ಮೇಷ: ಇಂದು ನಿಮಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎಂದು ಆಲೋಚಿಸುತ್ತೀರಿ. ಆದರೆ ಹೊಳೆಯುವುದೆಲ್ಲ ಚಿನ್ನವಲ್ಲ. ನೀವು ನಿಮ್ಮ ಕುಟುಂಬದ ಸದಸ್ಯರನ್ನು ಸಂತೋಷವಾಗಿರಿಸಲು ಸಮಯ ನೀಡಬೇಕು. ನೀವು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮನ್ನಣೆ ನೀಡಬೇಕು. ನಿಮ್ಮ ಮಕ್ಕಳಿಗೆ ಒಂದು ಅಥವಾ ಎರಡು ಉಡುಗೊರೆ ಕೊಳ್ಳಬಹುದು.
ವೃಷಭ: ನಿರ್ವಾಹಕರು ಮತ್ತು ಆಡಳಿತಗಾರರಿಗೆ ಅತ್ಯಂತ ಲಾಭದಾಯಕ ದಿನ. ಅವರು ತಮ್ಮ ಕಿರಿಯ ಸಹೋದ್ಯೋಗಿಗಳಿಂದ ಹೆಚ್ಚೇನೂ ನಿರೀಕ್ಷೆ ಮಾಡುವುದಿಲ್ಲ. ಹಾಗೆ ಮಾಡುವುದು ಮಹತ್ತರ ನಿರಾಸೆ ಮತ್ತು ಆತಂಕ ತರುತ್ತದೆ. ದಿನದ ನಂತರದಲ್ಲಿ ನೀವು ವಿದೇಶದಿಂದ ಕೆಲ ಉತ್ಸಾಹದ ಮತ್ತು ಉತ್ತೇಜನದ ಸುದ್ದಿ ಕೇಳಬಹುದು.
ಮಿಥುನ: ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಂದ ಬಿಡುವು ಪಡೆಯಬೇಕೆಂದು ಬಯಸುತ್ತೀರಿ. ನೀವು ಒಂದೇ ಸಲಕ್ಕೆ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೀರಿ. ಇದು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ನೀವು ದಿನದ ನಂತರದಲ್ಲಿ ನಿಮ್ಮ ವೈಯಕ್ತಿಕ ವಿಷಯಗಳಿಗೆ ಗಮನ ನೀಡಲು ಸಾಧ್ಯವಾಗುತ್ತದೆ. ಮಧ್ಯಾಹ್ನ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒತ್ತಡದಲ್ಲಿರುತ್ತೀರಿ. ನಿಮ್ಮ ವೃತ್ತಿಯ ಗುರಿಸಾಧನೆಗಳಲ್ಲಿ ನೀವು ನಿಮ್ಮ ಕುಟುಂಬವನ್ನು ನಿರ್ಲಕ್ಷಿಸುವುದಿಲ್ಲ ಎಂದು ದೃಢಪಡಿಸಿಕೊಳ್ಳಿ.
ಕರ್ಕಾಟಕ: ಹೆಸರು ಮತ್ತು ಖ್ಯಾತಿ ಪಡೆಯುವ ನಿಮ್ಮ ಕನಸು ನನಸಾಗಲಿದೆ. ನೀವು ವ್ಯವಸ್ಥಿತ ಯೋಜನೆಯ ಮೂಲಕ ನಿಮ್ಮ ಕಾರ್ಯವನ್ನು ಪೂರ್ಣಗಳಿಸುತ್ತೀರಿ. ಸರ್ವಶಕ್ತನು ನಿಮಗೆ ಪ್ರತಿ ಪ್ರಯತ್ನದಲ್ಲೂ ಯಶಸ್ಸನ್ನು ಕರುಣಿಸಿದ್ದಾನೆ.
ಸಿಂಹ: ನೀವು ಅತ್ಯಂತ ಆನಂದದ ಮನಸ್ಥಿತಿಯಲ್ಲಿದ್ದೀರಿ. ಶಕ್ತಿ ಮತ್ತು ಉತ್ಸಾಹದಲ್ಲಿ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೀರಿ. ಬಾಕಿ ಇರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ದಿನಚರಿಯ ಕೆಲಸಗಳು ಕೂಡ ಕ್ಷಣದಲ್ಲಿ ಮುಗಿಯುತ್ತವೆ. ಬೆಳಿಗ್ಗೆ ನೀವು ಎಲ್ಲ ಕೆಲಸಗಳನ್ನೂ ಬೇಗನೆ ಮುಗಿಸುತ್ತೀರಿ. ಆದರೆ ದಿನದ ನಂತರದಲ್ಲಿ ನೀವು ಹೆಚ್ಚು ವಿವೇಚನೆಯ ವಿಧಾನ ಅಳವಡಿಸಿಕೊಳ್ಳುತ್ತೀರಿ.
