ಪೂರ್ವ ಮೆದಿನಿಪುರ್ (ಪಶ್ಚಿಮ ಬಂಗಾಳ): ಯಾಸ್ ಚಂಡಮಾರುತದಿಂದ ರಾಜ್ಯದಲ್ಲಿ ಸಂಭವಿಸಿರುವ ಹಾನಿಗೆ ಕೇಂದ್ರ ಸರ್ಕಾರವು 20 ಸಾವಿರ ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಬೇಕೆಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದಿಘಾದಲ್ಲಿ ಮಾತನಾಡಿದ ಅವರು, ಪಿಎಂ ಜತೆ ಸಭೆ ನಡೆಸಿದ್ದು, ಹಾನಿಯ ವರದಿಯನ್ನು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿದ್ದೇವೆ. ಅಂದಾಜು 20 ಸಾವಿರ ಕೋಟಿ ರೂ.ನಷ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ದಿಘಾ ಮತ್ತು ಸುಂದರಬನ್ಗೆ ತಲಾ 10 ಸಾವಿರ ಕೋಟಿ ರೂ.ಪರಿಹಾರ ನೀಡಬೇಕು ಎಂದರು.
ನಾಳೆ ನಾವು ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಈ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದರು.
ಇಂದು ಬೆಳಗ್ಗೆ ಪ್ರಧಾನಿ ಮೋದಿ ಪಶ್ಚಿಮ ಮದಿನಿಪುರ ಜಿಲ್ಲೆಯ ಕಲೈಕುಂಡದಲ್ಲಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. 30 ನಿಮಿಷ ತಡವಾಗಿ ಆಗಮಿಸಿದ ಸಿಎಂ ಮಮತಾ ಬ್ಯಾನರ್ಜಿ, ಹಾನಿ ಕುರಿತ ವರದಿಯನ್ನು ಮೋದಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ:ರಾಮ್ದೇವ್ ಪರ ಬ್ಯಾಟಿಂಗ್ ಮಾಡಿ ವೈದ್ಯಕೀಯ ಸಂಘ ಟೀಕಿಸಿದ ಸಾಧ್ವಿ ಪ್ರಾಚಿ
ಯಾಸ್ ಚಂಡಮಾರುತವು ಪಶ್ಚಿಮ ಬಂಗಾಳದಲ್ಲಿ ಬುಧವಾರ ಭೂಕುಸಿತವನ್ನುಂಟು ಮಾಡಿತು. ಕಳೆದ ಎರಡು ದಿನಗಳಲ್ಲಿ ಪೂರ್ವ ಮದಿನಿಪುರ, ಪಶ್ಚಿಮ ಮದಿನಿಪುರ, ಬಂಕುರಾ, ದಕ್ಷಿಣ 24 ಪರಗಣ ಮತ್ತು ಜಾರ್ಗ್ರಾಮ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕೋಟ್ಯಂತರ ರೂ. ಆಸ್ತಿ, ಪಾಸ್ತಿ ನಾಶವಾಗಿದೆ.