ETV Bharat / bharat

Yaas ಎಫೆಕ್ಟ್​​: ಕೇವಲ 10 ಸೆಕೆಂಡ್​ಗಳಲ್ಲಿಯೇ ಧರೆಗುರುಳಿದ ಮನೆ..! VIDEO

ಬಿಹಾರದ ಮಧುಬನಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಕೇವಲ 10 ಸೆಕೆಂಡ್​ಗಳಲ್ಲಿ ಮನೆಯೊಂದು ಕುಸಿದುಬಿದ್ದಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೋಗಿ, ಸಿಬ್ಬಂದಿ ಪರದಾಟ
ರೋಗಿ, ಸಿಬ್ಬಂದಿ ಪರದಾಟ
author img

By

Published : May 29, 2021, 4:11 PM IST

Updated : May 29, 2021, 5:01 PM IST

ಬಿಹಾರ: ಯಾಸ್ ಸೈಕ್ಲೋನ್ ಆರ್ಭಟಕ್ಕೆ ಮಧುಬನಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಕೇವಲ 10 ಸೆಕೆಂಡ್​ಗಳಲ್ಲಿ ಮನೆಯೊಂದು ಕುಸಿದುಬಿದ್ದಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜ್ಯದಲ್ಲಿ ಯಾಸ್ ಚಂಡಮಾರುತದಿಂದಾಗಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ. ಸಿಎಂ ನಿತೀಶ್ ಕುಮಾರ್ ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದಾರೆ.

ಯಾಸ್ ಆರ್ಭಟಕ್ಕೆ ಬಂಗಾಳ, ಒಡಿಶಾ, ಜಾರ್ಖಂಡ್​ ರಾಜ್ಯಗಳು ನಲುಗಿ ಹೋಗಿವೆ. ಮುಂಜಾಗ್ರತಾ ಕ್ರಮ ಕೈಗೊಂಡರೂ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಒಡಿಶಾದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಬೈತರಾಣಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಭಾರತೀಯ ನೌಕಾಪಡೆ ಬಾಲಸೋರ್​​ನಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಹಲವಡೆ ಭೂ ಕುಸಿತ ಉಂಟಾಗಿದ್ದು, ನೂರಾರು ಮನೆಗಳು ಧರೆಗುರುಳಿವೆ.

ಉತ್ತರ ಪ್ರದೇಶ, ಬಿಹಾರ ಸೇರಿ ಹಲವು ರಾಜ್ಯಗಳಿಗೂ ಯಾಸ್​ ಎಫೆಕ್ಟ್ ತಗುಲಿದೆ. ಕತಿಹಾರ್​ನ ಸದರ್ ಆಸ್ಪತ್ರೆಯೊಳಗೆ ನೀರು ನುಗ್ಗಿದ್ದು, ರೋಗಿಗಳು ಹಾಗೂ ಸಿಬ್ಬಂದಿ ಪರದಾಡಿದ್ದಾರೆ. ಆಸ್ಪತ್ರೆ ತುಂಬೆಲ್ಲಾ ನೀರು ತುಂಬಿದ್ದರೂ, ಅಲ್ಲಿನ ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲವರು ಬೈಕ್​ಗಳ ಮೂಲಕ ಬಂದು ರೋಗಿಗಳನ್ನು ಬೇರೆಡೆಗೆ ಶಿಫ್ಟ್ ಮಾಡುತ್ತಿದ್ದಾರೆ.

Last Updated : May 29, 2021, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.