ETV Bharat / bharat

ತೌಕ್ತೆ ಚಂಡಮಾರುತ: 3 ಕೋವಿಡ್ ಕೇಂದ್ರಗಳಿಂದ 580 ರೋಗಿಗಳ ಸ್ಥಳಾಂತರ - ಮುಲುಂಡ್​ ಕೋವಿಡ್ ಕೇಂದ್ರ

ಆಮ್ಲಜನಕ ಸರಬರಾಜು ಸಿಲಿಂಡರ್‌ಗಳು, ಸುಸಜ್ಜಿತ ಆಂಬ್ಯುಲೆನ್ಸ್‌ಗಳು ಮತ್ತು ಚುಚ್ಚುಮದ್ದಿನೊಂದಿಗೆ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಸುರೇಶ್​ ಕಾಕಾನಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದಹಿಸಾರ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಮುಲುಂಡ್‌ನ ದೊಡ್ಡ ಕೋವಿಡ್​ ಕೇಂದ್ರಗಳಿಂದ 580 ಸೋಂಕಿತರನ್ನು ನಾನಾ ಮುನ್ಸಿಪಲ್ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ.

COVID
COVID
author img

By

Published : May 16, 2021, 3:21 AM IST

ಮುಂಬೈ: ತೌಕ್ತೆ ಚಂಡಮಾರುತ, ಮಳೆ ಹಾಗೂ ಬಲವಾದ ಗಾಳಿ ಬೀಸುತ್ತಿರುವುದರಿಂದ ಸಂಭವನೀಯ ಅಪಾಯದ ಮುನ್ನೆಚ್ಚರಿಕೆ ಕ್ರಮವಾಗಿ ಕಡಲ ತೀರದ ಕೋವಿಡ್​ 19 ಆರೈಕೆ ಕೇಂದ್ರಗಳಿಗೆ ದಾಖಲಾದ ಸೋಂಕಿತರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ದಹಿಸಾರ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಮುಲುಂಡ್‌ನಲ್ಲಿನ ದೊಡ್ಡ ಕೋವಿಡ್​ ಕೇಂದ್ರಗಳಿಂದ 580 ಸೋಂಕಿತ ರೋಗಿಗಳನ್ನು ನಾನಾ ಮುನ್ಸಿಪಲ್ ಆಸ್ಪತ್ರೆಗಳಿಗೆ ಸ್ಥಳಾಂತರವನ್ನು ರಾತ್ರೋರಾತ್ರಿ ಮಾಡಲಾಗುತ್ತಿದೆ.

ಶನಿವಾರ ಸಂಜೆ ಯೋಜನೆ ಮತ್ತು ಪರಿಶೀಲನಾ ಸಭೆ ನಡೆಯಿತು. ಹೆಚ್ಚುವರಿ ಪುರಸಭೆ ಆಯುಕ್ತ (ಪಶ್ಚಿಮ ಉಪನಗರ) ಸುರೇಶ್ ಕಾಕಾನಿ, ಜಿಲ್ಲಾಧಿಕಾರಿ (ಸಾರ್ವಜನಿಕ ಆರೋಗ್ಯ) ದೇವಿದಾಸ್ ಕ್ಷೀರ್​ಸಾಗರ್, ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ನಿರ್ದೇಶಕ ಡಾ.ರಮೇಶ್ ಭರ್ಮಾಲ್ ಮತ್ತು ನಿರ್ದೇಶಕ (ವಿಪತ್ತು ನಿರ್ವಹಣೆ) ಮಹೇಶ್ ನರವೇಕರ್ ಮತ್ತು ವಿವಿಧ ಆಸ್ಪತ್ರೆಗಳ ಅಧೀಕ್ಷಕರು, ವೈದ್ಯಕೀಯ ಅಧೀಕ್ಷಕರು ಮತ್ತು ವಿವಿಧ ಆಯುಕ್ತರು ಜಿಲ್ಲೆಗಳು ಉಪಸ್ಥಿತರಿದ್ದರು.

ಆಮ್ಲಜನಕ ಸರಬರಾಜು ಸಿಲಿಂಡರ್‌ಗಳು, ಸುಸಜ್ಜಿತ ಆಂಬ್ಯುಲೆನ್ಸ್‌ಗಳು ಮತ್ತು ಚುಚ್ಚುಮದ್ದಿನೊಂದಿಗೆ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಸುರೇಶ್​ ಕಾಕಾನಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.