ETV Bharat / bharat

ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿಗೆ ವಂಚನೆ - ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿನೋದ್ ಕಾಂಬ್ಳಿ ದೂರು

ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಆನ್​ಲೈನ್ ವಂಚನೆಗೆ ಒಳಗಾಗಿದ್ದು, ವಂಚಿಸಲ್ಪಟ್ಟ ಹಣವನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Cyber fraudsters dupe former cricketer Vinod Kambli
ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿಗೆ ವಂಚನೆ: ಹಣ ವಾಪಸ್
author img

By

Published : Dec 10, 2021, 1:00 PM IST

ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಆನ್​ಲೈನ್ ವಂಚನೆಗೆ ಒಳಗಾಗಿದ್ದು, ಸುಮಾರು 1.14 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಮತ್ತೆ ಆ ಹಣ ವಾಪಸ್ ಪಡೆದುಕೊಂಡಿದ್ದಾರೆ. ವಂಚಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಮ್ಮ ಬ್ಯಾಂಕ್​ನ ಕೆವೈಸಿ (Know Your Customer) ಮಾಹಿತಿಯನ್ನು ನವೀಕರಣ ಮಾಡುವಂತೆ ವ್ಯಕ್ತಿಯೋರ್ವ ಬ್ಯಾಂಕ್ ಸಿಬ್ಬಂದಿಯೆಂದು ಹೇಳಿಕೊಂಡು ವಿನೋದ್ ಕಾಂಬ್ಳಿಗೆ ಕರೆ ಮಾಡಿದ್ದಾನೆ. ಕೆವೈಸಿ ನವೀಕರಣ ಮಾಡದಿದ್ದರೆ, ಬ್ಯಾಂಕ್​ನ ಕಾರ್ಡ್​ ನಿಷ್ಕ್ರಿಯವಾಗುತ್ತದೆ ಎಂದು ಕೂಡಾ ಆತ ಹೇಳಿದ್ದ.

ಬ್ಯಾಂಕ್​ನ ಮಾಹಿತಿಗಳನ್ನು ಹಂಚಿಕೊಂಡರೆ ಕೆವೈಸಿ ನವೀಕರಣ ಮಾಡಲಾಗುತ್ತದೆ ಎಂದು ಆತ ಹೇಳಿದಾಗ ವಿನೋದ್ ಕಾಂಬ್ಳಿ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ಕಾಂಬ್ಳಿ ಮೊಬೈಲ್​ಗೆ ಲಿಂಕ್ ಕಳಿಸಿದ ಆತ, ಈ ಆ್ಯಪ್​ ಅನ್ನು ಇನ್ಸ್​ಟಾಲ್​ ಮಾಡುವಂತೆ ಸೂಚಿಸಿದ್ದಾನೆ.

ವಿನೋದ್ ಕಾಂಬ್ಳಿ ಆ ಆ್ಯಪ್ ಇನ್ಸ್​ಟಾಲ್ ಮಾಡಿಕೊಂಡ ನಂತರ ಹಂತಹಂತವಾಗಿ 1.14 ಲಕ್ಷ ರೂಪಾಯಿಯನ್ನು ವಂಚಕ ದೋಚಿದ್ದಾನೆ. ವಂಚಕ ಸೂಚಿಸಿದ್ದು, ಎನಿ ಡೆಸ್ಕ್ (Any Desk) ಆ್ಯಪ್ ಆಗಿದ್ದು, ಬೇರೊಂದು ಮೊಬೈಲ್​ನಿಂದ ಇನ್ನೊಂದು ಮೊಬೈಲ್ ಅನ್ನು ಬಳಸಬಹುದಾಗಿದೆ. ಈ ರೀತಿಯಾಗಿ ತಾನೇ ಒಟಿಪಿ ಪಡೆದು ವಂಚಕ ಹಣ ದೋಚಿದ್ದಾನೆ ಎಂದು ತಿಳಿದುಬಂದಿದೆ.

ಡಿಸೆಂಬರ್ 3ರಂದು ವಂಚನೆ ಬೆಳಕಿಗೆ ಬಂದಿದ್ದು, ಬಾಂದ್ರಾ ಸೈಬರ್ ಠಾಣೆಯಲ್ಲಿ ವಿನೋದ್ ಕಾಂಬ್ಳಿ ದೂರು ನೀಡಿದ್ದಾರೆ. ಈ ವೇಳೆ ಬ್ಯಾಂಕ್​ನಿಂದ ವಿವರಗಳನ್ನು ತೆಗೆದುಕೊಂಡ ಸೈಬರ್ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದು, ಬ್ಯಾಂಕ್​ನ ಅಧಿಕಾರಿಗಳ ಮೂಲಕ ಹಣ ವರ್ಗಾವಣೆ ವಹಿವಾಟನ್ನು ಸ್ಥಗಿತಗೊಳಿಸಿ, ಹಣ ಮರುಪಾವತಿಯಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರು : ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ 5,31,200 ರೂ. ವಂಚನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.