ರಾವತ್‌ಭಟ (ರಾಜಸ್ಥಾನ): ರಾಜಸ್ಥಾನದ ರಾವತ್‌ಭಟ ನಗರದಲ್ಲಿ ಚಂಬಲ್ ನದಿಯ ರಾಣಾ ಪ್ರತಾಪ್ ಸಾಗರ್ ಅಣೆಕಟ್ಟಿನಲ್ಲಿ ಮೊಸಳೆ ನಾಯಿಯನ್ನು ಬೇಟೆಯಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಯಿ ನೀರಿನ ದಡದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಮೊಸಳೆ ನಾಯಿಯನ್ನು ಹಿಡಿದು, ಕಚ್ಚಿಕೊಂಡು ನೀರಿನೊಳಗೆ ಎಳೆದೊಯ್ದಿದೆ.
ನದಿಯಲ್ಲಿ ಹಲವು ಮೊಸಳೆಗಳಿವೆ ಎಂದು ಅಣೆಕಟ್ಟಿನ ಉಸ್ತುವಾರಿ ಮತ್ತು ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಹರೀಶ್ ತಿವಾರಿ ತಿಳಿಸಿದ್ದಾರೆ. ಚಳಿಗಾಲದಲ್ಲಿ ಮೊಸಳೆಗಳು ಆಗಾಗ ಸೂರ್ಯನ ಬೆಳಕಿಗಾಗಿ ದಡಕ್ಕೆ ಬರುತ್ತವೆ ಎಂದು ಅವರು ಹೇಳಿದರು.