ETV Bharat / bharat

Lookout issued: 300 ಕೋಟಿ ರೂಪಾಯಿ ವಂಚನೆ, ಆರೋಪಿ ಮೆಹ್ತಾ ದಂಪತಿ ವಿರುದ್ಧ ಲುಕ್​ಔಟ್​ ನೋಟಿಸ್​ ಜಾರಿ - ಮೆಹ್ತಾ ದಂಪತಿ

ಬಹುಕೋಟಿ ವಂಚನೆ ನಡೆಸಿ ನಾಪತ್ತೆ ಆಗಿರುವ ಮುಂಬೈನ ಮೆಹ್ತಾ ದಂಪತಿ ವಿರುದ್ಧ ಮಧ್ಯಪ್ರದೇಶ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದಾರೆ.

ಲುಕ್​ಔಟ್​ ನೋಟಿಸ್​ ಜಾರಿ
ಲುಕ್​ಔಟ್​ ನೋಟಿಸ್​ ಜಾರಿ
author img

By

Published : Jun 19, 2023, 1:38 PM IST

ಮುಂಬೈ / ಭೋಪಾಲ್: ನಕಲಿ ಯೋಜನೆಗಳು, ಡ್ರಗ್ಸ್​ ದಂಧೆ, ಡಿಜಿಟಲ್​ ಕರೆನ್ಸಿ ಸೇರಿದಂತೆ 300 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಮುಂಬೈ ದಂಪತಿ ವಿರುದ್ಧ ಮಧ್ಯಪ್ರದೇಶ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದಾರೆ. ಭಾರೀ ಅಕ್ರಮದಲ್ಲಿ ಭಾಗಿಯಾಗಿ ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ.

ಆರೋಪಿಗಳನ್ನು ಆಶಿಶ್ ಮೆಹ್ತಾ ಮತ್ತು ಶಿವಾನಿ ಮೆಹ್ತಾ ಎಂದು ಗುರುತಿಸಲಾಗಿದೆ. ದಂಪತಿ ಬಂಧನಕ್ಕಾಗಿ 2 ಬಾರಿ ಮುಂಬೈನಲ್ಲಿ ಕಾರ್ಯಾಚರಣೆ ನಡಸಿದ್ದ ಪೊಲೀಸರು ವಿಫಲವಾಗಿದ್ದರು. ಹೀಗಾಗಿ ಅವರ ಬಂಧನಕ್ಕಾಗಿ ಇದೀಗ ಲುಕ್​ಔಟ್​ ನೋಟಿಸ್​​​​ ಹೊರಡಿಸಲಾಗಿದೆ.

ಮೆಹ್ತಾ ದಂಪತಿ ಹಲವಾರು ದಂಧೆಗಳಲ್ಲಿ ಭಾಗಿಯಾಗಿದ್ದಾರೆ. ಗೋರೆಗಾಂವ್ ಸ್ಕೈ-ರೈಸ್‌ನಲ್ಲಿರುವ ತಮ್ಮ ಐಷಾರಾಮಿ ಮನೆಯಲ್ಲಿ ನಕಲಿ ಯೋಜನೆಗಳು, ಡಿಜಿಟಲ್ ಕರೆನ್ಸಿ ಮತ್ತು ಡ್ರಗ್ಸ್ ಸೇರಿದಂತೆ ಹಲವು ದಂಧೆಗಳನ್ನು ನಡೆಸುತ್ತಿದ್ದರು ಎಂದು ಶಂಕಿಸಲಾಗಿದೆ. ಅದು ಈವರೆಗೂ ಎಲ್ಲಿಯೂ ಬಯಲಾಗಿರಲಿಲ್ಲ. ಕೇಸ್​ಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಮೊದಲು ಜೂನ್ 11 ರಂದು ಮುಂಬೈಗೆ ಬಂದು, ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮೆಹ್ತಾ ದಂಪತಿಗೆ ಸಮನ್ಸ್ ನೀಡಿದ್ದರು.

