿ ಪೊಲೀಸರಿಗೆ ಸೇನೆ ಪತ್ರ ಬರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.