ETV Bharat / bharat

ಸಹೋದರಿಯರಿಬ್ಬರ ಸಲಿಂಗ ವಿವಾಹಕ್ಕೆ ಪೋಷಕರಿಂದ ತೀವ್ರ ವಿರೋಧ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ - ಸಹೋದರಿಯರಿಬ್ಬರ ಸಲಿಂಗ ವಿವಾಹಕ್ಕೆ ವಿರೋಧ

ಫರೂಕಾಬಾದ್‌ನಲ್ಲಿ ಇಬ್ಬರು ಹುಡುಗಿಯರು ಪರಸ್ಪರ ಮದುವೆಯಾಗಲು ಹಠ ಹಿಡಿದಿರುವುದು ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ. ಕುಟುಂಬಸ್ಥರು ಮತ್ತು ಪೊಲೀಸರ ಮನವೊಲಿಕೆ ನಂತರವೂ ಈ ಇಬ್ಬರೂ ಹುಡುಗಿಯರು ಮದುವೆಯಾಗಲು ಪಟ್ಟು ಹಿಡಿದಿದ್ದಾರೆ.

Cousin sisters fall in love
ಸಹೋದರಿಯರಿಬ್ಬರ ಸಲಿಂಗ ವಿವಾಹಕ್ಕೆ ಪೋಷಕರಿಂದ ತೀವ್ರ ವಿರೋಧ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಈ ವಿಚಾರ...
author img

By ETV Bharat Karnataka Team

Published : Oct 6, 2023, 8:29 AM IST

ಫರೂಕಾಬಾದ್ (ಉತ್ತರ ಪ್ರದೇಶದ): ಉತ್ತರ ಪ್ರದೇಶದ ಫರೂಕಾಬಾದ್‌ನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಕೊತ್ವಾಲಿ ಮೊಹಮ್ಮದಾಬಾದ್ ಪ್ರದೇಶದಲ್ಲಿ, ಇಬ್ಬರು ಸೋದರಿಯರು ಪರಸ್ಪರ ಮದುವೆಯಾಗಲು ಪಟ್ಟು ಹಿಡಿದಿದ್ದಾರೆ. ಆದರೆ, ಇವರಿಬ್ಬರ ಸಲಿಂಗ ಸಂಬಂಧಕ್ಕೆ ಪೋಷಕರು ತೀವ್ರ ವಿರುದ್ಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದರೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಲಾಗಿದೆ.

''ಫರೂಕಾಬಾದ್‌ ಪ್ರದೇಶದಲ್ಲಿ 31 ವರ್ಷದ ಯುವತಿ ತನ್ನ 26 ವರ್ಷದ ಸೋದರ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದಾಳೆ. ಇಬ್ಬರು ಸಹೋದರಿಯರು ಯಾವಾಗಲೂ ಒಟ್ಟಿಗೆ ಎಲ್ಲ ಕಡೆ ಹೋಗುತ್ತಾರೆ. ಇಬ್ಬರೂ ಹುಡುಗಿಯರು ಬುಧವಾರ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ವಿಚಾರ ತಿಳಿದ ಇಬ್ಬರು ಯವತಿಯರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ'' ಎಂದು ಮೊಹಮ್ಮದಾಬಾದ್‌ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​​ ಅಮರ್‌ಪಾಲ್ ಸಿಂಗ್ ಹೇಳಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು: ''ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರೂ ಯುವತಿಯಿರಿಂದ ಮಾಹಿತಿ ಪಡೆದುಕೊಂಡರು. ಇದರೊಂದಿಗೆ ಇಬ್ಬರೂ ಯುವತಿಯರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲಾಯಿತು. ಅಲ್ಲದೇ, ಇಬ್ಬರೂ ಹುಡುಗಿಯರಿಗೆ ಸಾಕಷ್ಟು ತಿಳಿ ಹೇಳುವ ಪ್ರಯತ್ನವೂ ನಡೆದಿದೆ. ಇದರೊಂದಿಗೆ ಅವರ ಕುಟುಂಬದ ಸದಸ್ಯರು ಇಬ್ಬರೂ ಹುಡುಗಿಯರಿಗೆ ಸಾಕಷ್ಟು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೂ ಕೂಡ ಈ ಇಬ್ಬರು ಹುಡುಗಿಯರು ಮದುವೆಯಾಗಲು ಹಠ ಹಿಡಿದಿದ್ದಾರೆ. ಇಬ್ಬರೂ ಹುಡುಗಿಯರು ಒಟ್ಟಿಗೆ ವಾಸಿಸಲು ಬಯಸುತ್ತಿದ್ದಾರೆ . ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಲಿಂಗ ವಿವಾಹವಾಗಿ ಅಭಿಮಾನಿಗಳ ಎದೆಗೆ ಬೆಂಕಿ ಇಟ್ಟ ವಿಶ್ವವಿಖ್ಯಾತ ಸುಂದರಿಯರು!

ಗರ್ಭಿಣಿ ಸ್ನೇಹಿತೆಯನ್ನೇ ವಿವಾಹವಾಗಿದ್ದ ಯುವತಿ: ಮತ್ತೊಂದು ಪ್ರಕರಣದಲ್ಲಿ, ಉತ್ತರ ಪ್ರದೇಶದ ಬದೌನ್​ನಲ್ಲಿ ಇಬ್ಬರು ಮಹಿಳೆಯರು ವಿವಾಹವಾಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಯುವತಿಯೊಬ್ಬಳು ತನ್ನ ಗರ್ಭಿಣಿ ಸ್ನೇಹಿತೆಯನ್ನೇ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಇಬ್ಬರೂ ಪರಸ್ಪರ ಹೂವಿನ ಮಾಲೆ ಹಾಕಿಕೊಂಡಿರುವ ಹಾಗೂ ಹಣೆಗೆ ಸಿಂಧೂರ ಹಚ್ಚುತ್ತಿರುವ ಮದುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದನ್ನು ಕಂಡ ಕುಟುಂಬಸ್ಥರು ಬೆಚ್ಚಿಬಿದ್ದಿದ್ದರು. ವಿವಾಹದ ನಂತರ, ಮನೆಗೆ ಮರಳಿದ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ.

ದತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಪ್ರತ್ಯೇಕ ಗ್ರಾಮಗಳಲ್ಲಿ ನೆಲೆ ಸುತ್ತಿದ್ದ ಇಬ್ಬರೂ ದತಗಂಜ್‌ ಪ್ರದೇಶದಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಪರಸ್ಪರ ಬದುಕಿನ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಪತಿ ಕಿರುಕುಳ ನೀಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಒಬ್ಬ ಮಹಿಳೆ ಮತ್ತೊಬ್ಬ ಯುವತಿಗೆ ತಿಳಿಸಿದ್ದಳು. ವಿಷಯ ತಿಳಿದ ತಕ್ಷಣವೇ ಆಕೆಯ ಸ್ನೇಹಿತೆ ಅವಳ ಮನೆ ತಲುಪಿದ್ದಳು. ಸೆ.26ರಂದು ಇಬ್ಬರೂ ವಾಕಿಂಗ್ ಹೋಗುವ ನೆಪ ಮಾಡಿಕೊಂಡು ಮನೆಯಿಂದ ಹೊರಟು ಬರೇಲಿಗೆ ಬಂದಿದ್ದರು. ಇಲ್ಲಿ ಇಬ್ಬರೂ ದೇವಸ್ಥಾನಯೊಂದರಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.