ETV Bharat / bharat

ಕೋಲ್ಕತ್ತಾ ಹೈಕೋರ್ಟ್​ನಲ್ಲಿ 150 ವರ್ಷಗಳಿಂದ ನಡೀತಿದೆ ದಕ್ಷಿಣೇಶ್ವರ ಕಾಳಿ ಮಂದಿರದ ಭ್ರಷ್ಟಾಚಾರ ಪ್ರಕರಣ!

ಪಶ್ಚಿಮ ಬಂಗಾಳದ ದಕ್ಷಿಣೇಶ್ವರ ಕಾಳಿ ಮಂದಿರದಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಪ್ರಕರಣ ಒಂದು ತಿಂಗಳಿಂದ ವಾದ-ಪ್ರತಿವಾದ ನಡೆಯುತ್ತಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

embezzlement-of-funds
ದಕ್ಷಿಣೇಶ್ವರ ಕಾಳಿ ಮಂದಿರದ ಭ್ರಷ್ಟಾಚಾರ ಪ್ರಕರಣ
author img

By

Published : May 10, 2022, 10:44 PM IST

ಕೋಲ್ಕತ್ತಾ: ಪಶ್ಚಿಮಬಂಗಾಳದ ದಕ್ಷಿಣೇಶ್ವರ ಕಾಳಿ ಮಂದಿರದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಪ್ರಕರಣ 150 ವರ್ಷಗಳಿಂದ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಕಳೆದ ವರ್ಷವಷ್ಟೇ ದೇವಸ್ಥಾನದ ಸುಗಮ ಆಡಳಿತಕ್ಕಾಗಿ ಸಚಿವರನ್ನೊಳಗೊಂಡ ಟ್ರಸ್ಟಿಗಳ ಮಂಡಳಿ ರಚನೆಗೂ ಹೈಕೋರ್ಟ್​ ಆದೇಶಿಸಿತ್ತು. ಆದರೀಗ ಈ ಚುನಾವಣೆಯೇ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ಮಂಡಳಿಯ ಸದಸ್ಯರಾದ ಚೌಧರಿ ಮತ್ತು ಅವರ ಸಹಚರರು ಚುನಾವಣೆ ನಡೆಸದೇ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕುಶಾಲ್ ಚೌಧರಿ ಮತ್ತು ಅವರ ಸಹಚರರು ಕೋಲ್ಕತ್ತಾ ಹೈಕೋರ್ಟ್‌ನಲ್ಲಿರುವ ಹಳೆಯ ಪ್ರಕರಣವನ್ನು ಕೆದಕಿದ್ದಾರೆ.

ಉಸ್ತುವಾರಿಯೇ ದೇವಸ್ಥಾನದ ಸಮಸ್ಯೆ: 1831 ರಲ್ಲಿ ರಾಣಿ ರಾಸ್​ಮೋನಿ ಅವರ ಮರಣದ ಒಂದು ದಿನ ಮೊದಲು ಅವರು ತಮ್ಮ ಎಂಟು ಮೊಮ್ಮಕ್ಕಳಿಗೆ ದೇವಸ್ಥಾನದ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದರು. ಆದರೆ, ರಾಣಿಯ ಮರಣದ ದಶಕದ ನಂತರ ಉಸ್ತುವಾರಿಯ ಬಗ್ಗೆ ವಿವಾದ ಉಂಟಾಯಿತು. ಬಳಿಕ ಇದು ಕೋಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿತ್ತು. 1912 ರಲ್ಲಿ ಹೈಕೋರ್ಟ್ ದೇವಾಲಯದ ನಿರ್ವಹಣೆಗೆ ಮಾರ್ಗಸೂಚಿಯನ್ನು ಹೊರಡಿಸಿತು. ನಂತರ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸಲು ಟ್ರಸ್ಟಿಗಳ ಮಂಡಳಿಯನ್ನು ರಚಿಸಲಾಯಿತು. ಆದರೆ ಇದು ಪರಿಹಾರಕ್ಕಿಂತಲೂ ಕ್ರಮೇಣ ಸಮಸ್ಯೆ ಸೃಷ್ಟಿಸುತ್ತಲೇ ಹೋಯಿತು.

ಮೂರು ವರ್ಷಗಳಿಗೊಮ್ಮೆ ಚುನಾವಣೆ: ಅಂತಿಮವಾಗಿ 1986 ರಲ್ಲಿ ಹೈಕೋರ್ಟ್​ ಟ್ರಸ್ಟಿಗಳ ಮಂಡಳಿಯ ಚುನಾವಣೆಯನ್ನು ನ್ಯಾಯಾಲಯ ಮತ್ತು ವಿಶೇಷ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಬೇಕೆಂದು ಆದೇಶವನ್ನು ಹೊರಡಿಸಿತ್ತು. ಅಂದಿನಿಂದ ಸುಮಾರು 30 ವರ್ಷಗಳಿಂದ ಕುಶಾಲ್ ಚೌಧರಿ ಮತ್ತು ಅವೆ ಸಹಚರರು ಟ್ರಸ್ಟಿಗಳ ಮಂಡಳಿಯನ್ನು ನಡೆಸುತ್ತಿದ್ದಾರೆ. ದೇವಸ್ಥಾನದ ನಿರ್ವಹಣೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಇನ್ನೊಂದು ತಂಡ ಆರೋಪಿಸಿದೆ.

ಈ ಪ್ರಕರಣವು ನ್ಯಾಯಮೂರ್ತಿ ರವಿ ಕಿಸಾನ್ ಕಪೂರ್ ಅವರ ಪೀಠದಲ್ಲಿ ಮತ್ತೆ ವಿಚಾರಣೆಗೆ ಬಂದಿದ್ದು, ಸುಮಾರು 1 ತಿಂಗಳಿಂದ ವಾದ - ಪ್ರತಿವಾದ ನಡೆಯುತ್ತಿದೆ. ಮೇ 11(ಬುಧವಾರ)ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಓದಿ: ತೇಜಿಂದರ್ ಪಾಲ್ ಬಗ್ಗಾಗೆ ಹೈಕೋರ್ಟ್ ರಿಲೀಫ್: ಜುಲೈ 5ರವರೆಗೆ ಬಂಧಿಸದಂತೆ ತಡೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.