ಮಧೇಪುರ (ಬಿಹಾರ) : ದುಷ್ಕರ್ಮಿಗಳು ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮಧೇಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮಧೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಕರ್ಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸೂರ್ಯನಾರಾಯಣ್ ಶಾ (50), ಪತ್ನಿ ಅನಿತಾ ದೇವಿ ಶಾ(46), ಪುತ್ರ ಪ್ರದ್ಯುಮಾನ್ ಶಾ (25) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಸುಮಾರು 12 ಗಂಟೆಗೆ ಘಟನೆ ನಡೆದಿದೆ. ಮನೆಯಲ್ಲಿ ಈ ಮೂವರು ಅಡುಗೆ ಮಾಡುತ್ತಿದ್ದರು. ಈ ವೇಳೆ, ಮನೆಗೆ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮಧೇಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದು, ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆಯನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ, ಮಧೇಪುರದಲ್ಲಿ ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ. ಆರೋಪಿಗಳ ಪತ್ತೆ ಬಲೆ ಬೀಸಲಾಗಿದೆ. ಸದ್ಯ ಒಂದೇ ಕುಟುಂಬದ ಮೂವರ ಹತ್ಯೆಯಾಗಿದೆ. ಮೃತ ದಂಪತಿಯ ಇಬ್ಬರು ಮಕ್ಕಳು ಮದುವೆಯಾಗಿ ಗಂಡ ಮನೆಯಲ್ಲಿದ್ದಾರೆ. ಇನ್ನೋರ್ವ ಮಗ ಕೂಲಿ ಕೆಲಸಕ್ಕೆ ಎಂದು ಬೇರೆ ರಾಜ್ಯಕ್ಕೆ ತೆರಳಿದ್ದಾನೆ. ಘಟನೆ ಬಗ್ಗೆ ತನಿಖೆ ನಡೆಸಲು ಉನ್ನತ ತಂಡವನ್ನು ರಚಿಸಲಾಗಿದೆ. ಶೀಘ್ರವೇ ಹಂತಕರನ್ನು ಬಂಧಿಸಲಾಗುವುದು. ಆರೋಪಿಗಳ ಬಂಧನದ ಬಳಿಕ ಕೊಲೆಗೆ ಕಾರಣ ತಿಳಿದುಬರಲಿದೆ ಎಂದು ಹೇಳಿದರು.
ಇದನ್ನೂ ಓದಿ : ಗುಂಡಿನ ದಾಳಿ: ಇಬ್ಬರು ಕುಖ್ಯಾತ ರೌಡಿಗಳನ್ನು ಬೆನ್ನಟ್ಟಿ ಹಿಡಿದ ಪೊಲೀಸರು
ಕ್ಷುಲ್ಲಕ ಕಾರಣಕ್ಕೆ ಮಹಿಳೆಯಿಂದ ಗುಂಡಿನ ದಾಳಿ : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಇನ್ನೋರ್ವ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿತ್ತು. ಈ ವೇಳೆ ಮದ್ದುಗುಂಡು ಮಹಿಳೆಯ ಎದೆಭಾಗದಲ್ಲಿ ಸಿಲುಕಿ ಆರು ದಿನಗಳ ಕಾಲ ಚಿಕಿತ್ಸೆ ಸಿಗದೇ ಪರದಾಡಿದ್ದರು. ಗಾಯಗೊಂಡ ಮಹಿಳೆಯನ್ನು ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿ ನಿವಾಸಿಯಾದ ಕಾಜಲ್ ದೇವಿ, ಪೂನಮ್ ಸಿಂಗ್ ಗುಂಡಿನ ದಾಳಿ ನಡೆಸಿದ ಮಹಿಳೆ ಎಂದು ಗುರುತಿಸಲಾಗಿತ್ತು.
ಇಲ್ಲಿನ ಟಿಕಾರಾಮ್ ನಿವಾಸಿಯಾಗಿರುವ ಕಾಜಲ್ ದೇವಿ ಅವರ ಪತಿ ಕನ್ಹಯ್ಯಾ ಮತ್ತು ಅವರ ಪಕ್ಕದ ಮನೆ ನಿವಾಸಿಯಾಗಿರುವ ಪೂನಂ ಸಿಂಗ್ ನಡುವೆ 500 ರೂಪಾಯಿಗೆ ಜಗಳ ಆರಂಭವಾಗಿತ್ತು. ಈ ವೇಳೆ, ಪತಿಯ ಪರ ಕಾಜಲ್ ದೇವಿ ವಕಾಲತ್ತು ವಹಿಸಿಕೊಂಡು ಬಂದಿದ್ದರು. ಇಬ್ಬರ ನಡುವೆ ವಾಗ್ವಾದ ಮುಂದುವರೆದಿದ್ದು, ಈ ವೇಳೆ ಪೂನಂ ಸಿಂಗ್ ತನ್ನಲ್ಲಿದ್ದ ಬಂದೂಕಿನಿಂದ ಕಾಜಲ್ ಮೇಲೆ ಗುಂಡು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡ ಕಾಜಲ್ ದೇವಿ ಅವರನ್ನು ಪತಿ ಕನ್ಹಯ್ಯಾ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು.