ETV Bharat / bharat

ಕ್ರಿಪ್ಟೋಕರೆನ್ಸಿ ಅಪಾಯಕಾರಿ, ಶೀಘ್ರದಲ್ಲೇ ಮಸೂದೆ ಮಂಡನೆ : ವಿತ್ತ ಸಚಿವೆ ಸೀತಾರಾಮನ್ - ರಾಜ್ಯಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ

ಕ್ರಿಪ್ಟೋಕರೆನ್ಸಿಯ ವ್ಯಾಪ್ತಿ ಅಪಾಯಕಾರಿ. ಇದು ಸಂಪೂರ್ಣ ನಿಯಂತ್ರಣ ಚೌಕಟ್ಟನ್ನು ಹೊಂದಿಲ್ಲ. ಹೀಗಾಗಿ, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕ ಬಳಿಕ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಮಸೂದೆ ಶೀಘ್ರದಲ್ಲೇ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ..

Cryptocurrency a risky area Bill to be tabled soon: Sitharaman in Rajya Sabha
ಕ್ರಿಪ್ಟೋಕರೆನ್ಸಿ ಅಪಾಯಕಾರಿ, ಶೀಘ್ರದಲ್ಲೇ ಮಸೂದೆ ಮಂಡನೆ: ರಾಜ್ಯಸಭೆಗೆ ಸಚಿವೆ ಸೀತಾರಾಮನ್ ಹೇಳಿಕೆ
author img

By

Published : Nov 30, 2021, 7:50 PM IST

ನವದೆಹಲಿ : ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಮಸೂದೆಯನ್ನು ಸಚಿವ ಸಂಪುಟ ಅನುಮೋದಿಸಿದ ತಕ್ಷಣ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಭಾಗವಾಗಿ ರಾಜ್ಯಸಭೆಯಲ್ಲಿನ ಕೋಲಾಹಲದ ನಡುವೆಯೂ ಮಾತನಾಡಿದ ವಿತ್ತ ಸಚಿವರು, ಕ್ರಿಪ್ಟೋಕರೆನ್ಸಿಯ ವ್ಯಾಪ್ತಿ ಅಪಾಯಕಾರಿ. ಇದು ಸಂಪೂರ್ಣ ನಿಯಂತ್ರಣ ಚೌಕಟ್ಟನ್ನು ಹೊಂದಿಲ್ಲ ಎಂದು ಪ್ರಶ್ನೋತ್ತರ ವೇಳೆಯಲ್ಲಿ ವಿವರಿಸಿದರು.

ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ನಿಷೇಧಿಸಲಾಗುತ್ತಿದೆಯೇ ಎಂದು ಬಿಹಾರದ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿ, ಕಳೆದ ಬಾರಿಯೂ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆಯನ್ನು ಪ್ರಮುಖ ಅಂಶಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಅದು ಸದನಕ್ಕೆ ಬಂದಿಲ್ಲ ಎಂದು ಹೇಳಿದರು.

ಇದು ಅಪಾಯಕಾರಿ ಪ್ರದೇಶವಾಗಿದೆ ಹಾಗೂ ಸಂಪೂರ್ಣ ನಿಯಂತ್ರಣದ ಚೌಕಟ್ಟಿನಲ್ಲಿ ಇಲ್ಲ. ಇದರ ಜಾಹೀರಾತುಗಳನ್ನು ನಿಷೇಧಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಆರ್‌ಬಿಐ ಮತ್ತು ಸೆಬಿ ಮೂಲಕ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಉತ್ತರಿಸಿದರು.

ಇದನ್ನೂ ಓದಿ: ಭವಿಷ್ಯದಲ್ಲಿ ಬೆರಳೆಣಿಕೆಯಷ್ಟು ಕ್ರಿಪ್ಟೋಕರೆನ್ಸಿಗಳು ಮಾತ್ರ ಉಳಿಯುತ್ತವೆ: ರಘುರಾಮ್ ರಾಜನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.