ETV Bharat / bharat

ಉತ್ತರಪ್ರದೇಶದಲ್ಲಿ ಹರಿಯಾಣದ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ; ಪೊಲೀಸರಿಗೆ ದೂರು - ಬಾಲಕಿ ಮೇಲೆ ಅತ್ಯಾಚಾರ

ಬಾಲಕಿ ಮೇಲೆ ಮೌಲ್ವಿಯೋರ್ವ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

minor-of-karnal-district-raped-in-shamli-uttar-pradesh-madarsa-in-shamli-molestation-with-minor-girl-in-shamli
ಉತ್ತರಪ್ರದೇಶದಲ್ಲಿ ಹರಿಯಾಣದ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ
author img

By

Published : Aug 10, 2023, 8:08 PM IST

ಕರ್ನಾಲ್​( ಹರಿಯಾಣ) : ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಹರಿಯಾಣದ ಕರ್ನಾಲ್‌ ಜಿಲ್ಲೆಯ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ಪೋಷಕರು ದೂರಿದ್ದಾರೆ. ಆರೋಪಿ ವಿರುದ್ಧ ಕರ್ನಾಲ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಕಿ ಪೋಷಕರು ನೀಡಿದ ಮಾಹಿತಿ ಪ್ರಕಾರ, ಹರಿಯಾಣದ ಕರ್ನಾಲ್‌ ಜಿಲ್ಲೆಯಿಂದ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿದ್ದ ಮದರಸಾಕ್ಕೆ ಸಂತ್ರಸ್ತೆ ಓದಲು ಬರುತ್ತಿದ್ದಳು. ಜೂನ್​ 20ರಂದು ಬಾಲಕಿ ಶಾಮ್ಲಿಯಲ್ಲಿನ ಮದರಸಾ ಸೇರಿದ್ದಳು. ಬಳಿಕ ದಿನನಿತ್ಯ ಎಂದಿನಂತೆ ತೆರಳುತ್ತಿದ್ದಳು. ಹತ್ತು ದಿನದ ಬಳಿಕ ಬಾಲಕಿಯೊಂದಿಗೆ ಮೌಲ್ವಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದನು. ಒಂದು ದಿನ ಮದರಸಾದ ಕೊಠಡಿಗೆ ಕರೆದುಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಲ್ಲಿ ತಿಳಿಸಿದ್ದಾಳೆ.

ಪೋಷಕರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಶಾಮ್ಲಿಗೆ ಬಂದ ಸಮಿತಿ ಸದಸ್ಯರು ಸಂತ್ರಸ್ತ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಕರ್ನಾಲ್​ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆ ಪ್ರಕಾರ, ಮೌಲ್ವಿಯು ಒಬ್ಬನೇ ಇರುವಾಗ ತನ್ನನ್ನು ಬಳಿಗೆ ಕರೆಯುತ್ತಿದ್ದನು. ಈ ವೇಳೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಒಂದು ದಿನ ಮದರಸಾದಲ್ಲಿನ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿದಾಗ ನನಗೆ ಹಲ್ಲೆ ನಡೆಸಿದ್ದಾನೆ. ಬಳಿಕವೂ ದಿನನಿತ್ಯ ಕಿರುಕುಳ ನೀಡುತ್ತಿದ್ದ. ನಾನು ಮದರಸಾ ಬಿಡಲು ನಿರ್ಧರಿಸಿದರೂ, ಮೌಲ್ವಿ ನನಗೆ ಇಲ್ಲಿಂದ ಬಿಡಲು ಅನುವು ಮಾಡಿಕೊಡಲಿಲ್ಲ ಎಂದು ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯು ತನ್ನ ಪೋಷಕರಲ್ಲಿ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಲ್​ ಪೊಲೀಸ್​ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಸಮಿತಿಯ ದೂರು ನೀಡಿದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕರ್ನಾಲ್​ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿರುವುದರಿಂದ ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿನ ಪೊಲೀಸರು ಪ್ರಕರಣ ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಬಾಲಕಿ ಮೇಲೆ ಅತ್ಯಾಚಾರ.. ಆರೋಪಿಯನ್ನು ಹತ್ಯೆಗೈದ ಸಂತ್ರಸ್ತೆಯ ಸಂಬಂಧಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.