ETV Bharat / bharat

ಪ್ರಿಯಕರನ ಜೊತೆ ಸೇರಿ ತಂದೆ ಕೊಂದ ಮಗಳು, ತಾಯಿ: ವೆಬ್​ ಸಿರೀಸ್​ ನೋಡಿ ಶವ ವಿಲೇವಾರಿ ಮಾಡಿದವರು ಅಂದರ್​ - ಜಾನ್ಸನ್ ಕಾಜಿನ್ ಲೋಬೋ

ತನ್ನ ಪ್ರೀತಿಗಾಗಿ ತಾಯಿ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದಾಳೆ ಮಗಳು..

Police arrested Accused
ಆರೋಪಿಗಳನ್ನು ಬಂಧಿಸಿರುವ ಪೊಲೀಸರು
author img

By

Published : Jun 6, 2023, 5:03 PM IST

Updated : Jun 6, 2023, 5:10 PM IST

ಪುಣೆ (ಮಹಾರಾಷ್ಟ್ರ): ಮಗಳ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು ಎನ್ನುವ ಕಾರಣಕ್ಕೆ ತಂದೆಯನ್ನೇ ಮಗಳು, ತಾಯಿ, ಮಗಳ ಪ್ರಿಯಕರ ಸೇರಿ ಕೊಲೆ ಮಾಡಿರುವ ಘಟನೆ ಪುಣೆ ಜಿಲ್ಲೆಯ ಶಿಕ್ರಾಪುರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ವಿವಿಧ ವೆಬ್​ ಸಿರೀಸ್​ಗಳನ್ನು ವೀಕ್ಷಿಸಿ, ಆರೋಪಿಗಳು ಮೃತದೇಹವನ್ನು ವಿಲೇವಾರಿ ಮಾಡಿದ್ದಾರೆ. ಮೃತರನ್ನು ಜಾನ್ಸನ್ ಕಾಜಿನ್ ಲೋಬೋ ಎಂದು ಗುರುತಿಸಲಾಗಿದೆ.

ಮಗಳ ಪ್ರೇಮ ಪ್ರಕರಣಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ತಾಯಿ ಬೆಂಬಲ ನೀಡಿದ್ದರು. ತಂದೆಯ ನಿರಂತರ ವಿರೋಧಕ್ಕೆ ಬೇಸತ್ತು ಮಗಳು-ತಾಯಿ ಹಾಗೂ ಗೆಳೆಯ ತಂದೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಶಿಕ್ರಾಪುರ ಪೊಲೀಸರು ಪ್ರಕರಣವನ್ನು ಭೇದಿಸಿ ಇದೀಗ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣದ ಕುರಿತು ಅನುಮಾನ ಬಂದು, ವಡ್ಗಾವ್​ ಶೆರಿಯ ಸಾಯಿಕೃಪಾ ಸೊಸೈಟಿ ನಿವಾಸಿ 23 ವರ್ಷದ ಅಗ್ನೆಲ್​ ಜಾಯ್​ ಕಸ್ಬೆ ಎಂಬಾತನನ್ನು ವಶಕ್ಕೆ ಪಡೆದ ಶಿಕ್ರಾಪುರ ಪೊಲೀಸರು ವಿಚಾರಣೆ ನಡೆಸಿದ್ದು, ವಿಚಾರ ಬಯಲಾಗಿದೆ.

ಜೂನ್​ 1ರಂದು ಬೆಳಗ್ಗೆ ಸುಮಾರು 7.30ಕ್ಕೆ ಪುಣೆ ಜಿಲ್ಲೆಯ ಶಿರೂರಿನಲ್ಲಿ, ಪುಣೆ ಅಹಮದ್‌ನಗರ ಹೆದ್ದಾರಿ ರಸ್ತೆ ಬಳಿಯ ಪೆಟ್ರೋಲ್ ಪಂಪ್ ಬಳಿ ಜಿತೇಂದ್ರ ಲಾಲ್ವಾನಿ ಎಂಬುವರ ಪ್ಲಾಟಿಂಗ್ ಬಳಿ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ, ಆತನ ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದು ಪತ್ತೆಯಾಗಿತ್ತು. ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದ ಕಾರಣ ಗುರುತು ಹಿಡಿಯುವುದು ಕೂಡ ಕಷ್ಟಕರವಾಗಿತ್ತು. ಈ ಕುರಿತು ಶಿಕ್ರಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದರಿಂದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ಎರಡು ತಂಡಗಳನ್ನು ರಚಿಸಿದ್ದ ಪೊಲೀಸರು, ಎಲ್ಲ ರೀತಿಯಿಂದಲೂ ತನಿಖೆ ಪ್ರಾರಂಭಿಸಿದ್ದರು. ಈ ಎರಡೂ ತಂಡಗಳು ಶಿಕ್ರಾಪುರದಿಂದ ಚಂದನನಗರ, ವಡ್ಗಾಂವ್​ ಶೇರಿ ಸೇರಿ ಪುಣೆ ಪ್ರದೇಶದವರೆಗಿನ 300ಕ್ಕೂ ಹೆಚ್ಚಿನ ಸಿಸಿಟಿವಿಗಳನ್ನು ಸುಮಾರು ನಾಲ್ಕು ದಿನಗಳ ಕಾಲ ಸತತವಾಗಿ ಪರಿಶೀಲಿಸಿವು. ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ ಪೊಲೀಸರಿಗೆ ವ್ಯಾಗನರ್​ ಕಾರನ್ನು ಈ ಕೃತ್ಯದಲ್ಲಿ ಬಳಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕಾರು ಜನ್ಯ ಕಸ್ಬೆ ಅವರಿಗೆ ಸೇರಿರುವ ಬಗ್ಗೆ ಮಾಹಿತಿ ದೊರಕಿದೆ.