ಕನ್ಯಾ: ಮಹಿಳೆಯರು ಅಡುಗೆ ಮನೆ ಹಾಗೂ ಭೋಜನ ಸಮಯದಲ್ಲಿ ಕೂಡ ಆನಂದ ಕಾಣುತ್ತಾರೆ. ಸಂಜೆಯಲ್ಲಿ ನಿಮ್ಮ ಆತ್ಮೀಯ ಮಿತ್ರರು ಹಾಗೂ ಬಂಧುಗಳಿಗೆ ಭೋಜನ ಕೂಟ ಮತ್ತು ಪಾನಗೋಷ್ಠಿಯನ್ನೂ ಆಯೋಜಿಸಬಹುದು. ನೀವು ನಿಮ್ಮ ಪ್ರೀತಿಸಿದವರೊಂದಿಗೆ ಅತ್ಯಂತ ಪ್ರಣಯದ ಭಾವನೆ ಹೊಂದುತ್ತೀರಿ.
ತುಲಾ: ನೀವು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಳುಗಿಹೋಗುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಜಾಹೀರಾತು ಮತ್ತು ಮಾರ್ಕೆಟಿಂಗ್ ವೃತ್ತಿಪರರಿಗೆ ಇದು ಒಳ್ಳೆಯ ಸಮಯ. ಈ ದಿನ ಒಳ್ಳೆಯ ದಿನವಾಗಿದ್ದು ಕನಿಷ್ಠ ಪ್ರಯತ್ನಗಳಿಂದ ಗರಿಷ್ಠ ಮಟ್ಟ ಸಾಧಿಸಿ.
ವೃಶ್ಚಿಕ: ನೀವು ನೋಡುವುದನ್ನು ಮಾತ್ರ ನಂಬಿ ಮತ್ತು ಗೊಂದಲಗಳು ಮತ್ತು ತಿಕ್ಕಾಟಗಳನ್ನು ತಪ್ಪಿಸಿ. ನಿಮ್ಮ ಕಣ್ಣುಗಳು ಹಾಗೂ ಕಿವಿಗಳನ್ನು ತೆರೆದಿಡಿ. ಇದರಿಂದ ನೀವು ನಿಮ್ಮ ಸುತ್ತಲೂ ನಡೆಯುವ ಪ್ರಮುಖ ಆಗುಹೋಗುಗಳನ್ನು ತಪ್ಪಿಸಿಕೊಳ್ಳುವುದಿಲ್ಲ.
ಧನು: ಇದು ವ್ಯಾಪಾರಿಗಳಿಗೆ ಅತ್ಯಂತ ಲಾಭದಾಯಕ ದಿನ. ನೀವು ಕಾಯುತ್ತಿದ್ದ ಸಾಲ ಈಗ ಬಿಡುಗಡೆಯಾಗುವುದರಿಂದ ನಿಮ್ಮ ಕನಸನ್ನು ಜೀವಿಸಲು ಇದು ಸಕಾಲ. ನೀವು ನಿಮ್ಮ ಪ್ರಿಯರನ್ನೂ ವಿಶೇಷವಾಗಿ ಭಾವಿಸುವಂತೆ ಮಾಡುತ್ತೀರಿ. ನೀವು ಒಟ್ಟಿಗೆ ಕಾಲ ಕಳೆದ ಸ್ಮರಣೆಗಳು ಎಂದುಗೂ ಉಳಿಯುವಂತೆ ಮಾಡಿಕೊಳ್ಳಿ.
