ETV Bharat / bharat

Fear of rowdies: ರೌಡಿಗಳ ಭಯದಿಂದ ಈ ಮನೆ ಮಾರಾಟಕ್ಕಿದೆ.. ಹೊರ ಗೋಡೆಗಳ ಮೇಲೆ ವಿಚಿತ್ರ ಸಂದೇಶ! - ರೌಡಿಶೀಟರ್

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ 30 ಮನೆಗಳ ಮೇಲೆ ರೌಡಿಗಳ ಭಯದಿಂದ ಈ ಮನೆ ಮಾರಾಟಕ್ಕಿದೆ ಎಂಬ ಸಂದೇಶ ಬರೆಯಲಾಗಿದೆ. ಈ ಕುರಿತು ರೌಡಿಶೀಟರ್​ವೋರ್ವನ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

House is on sale scribbled on walls of 30 houses in UP, probe on
ರೌಡಿಗಳ ಭಯದಿಂದ ಈ ಮನೆ ಮಾರಾಟಕ್ಕಿದೆ... ಹೊರ ಗೋಡೆಗಳ ಮೇಲೆ ವಿಚಿತ್ರ ಸಂದೇಶ!
author img

By

Published : Jun 10, 2023, 10:51 PM IST

ಸಂಭಾಲ್ (ಉತ್ತರ ಪ್ರದೇಶ): ರೌಡಿಶೀಟರ್​ವೋರ್ವನ ಕಾಟದಿಂದ ಬೇಸತ್ತಿರುವ ಗ್ರಾಮಸ್ಥರು ತಮ್ಮ ಮನೆಗಳನ್ನೇ ಮಾರಾಟ ಮಾಡಲು ಮುಂದಾಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಗ್ರಾಮದ ಸುಮಾರು 30 ಮನೆಗಳ ಮೇಲೆ 'ರೌಡಿಗಳ ಭಯದಿಂದ ಈ ಮನೆ ಮಾರಾಟಕ್ಕಿದೆ' ಎಂಬ ಬರೆಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇಲ್ಲಿನ ಗುನ್ನೌರ್ ಪ್ರದೇಶದ ಫರೀದ್‌ಪುರ ಗ್ರಾಮದಲ್ಲಿ ರೌಡಿಯಿಂದ ಗ್ರಾಮಸ್ಥರು ಸಾಕಷ್ಟು ತೊಂದರೆಕ್ಕೀಡಾಗಿದ್ದಾರೆ. ಆದ್ದರಿಂದ ತಮ್ಮ ಮನೆಗಳನ್ನೂ ಮಾರಾಟ ಹಂತಕ್ಕೆ ತಲುಪಿದ್ದಾರೆ. ಮನೆಗಳ ಹೊರ ಗೋಡೆಗಳ ಮೇಲೆ ಮನೆ ಮಾರಾಟಕ್ಕಿದೆ ಎಂಬ ಸಂದೇಶಗಳನ್ನು ಬರೆದು ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ. ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನೂ ಹರಿಬಿಡಲಾಗಿದೆ. ಇದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿವೆ.

ಕಾರಣದಿಂದಾಗಿ ಗ್ರಾಮಸ್ಥರು ತಮ್ಮ ಮನೆಗಳನ್ನು ಮಾರಾಟ ಮುಂದಾಗಿದ್ದಾರೆ ಎಂಬ ವಿಷಯವು ಪೊಲೀಸರಿಗೆ ಗೊತ್ತಾಗಿದೆ. ಈ ಕುರಿತು ಈಗಾಗಲೇ ಪೊಲೀಸ್​ ಆರಂಭಿಸಿದ್ದಾರೆ. ಗ್ರಾಮದ ನಿವಾಸಿ ಅರುಣ್ ಕುಮಾರ್ ಎಂಬ ರೌಡಿಶೀಟರ್ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಗುನ್ನೌರ್​ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಈತನ ವಿರುದ್ಧ ರೌಡಿ ಶೀಟ್ ತೆರೆಯಾಲಾಗಿದ್ದು, ಫರೀದ್‌ಪುರ ಗ್ರಾಮದ ಮುಖಸ್ಥೆಯ ಪತಿ ಎಂದೂ ತಿಳಿದು ಬಂದಿದೆ.

ಇದನ್ನೂ ಓದಿ: ಮೈಸೂರಲ್ಲಿ ರೌಡಿ ಗ್ಯಾಂಗ್​​ವಾರ್: ನಡುರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಹತ್ಯೆ

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಮನೆಗಳ ಮಾರಾಟದ ಸಂದೇಶಗಳ ಬರೆದ ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಭೇಟಿ ತನಿಖೆ ಶುರು ಮಾಡಿದ್ದಾರೆ. ಗ್ರಾಮದ ಸುಮಾರು 30 ಮನೆಗಳು ದುಷ್ಕರ್ಮಿಗಳ ಭಯದಿಂದ ಮನೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂಬ ಸಂದೇಶಗಳನ್ನು ಹೊರ ಗೋಡೆಗಳ ಮೇಲೆ ಬರೆದಿರುವುದು ಕಂಡುಬಂದಿದೆ. ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆ ಗೋಡೆಗಳ ಮೇಲೆ ಬರೆದಿದ್ದ ಸಂದೇಶಗಳನ್ನು ಅಳಿಸಿ ಹಾಕಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ, ಇದೇ ಅರುಣ್ ಕುಮಾರ್ ಗೋಡೆಗಳ ಮೇಲೆ ಸಂದೇಶ ಬರೆಯುವಂತೆ ತನ್ನ ಸಹಚರರಿಗೆ ಹೇಳಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಈತನ ವಿರುದ್ಧ ಪೊಲೀಸರು ಈ ಹಿಂದೆ ದರೋಡೆ ಪ್ರಕರಣ ದಾಖಲಿಸಿದ್ದರು. ಈಗಾಗಲೇ ಆರೋಪಿ ಅರುಣ್ ಕುಮಾರ್ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ನಡೆಯುತ್ತಿದೆ. ಸದ್ಯ ಪೊಲೀಸರು ಈ ಘಟನೆ ಬಗ್ಗೆಯೂ ಹೊಸ ತನಿಖೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಸ್​ಪಿ ಹೇಳಿದ್ದಾರೆ. ಮತ್ತೊಂದೆಡೆ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ಅರುಣ್ ಕುಮಾರ್, ಮಾಜಿ ಬ್ಲಾಕ್ ಮುಖ್ಯಸ್ಥರು ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ.

ಇದನ್ನೂ ಓದಿ: ಫ್ರೀಯಾಗಿ ಊಟ ಕೊಡಲು‌ ನಿರಾಕರಿಸಿದ ಫಾಸ್ಟ್​ ಫುಡ್​ ಸೆಂಟರ್​ ಮಾಲೀಕ: ಅವಾಚ್ಯ ಶಬ್ಧಗಳಿಂದ ನಿಂದಿಸಿದ ರೌಡಿಶೀಟರ್​ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.