ಆತನನ್ನು ವಿಚಾರಣೆ ನಡೆಸಿದಾಗ ಮೇ 31ರಂದು ಅದೇ ವ್ಯಾಗನಾರ್ ಕಾರ್ ನಂಬರ್ ಎಂ.ಎಚ್. 12 ಸಿ.ಕೆ. 3177 ಅನ್ನು ಅವರ ಮಗ ಆಗ್ನೆಲ್ ಜಾಯ್ ಕಸ್ಬೆ ತೆಗೆದುಕೊಮಡು ಹೋಗಿದ್ದ ಎನ್ನುವ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಅವರ ಮಗ ಆಗ್ನೆಲ್ ಜಾಯ್ ಕಸ್ಬೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೃತರ ಪತ್ನಿ ಸಾಂಡ್ರಾ ಜಾನ್ಸನ್ ಲೋಬೋ ಹಾಗೂ ಮೃತರ ಪುತ್ರಿ ಜತೆ ಶಾಮೀಲಾಗಿ ಈ ಕೃತ್ಯ ಎಸಗಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಆರೋಪಿ ಆಗ್ನೆಲ್​ ಕಸ್ಬೆ ಹಾಗೂ ಮೃತ ಜಾನ್ಸನ್​ ಲೋಬೋ ಅವರ ಪುತ್ರಿ ಬಾಲಿಕಾ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ತಾಯಿ ಸಾಂಡ್ರಾ ಲೋಬೋ ಒಪ್ಪಿಗೆ ಸೂಚಿಸಿದ್ದರೆ, ತಂದೆ ಜಾನ್ಸನ್​ ಲೋಬೋ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯದ ಬಗ್ಗೆ ಮೃತ ಜಾನ್ಸನ್​ ಲೋಬೋ ಹಾಗೂ ಆರೋಪಿ ಸಾಂಡ್ರಾ ಲೋಬೋ ನಡುವೆ ವಾಗ್ವಾದ ಕೂಡ ನಡೆದಿತ್ತು. ತಂದೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ವಿವಿಧ ಕ್ರೈಂ ವೆಬ್‌ಸರಣಿಗಳನ್ನು ವೀಕ್ಷಿಸಿ ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದಾರೆ.

ಆರೋಪಿಗಳು ಮೇ 30ರಂದು ರಾತ್ರಿ ಮೃತ ಜಾನ್ಸನ್ ಲೋಬೋ ಅವರ ಮನೆಯಲ್ಲಿಯೇ ಲಾಠಿಯಿಂದ ಅವರ ತಲೆಗೆ ಹೊಡೆದು ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೇ 31ರ ರಾತ್ರಿ ವ್ಯಾಗನಾರ್ ಕಾರಿನಲ್ಲಿ ಶವವನ್ನು ತೆಗೆದುಕೊಂಡು ಹೋಗಿ, ಸಂಸವಾಡಿ ಬಳಿಯ ಎಚ್‌ಪಿ ಪೆಟ್ರೋಲ್ ಪಂಪ್ ಬಳಿ ಕಾರು ನಿಲ್ಲಿಸಿದ್ದರು. ಪುಣೆಯಿಂದ ಅಹಮದ್‌ನಗರ ಹೆದ್ದಾರಿ ರಸ್ತೆಯ ಬಳಿಯ ಚರಂಡಿಯಲ್ಲಿ ಮೃತದೇಹವನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ವಿಶೇಷವೆಂದರೆ, ಪತ್ನಿ ಗಂಡನನ್ನು ಕೊಲೆ ಮಾಡಿದ ಬಳಿಕ ಸಂಬಂಧಿಕರು, ನೆರೆಹೊರೆಯವರಿಗೆ ಗೊತ್ತಾಗಬಾರದು ಎಂದು ಮೃತನ ಫೋನ್ ಆನ್​ನಲ್ಲಿಟ್ಟುಕೊಂಡು ಪ್ರತಿದಿನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ಜೀವಂತವಾಗಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಿದ್ದರು. ಈ ಮೂಲಕ ಅಪರಾಧವನ್ನು ಮರೆಮಾಚುವ ಮೂಲಕ ತನಿಖಾ ವ್ಯವಸ್ಥೆಯನ್ನು ಮತ್ತು ಸಂಬಂಧಿಕರನ್ನು ದಾರಿ ತಪ್ಪಿಸುವ ಯತ್ನ ನಡೆಸಿದ್ದರು. ಆದರೆ ತನಿಖಾ ತಂಡದ ಅಧಿಕಾರಿಗಳು ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ಮಾಡಿ ಅಪರಾಧವನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ.

ಇದನ್ನೂ ಓದಿ: ವಿವಾಹೇತರ ಸಂಬಂಧದ ಅನುಮಾನ.. ಬಾಳು ನೀಡಿದ ಪತಿಯಿಂದಲೇ ಚಾಕುವಿನಿಂದ ಇರಿದು ಪತ್ನಿಯ ಹತ್ಯೆ!

Last Updated : Jun 6, 2023, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.