ಧರ್ಮಶಾಲಾ(ಹಿಮಾಚಲ ಪ್ರದೇಶ): ಇಂದು ಜಮ್ಮು ತಲುಪಲಿರುವ ದಲೈಲಾಮಾ ನಾಳೆ ಲೇಹ್ಗೆ ಭೇಟಿ ನೀಡಲಿದ್ದಾರೆ. ಬೌದ್ಧ ಧರ್ಮಗುರು ಲೇಹ್ ತಲುಪಿದ ಮರುದಿನದಿಂದ ಒಂದು ವಾರದವರೆಗೆ ಏಕಾಂತ ಧ್ಯಾನಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಮುಂಬರುವ ಕಾರ್ಯಕ್ರಮಗಳ ಪಟ್ಟಿ ಜುಲೈ 23 ರಂದು ನಿರ್ಧಾರವಾಗಲಿದೆ.
ಕೊರೊನಾದಿಂದ ಉದ್ಭವಿಸಿದ ಸಮಸ್ಯೆಗಳ ನಂತರ ದಲೈಲಾಮಾ ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಹೊರಹೋಗುತ್ತಿದ್ದಾರೆ. ಬೌದ್ಧ ಸಂಘದ ಆಹ್ವಾನದ ಮೇರೆಗೆ ಅವರು ಲಡಾಖ್ಗೂ ಭೇಟಿ ನೀಡುವರು.
ಇದನ್ನೂ ಓದಿ: ಚಿತ್ರಗಳಲ್ಲಿ: ಎರಡು ವರ್ಷಗಳ ಬಳಿಕ ಅನುಯಾಯಿಗಳಿಗೆ ದರ್ಶನ ನೀಡಿದ ಧರ್ಮ ಗುರು ದಲೈ ಲಾಮಾ
ಜುಲೈ 15ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಲೈಲಾಮಾ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಲೆಹ್ ವಿಮಾನ ನಿಲ್ದಾಣದಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್, ಲಡಾಖ್ ಬೌದ್ಧ ಸಂಘದ ಅಧಿಕಾರಿಗಳು ಮತ್ತು ಲೇಹ್ ಹಿಲ್ ಕೌನ್ಸಿಲ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.