ETV Bharat / bharat

ಹೆಂಡತಿಯನ್ನು ತಬ್ಬಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ ಪತಿ! ಒಂದೇ ಬುಲೆಟ್​​ಗೆ ಹಾರಿಹೋಯ್ತು ಇಬ್ಬರ ಪ್ರಾಣಪಕ್ಷಿ - ಪತಿ ಪತ್ನಿ ಇಬ್ಬರೂ ಮೃತ

ಗಂಡನೋರ್ವ ಹೆಂಡತಿಯನ್ನು ತಬ್ಬಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ ಪರಿಣಾಮ, ಇಬ್ಬರೂ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

husband-wife-killed-by-a-single-bullet-in-moradabad-following-a-quarrel
ಹೆಂಡತಿಯನ್ನು ತಬ್ಬಿಕೊಂಡು ಗುಂಡು ಹಾರಿಸಿಕೊಂಡ ಪತಿ : ಒಂದೇ ಬುಲೆಟ್​​ಗೆ ಹಾರಿತು ಇಬ್ಬರ ಪ್ರಾಣ
author img

By

Published : Jun 14, 2023, 6:08 PM IST

Updated : Jun 14, 2023, 8:19 PM IST

ಮೊರಾದಾಬಾದ್ (ಉತ್ತರ ಪ್ರದೇಶ) : ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಗಂಡನೋರ್ವ ತನ್ನ ಹೆಂಡತಿಯನ್ನು ತಬ್ಬಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ್ದು, ಪತಿ- ಪತ್ನಿ ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಇಲ್ಲಿನ ಬಿಲಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾನ್​ ಪುರ್​ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಮೃತರನ್ನು ಅನೇಕ್​ ಪಾಲ್​​ ಮತ್ತು ಸುಮನ್ ಎಂದು ಗುರುತಿಸಲಾಗಿದೆ. ಅನೇಕ್​ ಪಾಲ್​ ಚಂಡೀಗಢದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.​​

ಘಟನೆಯ ಸಂಪೂರ್ಣ ವಿವರ: ಪತಿ ತನ್ನ ಹೆಂಡತಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ್ದಾನೆ. ಗುಂಡು ಇಬ್ಬರ ಎದೆ ಸೀಳಿದೆ. ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಸೂಸೈಡ್​ ನೋಟ್​ ಪತ್ತೆಯಾಗಿಲ್ಲ. ವಿಧಿ ವಿಜ್ಞಾನ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿತ್ತು.

"ಅನೇಕ್ ಪಾಲ್ - ಸುಮನ್ ದಂಪತಿ ಬಿಲಾರಿ ಪೊಲೀಸ್​ ಠಾಣಾ ವ್ಯಾಪ್ತಿಯ ಖಾನ್​ ಪುರ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಈ ಹಿಂದೆ ಚಂಡೀಗಢದಲ್ಲಿ ವಾಸಿಸುತ್ತಿದ್ದಾಗ ಅನೇಕ್ ಪಾಲ್ ಕಷ್ಟಪಟ್ಟು ದುಡಿಯುತ್ತಿದ್ದ. ಆದರೆ ಖಾನ್‌ಪುರ ಗ್ರಾಮಕ್ಕೆ ಬಂದ ಬಳಿಕ ಅನೇಕ್‌ ಪಾಲ್‌ ಮತ್ತು ಪತ್ನಿ ಸುಮನ್‌ ಇಬ್ಬರೂ ಒಂದಲ್ಲೊಂದು ಕಾರಣಕ್ಕೆ ಜಗಳವಾಡುತ್ತಿದ್ದರು."

ಇದನ್ನೂ ಓದಿ : ಮಾದಕ ದ್ರವ್ಯ ಮಾರಾಟ ಯತ್ನ; ಹೈದರಾಬಾದ್‌ನಲ್ಲಿ ತೆಲುಗು ಚಿತ್ರ ನಿರ್ಮಾಪಕ ಅರೆಸ್ಟ್

"ಮಂಗಳವಾರ ತಡರಾತ್ರಿಯೂ ದಂಪತಿ ನಡುವೆ ಮತ್ತೆ ಜಗಳ ಪ್ರಾರಂಭವಾಗಿದೆ. ಈ ಜಗಳ ತಾರಕಕ್ಕೇರಿದೆ. ಕೋಪಗೊಂಡ ಪತಿ, ಪತ್ನಿಯನ್ನು ಗಟ್ಟಿಯಾಗಿ ತಬ್ಬಿ ಹಿಡಿದು ಕೈಯಲ್ಲಿದ್ದ ಬಂದೂಕಿನಿಂದ ಪತ್ನಿಯ ಬೆನ್ನಿಗೆ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಈ ಗುಂಡು ಇಬ್ಬರ ಎದೆ ಸೀಳಿ ಹೊರಬಂದಿದೆ. ಹೀಗಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ" ಎಂದು ದೇಹಾತ್​ ಎಸ್ಪಿ ಸಂದೀಪ್​ ಕುಮಾರ್​ ಮಾಹಿತಿ ನೀಡಿದರು.

ಮೃತ ದಂಪತಿಯ ಮಕ್ಕಳು ಪ್ರತಿಕ್ರಿಯಿಸಿ, "ತಂದೆ-ತಾಯಿ ದಿನಾ ಒಂದಲ್ಲೊಂದು ವಿಷಯಕ್ಕೆ ಜಗಳವಾಡುತ್ತಿದ್ದರು. ಮಂಗಳವಾರ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ತಂದೆ ತಾಯಿಗೆ ಗುಂಡು ಹಾರಿಸಿದ್ದಾರೆ" ಎಂದು ಹೇಳಿದರು. ಪ್ರಕರಣದ ತನಿಖೆ ಮುಂದುವರೆದಿದೆ.

ಬಿಹಾರದಲ್ಲಿ ಹೆಂಡತಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ: ವ್ಯಕ್ತಿಯೋರ್ವ ತನ್ನ ಹೆಂಡತಿ ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಖಗಾಡಿಯಾದಲ್ಲಿ ಎಂಬಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿ ಬಳಿಕ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನಿಬ್ಬರು ಗಂಡು ಮಕ್ಕಳು ಅಪ್ಪನ ದುಷ್ಕೃತ್ಯವನ್ನು ಕಂಡು ಭಯಭೀತರಾಗಿ ಓಡಿ ಹೋಗಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಮೃತರನ್ನು ಪತ್ನಿ ಪೂಜಾ ದೇವಿ (32 ವರ್ಷ) ಮತ್ತು ಹೆಣ್ಣು ಮಕ್ಕಳಾದ- ಸುಮನ್ ಕುಮಾರಿ (18 ವರ್ಷ), ಆಂಚಲ್ ಕುಮಾರಿ (16 ವರ್ಷ), ರೋಶನಿ ಕುಮಾರಿ (15 ವರ್ಷ) ಎಂದು ಗುರುತಿಸಲಾಗಿದೆ. ಮುನ್ನಾ ಯಾದವ್ (40 ವರ್ಷ) ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

Last Updated : Jun 14, 2023, 8:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.