ETV Bharat / bharat

'ಆನ್‌ಲೈನ್‌ ಹುಡುಗಿ' ಜೊತೆ 'ಚಾಟ್‌ ಮಸಾಲ': 11 ಲಕ್ಷ ರೂಪಾಯಿ ಕಳ್ಕೊಂಡ 77ರ ವೃದ್ಧ!

ಆನ್​ಲೈನ್​ ಡೇಟಿಂಗ್​ ಆ್ಯಪ್​ನಿಂದ ಮೋಸಕ್ಕೊಳಗಾಗಿರುವ ವೃದ್ಧನೋರ್ವ 11 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

Cyber Fraud
Cyber Fraud
author img

By

Published : Jul 21, 2021, 9:09 PM IST

Updated : Jul 21, 2021, 11:00 PM IST

ಹೈದರಾಬಾದ್​: ಆನ್​ಲೈನ್‌ ಡೇಟಿಂಗ್​ ಆ್ಯಪ್​ಗಳ ಮೂಲಕ ಈಗಾಗಲೇ ಸಾವಿರಾರು ಜನರು ಮೋಸ ಹೋಗಿದ್ದು, ಸದ್ಯ ತೆಲಂಗಾಣದಲ್ಲೂ ಅಂತಹದೊಂದು ಘಟನೆ ನಡೆದಿದೆ. ಆನ್​ಲೈನ್ ಡೇಟಿಂಗ್ ಜಾಲದಲ್ಲಿ ಸಿಲುಕಿಕೊಂಡಿರುವ 77 ವರ್ಷದ ವೃದ್ಧನೋರ್ವ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.

77 ವರ್ಷದ ವೃದ್ಧನೋರ್ವ ರಹಸ್ಯವಾಗಿ ಆನ್​ಲೈನ್​ನಲ್ಲಿ ಚಾಟ್ ಮಾಡಿದ್ದು, ಅದರ ಸದುಪಯೋಗ ಪಡೆದುಕೊಂಡಿರುವ ದುಷ್ಕರ್ಮಿಗಳು ಇಷ್ಟೊಂದು ಹಣ ವಂಚನೆ ಮಾಡಿದ್ದಾರೆ. ಹುಡುಗಿ ಹೆಸರಿನಲ್ಲಿ ಡೇಟಿಂಗ್​ ಆ್ಯಪ್​ ಓಪನ್ ಮಾಡಿದ್ದು, ಪ್ರತಿದಿನ ಚಾಟ್ ಮಾಡಿದ್ದಾರೆ. ಈ ವೇಳೆ ವೃದ್ಧ ಹುಡುಗಿ ಎಂದು ನಂಬಿರುವ ಆತ ಮೋಸ ಹೋಗಿದ್ದಾನೆ.

ಇದನ್ನೂ ಓದಿ: ಯುವತಿಯರಿಗೆ ನಡುರಸ್ತೆಯಲ್ಲೇ ಕಿರುಕುಳ ನೀಡಿದ ಪುಂಡರು... ವಿಡಿಯೋ ವೈರಲ್​

ವೃದ್ಧ ಪ್ರತಿದಿನ ಯುವತಿಗೆ ರಹಸ್ಯವಾಗಿ ಚಾಟ್ ಮಾಡಿದ್ದು, ಈ ವೇಳೆ ಆತನ ಬಳಿ ವಿವಿಧ ಕಾರಣ ಹೇಳಿ ಹಣ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೈಬರಾಬಾದ್​ ಪೊಲೀಸರು ನಗರದಲ್ಲಿ ಮೇಲಿಂದ ಮೇಲೆ ಇಂತಹ ಪ್ರಕರಣ ನಡೆಯುತ್ತಿದ್ದು, ವಂಚನೆಗೊಳಗಾಗದಂತೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.

Last Updated : Jul 21, 2021, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.