ETV Bharat / bharat

ಸೇನೆಗೆ 6 ಸಾವಿರ ಕೋಟಿ ಮೌಲ್ಯದ ಗನ್​​ ಖರೀದಿಸಲು DAC ಅನುಮೋದನೆ - ಸಶಸ್ತ್ರ ಪಡೆಗಳ ಆಧುನೀಕರಣ

ಭಾರತೀಯ ಸೇನೆಯ ವಾಯು ರಕ್ಷಣಾ ಬಂದೂಕುಗಳ ಆಧುನೀಕರಣಕ್ಕೆ ಮತ್ತು 6 ಸಾವಿರ ಕೋಟಿ ಮೌಲ್ಯದ ಗನ್​​ ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದಿಸಿದೆ.

Defence
Defence
author img

By

Published : Jun 4, 2021, 7:51 PM IST

ನವದೆಹಲಿ: ಭಾರತೀಯ ಸೇನೆಯ ದೀರ್ಘಕಾಲದ ಬೇಡಿಕೆಯಾದ ವಾಯು ರಕ್ಷಣಾ ಬಂದೂಕುಗಳ ಆಧುನೀಕರಣಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಕಾರ್ಯಾಚರಣೆಯ ಅಗತ್ಯಗಳಿಗಾಗಿ ವಿವಿಧ ಸಲಕರಣೆಗಳ ಬಂಡವಾಳ ಸ್ವಾಧೀನಕ್ಕೆ ಸಂಬಂಧಿಸಿದ 6,000 ಕೋಟಿ ರೂ. ಮೌಲ್ಯದ ಪ್ರಸ್ತಾಪಗಳನ್ನು ಅನುಮೋದಿಸಿದೆ.

ಇದಲ್ಲದೆ, ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ (ಎಸ್‌ಪಿ) ಮಾದರಿಯಡಿ ಪ್ರಾಜೆಕ್ಟ್ ಪಿ 75 (ಐ) ಅಡಿಯಲ್ಲಿ ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಆರ್‌ಎಫ್‌ಪಿ ನೀಡುವಿಕೆಯನ್ನು ಡಿಎಸಿ ಅನುಮೋದಿಸಿದೆ. ಅಂದಾಜು 43,000 ಕೋಟಿ ರೂ. ಮೌಲ್ಯದ ಈ ಯೋಜನೆಯು ಅತ್ಯಾಧುನಿಕ ವಾಯು ಸ್ವತಂತ್ರ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದ ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ಸ್ಥಳೀಯ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.

ಇದು ಅತಿದೊಡ್ಡ ‘ಮೇಕ್ ಇನ್ ಇಂಡಿಯಾ’ ಯೋಜನೆಗಳಲ್ಲಿ ಒಂದಾಗಲಿದ್ದು, ಭಾರತದಲ್ಲಿ ಜಲಾಂತರ್ಗಾಮಿ ನಿರ್ಮಾಣಕ್ಕಾಗಿ ಒಂದು ಶ್ರೇಣೀಕೃತ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಇದು ಆಮದುಗಳ ಮೇಲಿನ ಪ್ರಸ್ತುತ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯ ಮೂಲಗಳಿಂದ ಹೆಚ್ಚಿನ ಸ್ವಾವಲಂಬನೆ ಮತ್ತು ಸರಬರಾಜುಗಳ ವಿಶ್ವಾಸಾರ್ಹತೆಯನ್ನು ಕ್ರಮೇಣ ಖಚಿತಪಡಿಸುತ್ತದೆ.

ಈ ಅನುಮೋದನೆಯೊಂದಿಗೆ, ಜಲಾಂತರ್ಗಾಮಿ ನಿರ್ಮಾಣದಲ್ಲಿ ರಾಷ್ಟ್ರೀಯ ಸಾಮರ್ಥ್ಯವನ್ನು ಪಡೆಯಲು ಮತ್ತು ಭಾರತೀಯ ಉದ್ಯಮವು ಭಾರತದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ಸ್ವತಂತ್ರವಾಗಿ ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಸರ್ಕಾರವು ರೂಪಿಸಿರುವ 30 ವರ್ಷಗಳ ಜಲಾಂತರ್ಗಾಮಿ ನಿರ್ಮಾಣ ಕಾರ್ಯಕ್ರಮವನ್ನು ಸಾಧಿಸಲು ದೇಶವನ್ನು ಶಕ್ತಗೊಳಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.