ಮಕರ: ನೀವು ಫೈಲುಗಳ ರಾಶಿಯಲ್ಲಿ ಕಳೆದುಹೋಗಿದ್ದೀರಿ ಮತ್ತು ಅತ್ಯಂತ ಪ್ರಯತ್ನಿಸಿದ ಹಾಗೂ ಪರೀಕ್ಷಿಸಿದ ಸೂತ್ರ-ಧ್ಯಾನ ನಿಮಗೆ ನಿಮ್ಮ ಮನಸ್ಸಿನಿಂದ ಒತ್ತಡ ಹೊರಹಾಕಲು ಹಾಗೂ ದಾರಿ ಕಂಡುಕೊಳ್ಳಲು ನೆರವಾಗುತ್ತದೆ. ಪ್ರತಿಯೊಂದು ಕೂಡ ಮಂದ ಹಾಗೂ ಶುಷ್ಕವಾಗಿರುತ್ತದೆ. ಕಾರು ಅಥವಾ ಮನೆ ಕೊಳ್ಳಲು ಇದು ಅನುಕೂಲಕರ ದಿನ. ನೀವು ಹೊಸ ಮನೆಗೆ ಬದಲಾಗುವ ಸಾಧ್ಯತೆಯೂ ಇದೆ.
ಕುಂಭ: ನೀವು ಇಂದು ಅತ್ಯಂತ ಅನಿರೀಕ್ಷಿತವಾಗಿರುತ್ತೀರಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಚಲನೆಗಳನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ ಮತ್ತು ಸ್ಪರ್ಧೆ ತೀವ್ರವಾಗಿರುವಾಗ, ಅಂತಹ ಅನಿರೀಕ್ಷಿತತೆ ನಿಮಗೆ ಮೇಲುಗೈಯಾಗಿಸುತ್ತದೆ. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯತ್ನಗಳನ್ನು ಶ್ಲಾಘನೆ ಹಾಗೂ ಪುರಸ್ಕರಿಸಲಾಗುತ್ತದೆ. ನೀವು ಏನು ಮಾಡಬೇಕೋ ಅದನ್ನು ಮಾಡಿದ್ದೀರಿ. ಈಗ ಕೊಂಚ ಕಾಲ ವಿಶ್ರಾಂತಿ ಪಡೆದುಕೊಳ್ಳಿ ಮತ್ತು ಹೊಸದಿನಕ್ಕೆ ಸಿದ್ಧತೆ ಮಾಡಿಕೊಳ್ಳಿ.
ಮೀನ: ದಿನದ ಮೊದಲರ್ಧ ನೀವು ನಿಮ್ಮ ಸಾಮಾಜಿಕ ಹೊಣೆಗಾರಿಕೆಗಳನ್ನು ಪೂರೈಸಲು ಮತ್ತು ನಿಮ್ಮ ದೈನಂದಿನ ಕಾರ್ಯಕ್ರಮಗಳನ್ನು ಪೂರೈಸುವ ಒತ್ತಡದಲ್ಲಿರುತ್ತೀರಿ. ನೀವು ಮಧ್ಯಾಹ್ನ ಯಾರಿಗೋ ನೆರವಾಗಲು ಆಹ್ವಾನ ಪಡೆಯಬಹುದು. ನೀವು ನಿಮ್ಮ ಮನ ಒಲಿಸುವ ವರ್ತನೆಯಿಂದ ಪ್ರತಿಯೊಬ್ಬರ ಹೃದಯವನ್ನೂ ಗೆಲ್ಲುತ್ತೀರಿ. ಇಂದು ಯಾವುದೇ ಆಶ್ಚರ್ಯಗಳಿಲ್ಲದ ಗಮನಾರ್ಹವಲ್ಲದ ದಿನವಾಗಿರುತ್ತದೆ.
ಇಂದಿನ ಪಂಚಾಂಗ: ನಕ್ಷತ್ರ, ರಾಹುಕಾಲ ಮತ್ತು ಅಮೃತಕಾಲದ ಮಾಹಿತಿ:
ದಿನಾಂಕ: 29-05-2023 ಸೋಮವಾರ
ಸಂವತ್ಸರ: ಶುಭಕೃತ್ ಉತ್ತರಾಯಣ
ಋತು: ಗ್ರೀಷ್ಮಾ
ತಿಥಿ: ಜ್ಯೇಷ್ಠ
ಪಕ್ಷ: ಶುಕ್ಲ ನವಮಿ
ನಕ್ಷತ್ರ: ಉತ್ತರ ರಾಫಾಲ್ಗುಣಿ
ಅಮೃತಕಾಲ- 13:51 ರಿಂದ 15:28
ವರ್ಜ್ಯಂ: 18:15 ರಿಂದ 19:50
ದುರ್ಮುಹೂರ್ತ: 12:13 ರಿಂದ 13:1 & 14:37 ರಿಂದ 15:25
ರಾಹುಕಾಲ: 07:26 ರಿಂದ 09:02
ಸೂರ್ಯೋದಯ: 05:49:00 AM
ಸೂರ್ಯಾಸ್ತ: 06:41:00 PM