ನವದೆಹಲಿ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತಮ್ಮ ಪಕ್ಷದ ಸ್ವಯಂ ಸೇವಕನನ್ನು ತಯಾರಿಯಲ್ಲಿರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನಿವಾರ್ ಸೈಕ್ಲೋನ್ ಎಫೆಕ್ಟ್: ಚೆನ್ನೈ-ಬೆಂಗಳೂರು ರೈಲು ಸಂಚಾರ ರದ್ದು
ರಕ್ಕಸ ನಿವಾರ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿಯ ಕಡಲ ತೀರಪ್ರದೇಶದಲ್ಲಿ ಭಾರಿ ಗಾಳಿಯೊಂದಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಹಾಗಾಗಿ, ಎಲ್ಲ ಎಎಪಿ ಸ್ವಯಂ ಸೇವಕರು ಅಗತ್ಯ ಇರುವ ಕಡೆ ಸಹಾಯ ಮಾಡಲು ಸಿದ್ಧರಾಗಿರಬೇಕು ಎಂದು ಬುಧವಾರ ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ಧತೆ ಮಾಡಿಕೊಂಡಿವೆ ಎಂದು ಭಾವಿಸಿರುವೆ. ಅಲ್ಲದೇ ಎಎಪಿ ಸ್ವಯಂ ಸೇವಕರು ಸಹ ಸಹಾಯಕ್ಕೆ ಇಳಿಯುವಂತೆ ಅವರು ಸೂಚನೆ ಕೊಟ್ಟಿದ್ದಾರೆ.
ನಿವಾರ್ ಚಂಡಮಾರುತದಿಂದ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಜನರ ಪಾರು ಮಾಡುವಂತೆ ಹಾಗೂ ಅವರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುವೆ. ಈ ಚಂಡಮಾರುತವನ್ನು ನಿಭಾಯಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಲ್ಲರೂ ಸಜ್ಜುಗೊಂಡಿದ್ದಾರೆ. ಅಗತ್ಯವಿರುವಲ್ಲೆಲ್ಲಾ ಸಹಾಯ ಮಾಡಲು ಎಲ್ಲಾ ಎಎಪಿ ಸ್ವಯಂ ಸೇವಕರು ಸಹ ಸಿದ್ಧರಾಗಿರಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ನಿವಾರ್' ಸೈಕ್ಲೋನ್ ಅಬ್ಬರ : ನಾಳೆ, ನಾಡಿದ್ದು ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್
ನಿವಾರ್ ಚಂಡಮಾರುತವು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ "ನವೆಂಬರ್ 25ರ ಮಧ್ಯರಾತ್ರಿ ಮತ್ತು ನವೆಂಬರ್ 26ರ ಮುಂಜಾನೆ" ದಾಟಲಿದೆ ಎಂದು ಐಎಂಡಿ ತನ್ನ ಇತ್ತೀಚಿನ ಬುಲೆಟಿನ್ನಲ್ಲಿ ತಿಳಿಸಿದೆ.