ನವದೆಹಲಿ : ತೌಕ್ತೆ ಚಂಡಮಾರುತವು ಪಶ್ಚಿಮ ಕರಾವಳಿಯನ್ನು ಸಮೀಪಿಸುತ್ತಿದ್ದಂತೆ, ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಶನಿವಾರ ಕೇರಳ ಮತ್ತು ತಮಿಳುನಾಡಿಗೆ 'ಆರೇಂಜ್ ಬುಲೆಟಿನ್' ಹೊರಡಿಸಿದ್ದು, ಎರಡೂ ರಾಜ್ಯಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಮುನ್ಸೂಚನೆ ನೀಡಿದೆ.
ನೀರಿನ ಮಟ್ಟವು 'ಅಪಾಯ' ಮತ್ತು ಹೆಚ್ಚಿನ ಪ್ರವಾಹ ಮಟ್ಟವನ್ನು ತಲುಪುವ ಸಾಧ್ಯತೆಯಿದೆ ಎಂದು ಸಿಡಬ್ಲ್ಯೂಸಿ ತಿಳಿಸಿದೆ. ಇಂದು ಬೆಳಗ್ಗೆ 8 ಗಂಟೆಯ ಹೊತ್ತಿಗೆ, ಮಣಿಮಾಲಾ, ಕೇರಳದ ಅಚಂಕೋವಿಲ್ ಮತ್ತು ತಮಿಳುನಾಡಿನ ಕೊಡೈಯರ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಶುಕ್ರವಾರ ಸಂಜೆ ಭಾರತೀಯ ನೌಕಾಪಡೆಯ ವಕ್ತಾರರ ಟ್ವೀಟ್ ಮಾಡಿ "14ನೇ ಸಂಜೆ ಕೊಚ್ಚಿಯಿಂದ ಸೈಕ್ಲೋನ್ ತೌಕ್ತೆ ಚಂಡಮಾರುತ ಅಬ್ಬರಿಸಲಿದ್ದು, 15ನೇ ತಾರೀಖಿನ ವೇಳೆಗೆ ಈ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದಿದ್ದರು.
ಈ ಚಂಡಮಾರುತವು ಕೇರಳ, ಕರ್ನಾಟಕ, ಲಕ್ಷದ್ವೀಪ, ಗೋವಾ, ಮತ್ತು ಮಹಾರಾಷ್ಟ್ರ ಸೇರಿದಂತೆ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಮೇ 18ರ ಬೆಳಿಗ್ಗೆ ಚಂಡಮಾರುತ ಗುಜರಾತ್ ಕರಾವಳಿಯನ್ನು ಅಪ್ಪಳಿಸುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು. ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನಿಕ್ ಬಿರುಗಾಳಿಯೊಳಗೆ ತೀವ್ರಗೊಳ್ಳುವುದು" ಎಂದು ಐಎಂಡಿ ಟ್ವೀಟ್ ಮಾಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಗಳು ತೌಕ್ತೆ ಚಂಡಮಾರುತ ಎದುರಿಸಲು ಸಿದ್ಧರಾಗಿದ್ದಾರೆ. ಮತ್ತು 53 ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. 24 ತಂಡಗಳನ್ನು ಮೊದಲೇ ನಿಯೋಜಿಸಲಾಗಿದೆ.
29 ತಂಡಗಳು 5 ಅತ್ಯಂತ ದುರ್ಬಲ ರಾಜ್ಯಗಳಿಗೆ ಸ್ಟ್ಯಾಂಡ್‌ಬೈ ಆಗಿ ಸಿದ್ಧವಾಗಿವೆ ಎಂದು ಹೇಳಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ವಿಶೇಷವಾಗಿ ಕರಾವಳಿ ಪ್ರದೇಶಗಳ ಬಳಿ ಜನ ಜಾಗರೂಕರಾಗಿರಿ ಮತ್ತು ಹಾಗೂ ಎಲ್ಲಾ ರೀತಿಯಿಂದಲೂ ಸುಸಜ್ಜಿತರಾಗಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತದಿಂದ ಉಂಟಾಗುವ ಯಾವುದೇ ಅನಾಹುತವನ್ನು ಎದುರಿಸಲು ರಾಜ್ಯವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳದ ಐದು ಜಿಲ್ಲೆಗಳನ್ನು ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಆಲಪ್ಪುಳ ಮತ್ತು ಎರ್ನಾಕುಲಂನಲ್ಲಿ ರೆಡ್ ಅಲರ್ಟ್ ಎಂದು ಶುಕ್ರವಾರ ಐಎಂಡಿ ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಒಂಭತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳದಲ್ಲಿ ನಿಯೋಜಿಸಲಾಗಿದೆ.