ETV Bharat / bharat

ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪ: ರಾಜಸ್ಥಾನದಲ್ಲಿ ದಲಿತ ಕುಟುಂಬಗಳಿಗೆ ಕಿರುಕುಳ - social boycott in Rajasthan village

ಬಹುಸಂಖ್ಯಾತ ಸಮುದಾಯದವರು ದಲಿತರಾದ ಬೈರ್ವ ಸಮುದಾಯದ ಜನರಿಗೆ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜಸ್ಥಾನದಲ್ಲಿ ದಲಿತ ಕುಟುಂಬಗಳಿಗೆ ಕಿರುಕುಳ
ರಾಜಸ್ಥಾನದಲ್ಲಿ ದಲಿತ ಕುಟುಂಬಗಳಿಗೆ ಕಿರುಕುಳ
author img

By

Published : Oct 20, 2022, 9:40 PM IST

ಝಲಾವರ್ (ರಾಜಸ್ಥಾನ): ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣ ಝಲಾವರ್ ಜಿಲ್ಲೆಯ ಜಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಟವಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಬಹುಸಂಖ್ಯಾತ ಸಮುದಾಯದಿಂದ ಕಿರುಕುಳ ನೀಡಲಾಗುತ್ತಿದೆ. ಗ್ರಾಮದಿಂದ ಹೊರಹಾಕುವುದಾಗಿಯೂ ಬೆದರಿಕೆ ಹಾಕಲಾಗುತ್ತಿದೆ ಎಂದು ದಲಿತ ಕುಟುಂಬ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದೆ.

ಪೊಲೀಸ್ ಠಾಣಾಧಿಕಾರಿ ವಿಜೇಂದರ್ ಸಿಂಗ್ ಮಾತನಾಡಿ, ಜಟವಾ ಗ್ರಾಮದ ಲೋಧಾ ಸಮುದಾಯದ ಜನರು ಬೈರ್ವ ಸಮುದಾಯದವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂಬ ಆರೋಪವಿದೆ. ಅವರ ವಿರುದ್ಧ ದೂರು ದಾಖಲಿಸಲಾಗಿದೆ. ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿದೆ. ಬೈರ್ವ ಕುಟುಂಬಗಳಿಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ನೀಡುವುದನ್ನು ನಿಷೇಧಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದುವೆಗೆ ವೀಳ್ಯ ನೀಡದ್ದಕ್ಕೆ ಸಾಮಾಜಿಕ ಬಹಿಷ್ಕಾರ: 10 ವರ್ಷದಿಂದ ಈ ಕುಟುಂಬಕ್ಕೆ ನರಕಯಾತನೆ

ಪೊಲೀಸ್ ಅಧಿಕಾರಿಯ ಪ್ರಕಾರ, ಬೈರ್ವ ಸಮುದಾಯದ ಜನರು ದೇವಾಲಯದಲ್ಲಿ 'ಕೀರ್ತನೆ' ಹಾಡುತ್ತಿದ್ದರು. ಆಗ ಲೋಧಾ ಸಮುದಾಯದವರು ಕೀರ್ತನೆಯನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಬಳಿಕ ಲೋಧಾ ಸಮುದಾಯದ ಜನರು ದಲಿತರ ಅಂಗಡಿಗಳಿಂದ ಸರಕುಗಳನ್ನು ಖರೀದಿಸುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.