ಚಂಡೀಗಢ: ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಪಟಿಯಾಲ ಜೈಲಿಗೆ ಕಳುಹಿಸಿದ್ದಾರೆ. ಆದರೆ, ಇಲ್ಲಿ ಅತ್ಯಂತ ಅಚ್ಚರಿಯ ವಿಷಯವೆಂದರೆ ಪಂಜಾಬಿ ಗಾಯಕ ದಲೇರ್ ಮೆಹಂದಿ ಮತ್ತು ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಟಿಯಾಲ ಜೈಲಿನಲ್ಲಿ ಜೋಡಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಇಬ್ಬರೂ ಜೈಲಿನ ಒಂದೇ ಬ್ಯಾರಕ್ನಲ್ಲಿದ್ದಾರೆ.
ಸಿಧು ಮತ್ತು ದಲೇರ್ ಹಳೆಯ ಸ್ನೇಹಿತರು: ನವಜೋತ್ ಸಿಂಗ್ ಸಿಧು ಮತ್ತು ದಲೇರ್ ಮೆಹಂದಿ ತುಂಬಾ ಹಳೆಯ ಸ್ನೇಹಿತರು ಎಂಬುದು ನಿಮಗೆ ಗೊತ್ತಿರಲಿ. ಇಬ್ಬರೂ ಅನೇಕ ಟಿವಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲಿನಲ್ಲೂ ಜೋಡಿಯಾಗಿದ್ದಾರೆ.
ದಲೇರ್ ಮೆಹಂದಿ ಬಂಧನ ಏಕೆ?: ದಲೇರ್ ಮೆಹಂದಿ ಬಂಧಿಸಲ್ಪಟ್ಟ ಪ್ರಕರಣವು 2003 ರಲ್ಲಿ ನಡೆದ ಪ್ರಕರಣವಾಗಿದೆ. 15 ವರ್ಷಗಳ ನಂತರ ಪ್ರಕರಣದ ತೀರ್ಪು ಇದೀಗ ಬಂದಿದೆ. ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್ ಮೆಹಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರ ಸಹೋದರ ಸಂಶೇರ್ ಸಿಂಗ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಈ ಪ್ರಕರಣವು 2003 ರಲ್ಲಿ ಅಮೆರಿಕದಲ್ಲಿ ದಾಖಲಾಗಿತ್ತು.
ಪಟಿಯಾಲಾ ಜೈಲಿನಲ್ಲಿ ಸಿಧು: ನವಜೋತ್ ಸಿಂಗ್ ಸಿಧು 34 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅಪರಾಧಿಯಾಗಿ ಪಟಿಯಾಲಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಸಿಧು ಪಟಿಯಾಲ ಕೋರ್ಟ್‌ಗೆ ಶರಣಾಗಿದ್ದರು.
ಪಾರ್ಕಿಂಗ್ ಸ್ಥಳಕ್ಕಾಗಿ ಜಗಳವಾಗಿತ್ತು: ನವಜೋತ್ ಸಿಧು ಪಟಿಯಾಲಾದಲ್ಲಿ ಪಾರ್ಕಿಂಗ್ ಜಾಗದ ಸಲುವಾಗಿ ವ್ಯಕ್ತಿಯೊಬ್ಬರೊಂದಿಗೆ ಜಗಳವಾಡಿದ್ದರು. ಈ ಸಂದರ್ಭದಲ್ಲಿ ಸಿಧು ಅವರೊಂದಿಗೆ ಇನ್ನೊಬ್ಬ ಸ್ನೇಹಿತ ಹಾಜರಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಸೇರಿಕೊಂಡು ವ್ಯಕ್ತಿಯನ್ನು ಥಳಿಸಿದ್ದರು ಹಾಗೂ ಥಳಿತಕ್ಕೊಳಗಾದ ವ್ಯಕ್ತಿಯು ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ 2006ರಲ್ಲಿ ಸಿಧು ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಇದನ್ನು ಓದಿ: ಮೋದಿ ಸರ್ಕಾರ ಉರುಳಿಸಲು ಅಹ್ಮದ್ ಪಟೇಲ್ ಸಂಚು ರೂಪಿಸಿದ್ದರು: ಎಸ್‌ಐಟಿ ಸ್ಫೋಟಕ ಮಾಹಿತಿ