ಇದನ್ನೂ ಓದಿ: ನೀಟ್ ಪರೀಕ್ಷೆ ಎದುರಿಸುವುದು ಹೇಗೆ?: ದೇಶಕ್ಕೇ ಮೊದಲ ರ‍್ಯಾಂಕ್​ ಪಡೆದ ವರುಣ್ ಚಕ್ರವರ್ತಿ ವಿಶೇಷ ಸಂದರ್ಶನ

ಇದಾದ ಬಳಿಕ ಇಬ್ಬರು ನಾಪತ್ತೆಯಾಗಿದ್ದಾರೆ. ಬಹುದೊಡ್ಡ ಹಗರಣ ನಡೆಸಿರುವ ದಂಪತಿಯ ಬಂಧನಕ್ಕಾಗಿ ಪೊಲೀಸರು ಅವಿರತ ಶ್ರಮ ಪಡುತ್ತಿದ್ದಾರೆ. ಆಶಿಶ್ ಮೆಹ್ತಾ ಮತ್ತು ಅವರ ಪತ್ನಿ ಶಿವಾನಿ ಮೆಹ್ತಾ ಮಾದಕ ದ್ರವ್ಯ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದಲ್ಲಿ ವಿಚಾರಣೆಗಾಗಿ ಬಂಧಿಸಲು ಹುಡುಕಾಟವನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶಕ್ಕೆ ಪರಾರಿ ಶಂಕೆ: ದಂಪತಿ ಪತ್ತೆಗೆ 8 ಸದಸ್ಯರ ಪೊಲೀಸ್​ ತಂಡವನ್ನು ರಚಿಸಲಾಗಿದ್ದು, ಜೂ.16ರಂದು ಮತ್ತೆ ಮುಂಬೈ ತಲುಪಿದೆ. ತಂಡವು ಮುಂಬೈ ಪೊಲೀಸರ ಸಹಾಯವನ್ನು ಕೋರಿದೆ. ವಂಚನೆ ಮಾಡಿದ ಪಲಾಯನ ದಂಪತಿಗಳನ್ನು ಪತ್ತೆಹಚ್ಚಲು ದೂರು ದಾಖಲಿಸಿಲ್ಲ. ದಂಪತಿಗಳು ವಿವಿಧ ಖಾತೆಗಳಲ್ಲಿ 174 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿ ಅವರು ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ.

174 ಕೋಟಿ ಖಾತೆಗಳಿಗೆ ವರ್ಗ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದಂಪತಿ ವಿವಿಧ ಖಾತೆಗಳಿಗೆ 174 ಕೋಟಿ ರೂಪಾಯಿ ವರ್ಗ ಮಾಡಲಾಗಿದೆ. ನಿಸಾರ್ ಜುಬೇರ್ ಖಾನ್ ಎಂಬಾತ ಮೆಹ್ತಾ ದಂಪತಿಯ ಕೊರಿಯರ್ ನಾಯ್​ ಆಗಿದ್ದ. ಮಧ್ಯಪ್ರದೇಶಕ್ಕೆ ತಲುಪಿಸಲು ಜೂನ್ 6 ರಂದು ಪಾರ್ಸೆಲ್ ತೆಗೆದುಕೊಂಡಿದ್ದರು. ಪ್ರತಿ ಡೆಲಿವರಿಗೂ ಮುನ್ನ ಹೊಸ ಮೊಬೈಲ್ ಹಾಗೂ ಸಿಮ್ ನೀಡಲಾಗುತ್ತಿತ್ತು. ಡೆಲಿವರಿ ಮಾಡಿದ ಬಳಿಕ ಅದನ್ನು ನಾಶಪಡಿಸಲು ತಿಳಿಸಲಾಗಿತ್ತು. ಮೆಹ್ತಾ ದಂಪತಿ ವಾಸಿಸುತ್ತಿದ್ದ ಸ್ಥಳದ ಬಗ್ಗೆಯೂ ನಕಲಿ ವಿವರ ನೀಡಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: ಆನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋದ ಯುವಕ... ಒಂಟಿ ಸಲಗದ ದಾಳಿಯಿಂದ ಜಸ್ಟ್ ಮಿಸ್!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.