ETV Bharat / bharat

Cruise Ship​ ದಾಳಿ ಪ್ರಕರಣ: ಬಾಲಿವುಡ್ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸದ ಮೇಲೆ ಎನ್​​ಸಿಬಿ ದಾಳಿ - ಶಾರುಖ್ ಪುತ್ರ ವಶಕ್ಕೆ

ಮುಂಬೈನ ಕ್ರೂಸ್ ಹಡಗಿ(Cruise ship)ನಲ್ಲಿ ಮಾದಕ ವಸ್ತು ಬಳಕೆ ಕಂಡುಬಂದ ಬಳಿಕ ಎನ್​ಸಿಬಿ ಹಲವೆಡೆ ದಾಳಿ ನಡೆಸುತ್ತಿದೆ. ಬಾಲಿವುಡ್ ಸಿನಿಮಾ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸದ ಮೇಲೆ ಇಂದು ದಾಳಿ ನಡೆದಿದೆ.

cruise-ship-raid-ncb-raids-film-producer-imtiyaz-khatris-residence-office-in-mumbai
ಬಾಲಿವುಡ್ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸದ ಮೇಲೆ ಎನ್​​ಸಿಬಿ ದಾಳಿ
author img

By

Published : Oct 9, 2021, 9:57 AM IST

Updated : Oct 9, 2021, 1:33 PM IST

ಮುಂಬೈ: ಮಹಾನಗರಿಯಲ್ಲಿ ಎನ್​​ಸಿಬಿ ದಾಳಿ ಮುಂದುವರಿದಿದ್ದು, ಕ್ರೂಸ್ ಶಿಪ್(Cruise ship)​​ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿನಿಮಾ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆದಿದೆ.

ಬಿಜೆಪಿ ಸಂಬಂಧಿಕರ ಬಿಡುಗಡೆ ಆರೋಪ

ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಎನ್​​​ಸಿಪಿ ಸಚಿವ ನವಾಬ್ ಮಲ್ಲಿಕ್ , ಪ್ರಕರಣದಲ್ಲಿ ಬಂಧನವಾಗಿದ್ದ ಬಿಜೆಪಿ ನಾಯಕರ ಸಂಬಂಧಿಕರನ್ನು ಎನ್​ಸಿಬಿ ಬಿಡುಗಡೆ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮೂವರನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ನಾಯಕ ಮೋಹಿತ್ ಕಾಂಬೋಜ್​ ಅವರ ಸೋದರ ಮಾವ ರಿಷಭ್ ಸಚ್ ದೇವ್ ಅವರನ್ನು ಎನ್​ಸಿಬಿ ತಂಡ ಬಂಧಿಸಿದೆ ಎಂದು ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. ಆದರೆ ಡ್ರಗ್ಸ್ ಪತ್ತೆಯಾದ ತಕ್ಷಣ ಅವರನ್ನು ಬಿಡುಗಡೆ ಮಾಡಲಾಯಿತು. ಮೋಹಿತ್ ಕಾಂಬೋಜ್ ಮುಂಬೈ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರನ್ನೂ ಸೇರಿ ಪ್ರತೀಕ್ ಗಬಾ ಮತ್ತು ಅಮೀರ್ ಈ ಮೂವರನ್ನು ಯಾಕಾಗಿ ಬಿಡುಗಡೆ ಮಾಡಲಾಯಿತು ಎಂಬ ಕುರಿತು ಸ್ಪಷ್ಟನೆ ನೀಡುವಂತೆ ಸಮೀರ್ ವಾಂಖೆಡೆ ಅವರಲ್ಲಿ ನಾನು ಪ್ರಶ್ನೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಎನ್​​​ಸಿಪಿ ಸಚಿವ ನವಾಬ್ ಮಲ್ಲಿಕ್

ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ನಡೆಸಿದ್ದ ನಂತರ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದ ಪ್ರಕರಣದಲ್ಲಿ ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಶುಕ್ರವಾರದ ಮುಂಬೈ Esplanade Court ತಿರಸ್ಕರಿಸಿತ್ತು. ಈ ನಡುವೆ ಎನ್​ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ, ನಾವು ಈ ಪ್ರಕರಣದಲ್ಲಿ ತಾರ್ಕಿಕ ಅಂತ್ಯ ತಲುಪುವ ಹಂತ ತಲುಪಿದ್ದೇವೆ. ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣ ಮಂಡಿಸಲಿದ್ದೇವೆ ಎಂದಿದ್ದಾರೆ.

ಸಾಮಾಜದಲ್ಲಿ ಮಾದಕ ವಸ್ತು ಸೇವನೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ವಿವಿಐಪಿಗಳ ಮಕ್ಕಳು ರೋಲ್​ ಮಾಡೆಲ್​ಗಳಾಗುತ್ತಿದ್ದಾರೆ. ಮೊದಲು ನಮ್ಮ ಕಾರ್ಯಾಚರಣೆ ಕುರಿತು ಇವರು ಅರ್ಥಮಾಡಿಕೊಳ್ಳಬೇಕು. ಮಾದಕ ವಸ್ತು ಸೇವನೆ ತಡೆಯುವುದು ನಮ್ಮ ಗುರಿ, ಹಾಗೂ ಡ್ರಗ್ಸ್​ ಪೆಡ್ಲರ್​ಗಳ ಬಂಧನ ನಮ್ಮ ಉದ್ದೇಶ. ಅದಕ್ಕಾಗಿ ಅಕ್ಟೋಬರ್​ 11ರವರೆಗೆ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಎನ್​ಸಿಬಿ ಪರ ವಕೀಲರು ವಾದ ಮಂಡಿಸಿದರು.

ಬಳಿಕ ಕೋರ್ಟ್ ಮೂವರನ್ನು ಅ.11ರ ವರೆಗೆ ಎನ್​ಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಅ.2ರಂದು ಶನಿವಾರ ರಾತ್ರಿ ಮುಂಬೈನಿಂದ ಗೋವಾದತ್ತ ತೆರಳುತ್ತಿದ್ದ ಕ್ರೂಸ್​ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಆಯೋಜಿಸಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೇರೆ ಸಂಬಂಧ​​, ಗರ್ಭಪಾತದ ವದಂತಿ ಬಗ್ಗೆ ಮೌನ ಮುರಿದ ಸಮಂತಾ.. ಏನ್​ ಹೇಳಿದ್ರು?

Last Updated : Oct 9, 2021, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.