ಮುಂಬೈ, ಮಹಾರಾಷ್ಟ್ರ: ವಾಣಿಜ್ಯ ನಗರಿ ಮುಂಬೈನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜೈಲಿನಲ್ಲಿ ಸಹ ಕೈದಿಗಳು 23 ವರ್ಷದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ (Unnatural Sex with Male) ಎಸಗಿರುವುದು ಬೆಳಕಿಗೆ ಬಂದಿದೆ.
ಕುಖ್ಯಾತ ಗೂಂಡಾಗಳು, ಶಾರ್ಪ್ ಶೂಟರ್ಗಳು, ಹಲವು ಸಿನಿಮಾ ತಾರೆಯರು, ಭೂಗತ ಪಾತಕಿಗಳು, ರಾಜಕಾರಣಿಗಳು ಹೀಗೆ ಹಲವು ಖ್ಯಾತ ವ್ಯಕ್ತಿಗಳು ಮುಂಬೈನ ಆರ್ಥರ್ ರೋಡ್ ಜೈಲಿನ ಗಾಳಿ ಸೇವಿಸಿದ್ದಾರೆ ಮತ್ತು ಸೇವಿಸುತ್ತಿದ್ದಾರೆ. ಈ ಕೈದಿಗಳಿಂದಾಗಿ ಈ ಜೈಲು ಜನಮನದಲ್ಲಿದೆ. ಈಗ ಈ ಜೈಲು ಮತ್ತೆ ಚರ್ಚೆಯಲ್ಲಿದೆ. ಏಕೆಂದರೆ ಇಲ್ಲಿನ ಕೈದಿಗಳೊಂದಿಗೆ ಅನುಚಿತ ವರ್ತನೆ ಹೆಚ್ಚುತ್ತಿದೆ. ಒಂದು ತಿಂಗಳೊಳಗೆ ಇಂತಹ ಹಲವು ಪ್ರಕರಣಗಳು ಈ ಕಾರಾಗೃಹದಲ್ಲಿ ಕಂಡು ಬಂದಿದ್ದು, ಸಾಕಷ್ಟು ಆಘಾತಕಾರಿಯಾಗಿದೆ.
ಹೌದು, ಆರ್ಥರ್ ರೋಡ್ ಜೈಲು ಮತ್ತೆ ಸುದ್ದಿಯಲ್ಲಿದೆ. ಇಲ್ಲಿರುವ 23 ವರ್ಷದ ಆರೋಪಿ ಯುವಕನ ಮೇಲೆ ಇನ್ನಿಬ್ಬರು ಕೈದಿಗಳು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಆರೋಪಿಗಳ ಹೆಸರು ಸಮೀರ್ ಶೇಖ್ ಅಲಿಯಾಸ್ ಪುಡಿ ಮತ್ತು ರಶೀದ್ ಫರಾಜ್. ಈ ಘಟನೆ ಕುರಿತು ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶ ಮೂಲದ 23 ವರ್ಷದ ದೂರುದಾರ ಆರ್ಥರ್ ರೋಡ್ ಜೈಲಿನಲ್ಲಿ ರಿಮಾಂಡ್ ಆಗಿದ್ದಾರೆ. ಆರೋಪಿಗಳಾದ ಸಮೀರ್ ಶೇಖ್ ಅಲಿಯಾಸ್ ಪುಡಿ ಮತ್ತು ಫರಾಜ್ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಅರ್ಥರ್ ರೋಡ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಇಬ್ಬರೂ ಆರೋಪಿಗಳು ಜೂನ್ 6ರ ರಾತ್ರಿ 2 ಗಂಟೆ ಸುಮಾರಿಗೆ ದೂರುದಾರ ಯುವಕನನ್ನು ಜೈಲಿನ ಬಾತ್ ರೂಂನ ಮೂಲೆಗೆ ಕರೆದೊಯ್ದು ಅಸ್ವಾಭಾವಿಕವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲೈಂಗಿಕ ದೌರ್ಜನ್ಯ ಬಳಿಕ ಆರೋಪಿಗಳು ಸಂತ್ರಸ್ತ ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಹೀಗಾಗಿ ನಾನು ಭಯದಿಂದ ಈ ಘಟನೆಯ ಬಗ್ಗೆ ಮಾತನಾಡಲಿಲ್ಲ. ಆದರೆ, ಜೂನ್ 9 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆರೋಪಿಗಳು ನನ್ನನ್ನು ನಿಂದಿಸಿ ಥಳಿಸಿದ್ದಾರೆ. ಪದೇ ಪದೆ ಚಿತ್ರಹಿಂಸೆ ಅನುಭವಿಸುತ್ತಿರುವುದರಿಂದ ನಾನು ಈ ವಿಷಯವನ್ನು ಜೈಲು ಆಡಳಿತದ ಗಮನಕ್ಕೆ ತಂದಿದ್ದೇನೆ ಎಂದು ಸಂತ್ರಸ್ತ ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಪ್ರಕರಣ ದಾಖಲಾದ ನಂತರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸರ್ ಜೆ. ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಎಂ ಜೋಶಿ ಮಾರ್ಗ ಠಾಣಾ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಕೈದಿಗಳು ನಮ್ಮ ಕಕ್ಷಿದಾರನ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಮೊದಲು ಶೌಚಾಲಯದೊಳಗೆ ಆತನನ್ನು ಕೆಟ್ಟದಾಗಿ ಥಳಿಸಿದ್ದಾರೆ. ನಂತರ ಸರದಿಯಂತೆ ಇಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾರೆ. ದೂರು ದಾಖಲಿಸಿದ ನಂತರವೂ ಜೈಲು ಅಧಿಕಾರಿಗಳು ಅಥವಾ ಸ್ಥಳೀಯ ಎಂ ಜೋಶಿ ಮಾರ್ಗ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತ ಯುವಕನ ವಕೀಲರು ಆರೋಪಿಸಿದ್ದಾರೆ. ಏಪ್ರಿಲ್ 17 ರಂದು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಯುವಕನನ್ನು ಭಾಂಡುಪ್ ಪೊಲೀಸರು ಬಂಧಿಸಿದ್ದರು. ಸುಳ್ಳು ಪ್ರಕರಣದಲ್ಲಿ ನನ್ನ ಮಗನನ್ನು ಜೈಲಿಗೆ ಹಾಕಲಾಗಿದೆ ಎಂದು ತಂದೆ ಅಳಲು ತೋಡಿ ಕೊಂಡಿದ್ದಾರೆ.
ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಳಿಕ ದೂರು ನೀಡಲು ಹಿಂಜರಿಯುವುದೇಕೆ?