ಲಖನೌ(ಉತ್ತರ ಪ್ರದೇಶ): ರಾಜಧಾನಿಯಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ಗೆ ಬೈಕ್ ತಡೆದು ನಿಲ್ಲಿಸಿದ್ದಕ್ಕಾಗಿ ನಾಲ್ಕು ಯುವಕರು ಓಡಿಸಿಕೊಂಡು ಹೋಗಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಕಾನ್ಸ್ಟೇಬಲ್ ಶ್ರೀಕಾಂತ್ ಅವರು ಪರ ಸರೋಸಾ - ಭರೋಸಾ ತಿರುವಿನಲ್ಲಿ ಗಸ್ತು ತಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಗಸ್ತಿನ ಸಮಯದಲ್ಲಿ ಗಲಾಟೆ ಮಾಡುತ್ತಾ ಬೈಕ್ಗಳಲ್ಲಿ ಹೋಗುತ್ತಿದ್ದ 4 ಯುವಕರು ಪೊಲೀಸ್ ಕಾನ್ಸ್ಟೇಬಲ್ ತಡೆದು ನಿಲ್ಲಿಸಿದ್ದಾರೆ. ಆ ವೇಳೆ ಕೋಪಗೊಂಡ ಯುವಕರು ಪೊಲೀಸ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಜಗಳವಾಡಿದ್ದು ಮಾತ್ರವಲ್ಲದೇ ಪೊಲೀಸ್ ಮೇಲೆ ದೌರ್ಜನ್ಯವೆಸಗಿದ್ದಾರೆ.
ಯುವಕರು ಪೊಲೀಸ್ಗೆ ಹೊಡೆಯುತ್ತಿರುವ ವೇಳೆ ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಯುವಕ ರಕ್ಷಣೆಗೆಂದು ಓಡಿ ಬಂದಿದ್ದಾನೆ. ಈ ವೇಳೆ ಯುವಕರು ಪರಾರಿಯಾಗಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪರಾರಿಯಾಗಿರುವ ಯುವಕರ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತಗೊಂಡಿದ್ದಾರೆ.
ಮೋಹನ್ ಚೌಕಿಯಲ್ಲಿ ಪೋಸ್ಟಿಂಗ್ನಲ್ಲಿರುವ ಪೊಲೀಸ್ ಕಾನ್ಸ್ಟೇಬಲ್ ಶ್ರೀಕಾಂತ್ ಅವರನ್ನು ಬೈಕ್ನಲ್ಲಿ ಬಂದ ಯುವಕರು ಥಳಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪ್ಯಾರಾ ಇನ್ಸ್ಪೆಕ್ಟರ್ ದಾಧಿಬಾಲ್ ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ಮನೆಯಿಂದ ಚಿನ್ನಾಭರಣ ಕಳವು ಆರೋಪ: ಪೊಲೀಸ್ ಕಾನ್ಸ್ಟೇಬಲ್ ಬಂಧನ