ETV Bharat / bharat

ಯಾಸ್​​ ಆರ್ಭಟ: ಪ.ಬಂಗಾಳದಲ್ಲಿ ಇಬ್ಬರು ಬಲಿ ಹಲವರಿಗೆ ಗಾಯ.. ಲಕ್ಷಾಂತರ ಮಂದಿ ಸ್ಥಳಾಂತರ - ಯಾಸ್

ಯಾಸ್ ಚಂಡಮಾರುತಕ್ಕೆ 26ರ ಮಧ್ಯಾಹ್ನ ಒಡಿಶಾದ ಬಾಲೇಶ್ವರದಲ್ಲಿ ಬಾರಿ ಪೆಟ್ಟು ಕೊಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಇಬ್ಬರು ಬಲಿಯಾದರೆ ಹಲವರು ಗಾಯಗೊಂಡಿದ್ದಾರೆ.

ಯಾಸ್​​ ಆರ್ಭಟ
ಯಾಸ್​​ ಆರ್ಭಟ
author img

By

Published : May 25, 2021, 10:47 PM IST

ಕೋಲ್ಕತ್ತಾ( ಪಶ್ಚಿಮ ಬಂಗಾಳ): ಕೊರೊನಾದಿಂದ ನಲುಗಿರುವ ರಾಜ್ಯಗಳಲ್ಲೀಗ ಯಾಸ್ ಚಂಡಮಾರುತದ ಭೀತಿ ಎದುರಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಸಿಡಿಲಿನಿಂದ ಇಬ್ಬರು ಮೃತಪಟ್ಟು 4ರಿಂದ 5 ಮಂದಿ ಗಾಯಗೊಂಡಿರುವುದಾಗಿ ನೀರಾವರಿ ಸಚಿವ ಸೌಮೆನ್ ಕುಮಾರ್ ಮಹಾಪಾತ್ರ ಮಾಹಿತಿ ನೀಡಿದ್ದಾರೆ. ಇದಲ್ಲದೇ 24 ಪರಗಣ ಪ್ರದೇಶದಲ್ಲಿ 40ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ.

ಇನ್ನು ಸಿಎಂ ಮಮತಾ ಬ್ಯಾನರ್ಜಿ ಖುದ್ದು ಚಂಡಮಾರುತದ ಅನಾಹುತ ತಡೆಯಲು ಕಾರ್ಯ ಪ್ರವೃತ್ತರಾಗಿದ್ದಾರೆ. ಪೂರ್ವ ರೈಲ್ವೆ ವಲಯದ ಮಾಲ್ಡಾ - ಬಲೂರ್‌ಘಾಟ್ ಪ್ರಯಾಣಿಕರ ವಿಶೇಷ ರೈಲು ಸೇವೆಯನ್ನು ಮೇ 26 ಮತ್ತು ಮೇ 27 ರಂದು ರದ್ದುಗೊಳಿಸಿ ಇಲಾಖೆ ಪ್ರಕಟಣೆ ಹೊರಡಿಸಿದೆ. ಇಷ್ಟೇ ಅಲ್ಲದೇ ಒಟ್ಟು 38 ರೈಲು ಪ್ರಯಾಣವನ್ನು ರದ್ಧು ಪಡಿಸಿದ್ದು, ಮೊದಲೇ ಟಿಕೆಟ್ ಕಾಯ್ದಿರಿಸಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಸೇವೆಯನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಯಾವುದೇ ಸನ್ನಿವೇಶವನ್ನಾದರೂ ಎದುರಿಸುವಂತೆ ಸಿಎಂ ಮಮತಾ ಬ್ಯಾನರ್ಜಿ ಎಲ್ಲಾ ಇಲಾಖೆಗಳಿಗೂ ಸೂಚಿಸಿದ್ದಾರೆ. ಈಗಾಗಲೇ ಬಂಗಾಳ ಕೊಲ್ಲಿಯಿಂದ 155-165 ಕಿ.ಮೀಟರ್​ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಕ್ಷಣಾ ಪಡೆಗಳು ಬೀಡುಬಿಟ್ಟಿವೆ. ಅಲ್ಲದೇ ಈ ಗಾಳಿಯ ವೇಗವು 185 ಕಿ.ಮೀಟರ್ ವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಒಡಿಶಾದಲ್ಲೂ ಯಾಸ್ ಅಬ್ಬರ

ಈವರೆಗೆ ಒಟ್ಟು ಒಡಿಶಾದ ಒಟ್ಟು 11 ಜಿಲ್ಲೆಯ 2,48,049 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಿಗಾಗಿ 5,523 ಪರಿಹಾರ ಕೇಂದ್ರ ತೆರೆಯಲಾಗಿದೆ. 52 ಎನ್​ಡಿಆರ್​ಎಫ್​ ತಂಡ, 60 ಒಡಿಆರ್​​​ಎಎಫ್​​​, 206 ಅಗ್ನಿಶಾಮಕ ದಳ ಹಾಗೂ 86 ಮರ ಕತ್ತರಿಸುವ ತಂಡ ವಿವಿಧೆಡೆ ನಿಯೋಜಿಸಲಾಗಿದೆ.

ಕೇಂದ್ರಪಾರ, ಜಗತ್ಸಿಂಗ್‌ಪುರ, ಭದ್ರಾಕ್ ಮತ್ತು ಬಾಲಸೋರ್ ಜಿಲ್ಲೆಗಳು ಹೆಚ್ಚಿನ ಅಪಾಯ ವಲಯಗಳು ಎಂದು ಒಡಿಶಾ ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಜೆನಾ ಘೋಷಿಸಿದ್ದು, ಅಲ್ಲಿದ್ದ ಸ್ಥಳೀಯರನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಭುವನೇಶ್ವರ ಲಸಿಕಾ ಕೇಂದ್ರದಲ್ಲಿ ಈ ಮೊದಲು ನಿಗದಿ ಮಾಡಲಾಗಿದ್ದ ಲಸಿಕಾ ವಿತರಣೆ ಹಾಗೂ ನೋಂದಣಿ ಕಾರ್ಯವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ಇತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಯಾಸ್ ಚಂಡಮಾರುತ ಸಂಬಂಧ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.