ETV Bharat / bharat

ಪ್ರೀತಿಸುವಂತೆ ಪೀಡಿಸಿ ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ರವಾನಿಸಿದ ಶಿಕ್ಷಕಿ! ದೈಹಿಕ ಸಂಬಂಧಕ್ಕೆ ಒತ್ತಡ ಆರೋಪ

ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗೆ ಶಿಕ್ಷಕಿಯೇ ಅಶ್ಲೀಲ ಸಂದೇಶ ರವಾನಿಸಿ, ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ ಆರೋಪದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

crime-news-school-teacher-fell-in-love-with-a student-pressured-him-to-have-Relations -in-kanpur
ವಿದ್ಯಾರ್ಥಿಗೆ ಶಿಕ್ಷಕಿಯಿಂದ ಅಶ್ಲೀಲ ಸಂದೇಶ ರವಾನೆ, ದೈಹಿಕ ಸಂಬಂಧಕ್ಕೆ ಒತ್ತಡ ಆರೋಪ
author img

By ETV Bharat Karnataka Team

Published : Oct 12, 2023, 5:07 PM IST

ಕಾನ್ಪುರ (ಉತ್ತರ ಪ್ರದೇಶ): ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ಕಳುಹಿಸುವ ಮೂಲಕ ತನ್ನೊಂದಿಗೆ ದೈಹಿಕ ಸಂಬಂಧಕ್ಕೆ ಬಲವಂತ ಮಾಡಿರುವ ಆರೋಪ ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ. ಈ ಕುರಿತು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಲ್ಲಿನ ಕ್ಯಾಂಟ್​ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಶಿಕ್ಷಕಿಯ ವಿರುದ್ಧ 10ನೇ ತರಗತಿ ವಿದ್ಯಾರ್ಥಿಯ ಕುಟುಂಬ ಈ ಗಂಭೀರ ಆರೋಪ ಮಾಡಿದೆ. ''ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕಿ ತಮ್ಮ ಮಗನನ್ನು ಪ್ರೀತಿಸುವಂತೆ ಮತ್ತು ಲೈಂಗಿಕ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದಾರೆ'' ಎಂದು ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ. ಅಲ್ಲದೇ, ''ಆರೋಪಿ ಶಿಕ್ಷಕಿ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಲೈಂಗಿಕ ಸಂಬಂಧದ ಜೊತೆಗೆ ವಿದ್ಯಾರ್ಥಿಯ ಮೇಲೆ ಮತಾಂತರಕ್ಕೆ ಒತ್ತಡ ಹೇರುತ್ತಿದ್ದಾರೆ'' ಎಂದೂ ದೂರಲಾಗಿದೆ.

''ಈ ವಿಚಾರದ ಕುರಿತು ಶಿಕ್ಷಕಿಯ ಬಳಿ ನೇರವಾಗಿ ಪ್ರಶ್ನಿಸಲಾಗಿದೆ. ಆಕೆ ಒಪ್ಪಿಕೊಂಡಿದ್ದಾರೆ. ನಂತರ ಈ ವಿಷಯವನ್ನು ಆಕೆಯ ಕುಟುಂಬದ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಶಿಕ್ಷಕಿಯ ಪತಿ ಮತ್ತು ಆಕೆಯ ಸಹೋದರ ಕೂಡ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ನಮ್ಮ ಕುಟುಂಬಕ್ಕೆ ಹಾನಿ ಮಾಡುವ ಆತಂಕ ಎದುರಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು'' ಎಂದು ವಿದ್ಯಾರ್ಥಿಯ ತಂದೆ ತಮ್ಮ ದೂರಿನಲ್ಲಿ ಕೋರಿದ್ದಾರೆ.

ಈ ಬಗ್ಗೆ ಕ್ಯಾಂಟ್​ ಠಾಣೆಯ ಎಸಿಪಿ ಬ್ರಿಜ್ ನಾರಾಯಣ್ ಸಿಂಗ್​ ಪ್ರತಿಕ್ರಿಯಿಸಿ, ''ಶಿಕ್ಷಕಿಯ ಕಿರುಕುಳ ಕುರಿತು ಮೂರು ದಿನಗಳ ಹಿಂದೆ ವಿದ್ಯಾರ್ಥಿಯ ತಂದೆಯೊಬ್ಬರು ಠಾಣೆಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ಸತ್ಯಾಂಶ ಕಂಡುಬಂದರೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ.

ಪತ್ನಿ ವಿರುದ್ಧ ಪತಿಯಿಂದ ದೂರು: ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಪತಿಯೊಬ್ಬ ತನ್ನ ಪತ್ನಿ ವಿರುದ್ಧ ದೂರು ದಾಖಲಿಸಿದ ಘಟನೆ ಲಖನೌದಲ್ಲಿ ನಡೆದಿದೆ. ವೈದ್ಯರಾಗಿರುವ ಪತಿ, ''ತನಗೆ ಹೆಂಡತಿ ಹೊಡೆಯುತ್ತಾಳೆ. ಮನೆಯ ವಸ್ತುಗಳನ್ನೂ ಒಡೆದು ಹಾಕುತ್ತಾಳೆ. ಜೋರಾಗಿ ಶಬ್ದದೊಂದಿಗೆ ಹಾಡುಗಳನ್ನು ಕೇಳುತ್ತಾಳೆ. ಇದನ್ನು ಪ್ರಶ್ನಿಸಿದಾಗ ಪ್ರತಿ ಸಲವೂ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾಳೆ. ಇದರಿಂದ ನನ್ನ ಮಾನಸಿಕ ಹಾಗೂ ದೈಹಿಕ ಪರಿಸ್ಥಿತಿ ಹದಗೆಡುವಂತಾಗಿದೆ'' ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ಧಾರೆ.

ಇದನ್ನೂ ಓದಿ: ಸರ್​ ನನ್ನ ಹೆಂಡ್ತಿ ನನಗೆ ಥಳಿಸುತ್ತಾಳೆ, ಆಕೆಯಿಂದ ನನ್ನನ್ನು ಕಾಪಾಡಿ: ಪೊಲೀಸರಿಗೆ ಮೊರೆ ಹೋದ ವೈದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.