ETV Bharat / bharat

ಕ್ರೂಸ್ ಡ್ರಗ್ಸ್ ಪ್ರಕರಣ : ಜಾಮೀನು ಸಿಕ್ಕಿ 3 ದಿನಗಳ ನಂತ್ರ ಮಾಡೆಲ್ ಮುನ್ಮುನ್ ಧಮೇಚಾ ಬಿಡುಗಡೆ

author img

By

Published : Oct 31, 2021, 7:59 PM IST

ಜಾಮೀನು ನೀಡಿದ ನ್ಯಾಯಾಲಯ ಇಲ್ಲಿ ಇರುವಿಕೆಯನ್ನು ಗುರುತಿಸಿಕೊಳ್ಳಲು ಪ್ರತಿ ಶುಕ್ರವಾರ ಬೆಳಗ್ಗೆ 11.00 ರಿಂದ ಮಧ್ಯಾಹ್ನ 2.00ರ ನಡುವೆ ಎನ್‌ಸಿಬಿಯ ಮುಂಬೈ ಕಚೇರಿಗೆ ಹಾಜರಾಗುವಂತೆ ಆರ್ಯನ್ ಖಾನ್, ಮರ್ಚೆಂಟ್ ಮತ್ತು ಧಮೇಚಾಗೆ ತನ್ನ ವಿವರವಾದ ಆದೇಶದಲ್ಲಿ ತಿಳಿಸಿದೆ..

ಜಾಮೀನು ಸಿಕ್ಕಿ ಮೂರು ದಿನಗಳ ನಂತ್ರ ಮಾಡೆಲ್ ಮುನ್ಮುನ್ ಧಮೇಚಾ ಬಿಡುಗಡೆ

ಮುಂಬೈ : ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಅಕ್ಟೋಬರ್ 3ರಂದು ಎನ್‌ಸಿಬಿ ಬಂಧಿಸಿದ್ದ ಮಾಡೆಲ್ ಮುನ್‌ಮುನ್ ಧಮೇಚಾ ಅವರನ್ನು ಇಲ್ಲಿನ ಬೈಕುಲ್ಲಾ ಮಹಿಳಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜಾಮೀನು ಪಡೆದ ಮೂರು ದಿನಗಳ ನಂತರ ಬಿಡುಗಡೆಗೊಂಡಿದ್ದಾರೆ.

ಸಹ ಆರೋಪಿಗಳಾದ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಅವರೊಂದಿಗೆ ಇವರಿಗೂ ಸಹ ಜಾಮೀನು ನೀಡಲಾಗಿದೆ. ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ಧಮೇಚಾ ಅವರ ಪರ ವಕೀಲ ಅಲಿ ಕಾಶಿಫ್ ಖಾನ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ಎಲ್ಲಾ ಕಾನೂನು ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಆಕೆಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ನಾವು ಈಗ ಆಕೆಗೆ ಮಧ್ಯಪ್ರದೇಶಕ್ಕೆ ಹೋಗಲು ಅನುಮತಿ ಕೋರಿ ಎನ್‌ಸಿಬಿ ಮುಂದೆ ಅರ್ಜಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.

ಆರ್ಥರ್ ರೋಡ್ ಜೈಲಿನಲ್ಲಿರುವ ಆಕೆಯ ಸಹ ಆರೋಪಿ ಅರ್ಬಾಜ್ ಮರ್ಚೆಂಟ್ ಇನ್ನೂ ಬಿಡುಗಡೆಯಾಗಿಲ್ಲ. ಪ್ರಕರಣದಲ್ಲಿ ಬಂಧನದ ನಂತರ ಆರ್ಥರ್ ರೋಡ್ ಜೈಲಿನಲ್ಲಿದ್ದ ಆರ್ಯನ್ ಖಾನ್ ಶನಿವಾರ ಮನೆಗೆ ಮರಳಿದ್ದರು.

ಜಾಮೀನು ನೀಡಿದ ನ್ಯಾಯಾಲಯ ಇಲ್ಲಿ ಇರುವಿಕೆಯನ್ನು ಗುರುತಿಸಿಕೊಳ್ಳಲು ಪ್ರತಿ ಶುಕ್ರವಾರ ಬೆಳಗ್ಗೆ 11.00 ರಿಂದ ಮಧ್ಯಾಹ್ನ 2.00ರ ನಡುವೆ ಎನ್‌ಸಿಬಿಯ ಮುಂಬೈ ಕಚೇರಿಗೆ ಹಾಜರಾಗುವಂತೆ ಆರ್ಯನ್ ಖಾನ್, ಮರ್ಚೆಂಟ್ ಮತ್ತು ಧಮೇಚಾಗೆ ತನ್ನ ವಿವರವಾದ ಆದೇಶದಲ್ಲಿ ತಿಳಿಸಿದೆ.

ಅಕ್ಟೋಬರ್ 2ರಂದು ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿ ಇವರನ್ನು ವಶಕ್ಕೆ ಪಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.