ETV Bharat / bharat

ಪಕ್ಕದ್ಮನೆ ಯುವಕನೊಂದಿಗೆ ಮಾತಾಡ್ಬೇಡ ಎಂದ ಪತಿಯ ಗುಪ್ತಾಂಗಕ್ಕೆ ಬಿಸಿಎಣ್ಣೆ ಸುರಿದ ಪತ್ನಿ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಪತಿಯ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಸುರಿದ ಪತ್ನಿ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಧ್ಯಪ್ರದೇಶ ಅಪರಾಧ
Madhya Pradesh Crime
author img

By

Published : Jun 15, 2023, 10:12 PM IST

ಗ್ವಾಲಿಯರ್ (ಮಧ್ಯಪ್ರದೇಶ) : ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆಮಾತು ಕೇಳಿರುತ್ತೀರಿ. ಆದರೆ ಇಲ್ಲೊಂದು ಕಥೆ ವಿಭಿನ್ನ. ಪಕ್ಕದ ಮನೆಯ ಯುವಕನೊಂದಿಗೆ ಮೊಬೈಲ್​ನಲ್ಲಿ ಮಾತನಾಡಬೇಡ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಪತ್ನಿ, ರಾತ್ರಿ ಮಲಗಿದ್ದಾಗ ಪತಿಯ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗ್ವಾಲಿಯರ್​ನ ಕಂಪು ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವಿ ನಗರದ ನಿವಾಸಿ ಸುನೀಲ್ (32) ತೀವ್ರವಾಗಿ ಗಾಯಗೊಂಡಿದ್ದಾರೆ.

ಸುನೀಲ್​ ಕುಮಾರ್​ ಧಾಕಡ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಭಾವನಾ. ಇಬ್ಬರೂ ಮಾಧವಿ ನಗರದಲ್ಲಿ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಪಕ್ಕದ ಮನೆ ಮಹಿಳೆಯೊಬ್ಬರು ಸುನೀಲ್ ಜೊತೆ, ನೀವು ಕೆಲಸಕ್ಕೆ ಹೋದ ನಂತರ ನಿಮ್ಮ ಪತ್ನಿ ತನ್ನ ಪತಿಯೊಂದಿಗೆ ಮಾತನಾಡುತ್ತಾಳೆ ಎಂದು ದೂರು ನೀಡಿದ್ದರು. ಸುನೀಲ್​​ ಪತ್ನಿಯನ್ನು ಕರೆದು ವಿಚಾರಿಸಿದ್ದಾಗಲೂ ಆಕೆ, ನಾನು ಮಾತನಾಡುತ್ತಿಲ್ಲ ಎಂದೇ ಹೇಳಿದ್ದರು.

ಇತ್ತೀಚಿಗೆ ಸುನೀಲ್ ಮನೆಗೆ ಬಂದಾಗ ಭಾವನಾ ಯುವಕನೊಂದಿಗೆ ಮತ್ತೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿಗೆ ಮಾತನಾಡದಂತೆ ಸುನೀಲ್ ಎಚ್ಚರಿಕೆ ಕೊಟ್ಟಿದ್ದರು.​ ಆಕೆ ಮತ್ತೆ ಮಾತನಾಡಲು ಶುರು ಮಾಡಿದ್ದಾಗ ಬಾರಿ ಜಗಳ ನಡೆದಿದೆ. ಇದರಿಂದ ಬೇಸತ್ತ ಸುನೀಲ್ ಭಾವನಾಳ ಮೊಬೈಲ್ ಕಸಿದುಕೊಂಡಿದ್ದರು. ಇತ್ತ ಭಾವನಾ ಕೂಡ ಕೋಪಗೊಂಡು ಮನೆಯಿಂದ ಹೊರಟು ಹೋಗಿದ್ದರು.

ಇದನ್ನೂ ಓದಿ : ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ಇದಾದ ಬಳಿಕ ರಾತ್ರಿ 2 ಗಂಟೆ ಸುಮಾರಿಗೆ ಪತಿ ಗಾಢ ನಿದ್ದೆಗೆ ಜಾರಿದ್ದರು. ಇದನ್ನೇ ಕಾದು ಕುಳಿತಿದ್ದ ಭಾವನಾ ಎದ್ದು ಅಡುಗೆ ಮನೆಯಲ್ಲಿ ಎಣ್ಣೆ ಕಾಯಿಸಿದ್ದಾರೆ. ಬಿಸಿ ಬಿಸಿ ಕಾದ ಎಣ್ಣೆ ತಂದು ಪತಿಯ ಗುಪ್ತಾಂಗದ ಮೇಲೆ ಸುರಿದಿದ್ದಾರೆ. ಬಿಸಿ ಎಣ್ಣೆ ದೇಹದ ಮೇಲೆ ಬಿದ್ದು ಶೇ. 70ರಷ್ಟು ಭಾಗ ಸುಟ್ಟುಹೋಗಿದೆ.

ಘಟನೆ ನಡೆದ ಬಳಿಕ ಪತ್ನಿ ಮನೆಯಿಂದ ಓಡಿ ಹೋಗಿದ್ದಾಳೆ. ಇತ್ತ ನೋವಿನಿಂದ ನರಳುತ್ತಿದ್ದ ಸುನೀಲ್ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿಕೊಂಡಿದ್ದಾರೆ. ಧ್ವನಿ ಕೇಳಿದ ಸುತ್ತಮುತ್ತಲಿನವರು ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪತಿ ಹೇಳಿಕೆಯ ಮೇಲೆ ಪತ್ನಿ ವಿರುದ್ದ ಪ್ರಕರಣ ಕೂಡ ದಾಖಲಾಗಿದೆ. ಆರೋಪಿ ಪತ್ನಿಪತ್ತೆಗೆ ಪೊಲೀಸರು ಕಾರ್ಯಾಚರಣೆಗೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಹೆಂಡತಿಯನ್ನು ತಬ್ಬಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ ಪತಿ! ಒಂದೇ ಬುಲೆಟ್​​ಗೆ ಹಾರಿಹೋಯ್ತು ಇಬ್ಬರ ಪ್ರಾಣಪಕ್ಷಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.