ಮುಜಾಫರ್‌ಪುರ : ಬಿಹಾರದ ಮುಜಾಫರ್‌ಪುರದಲ್ಲಿ ಸೇನಾ ಯೋಧನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟು ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ಪತ್ನಿ ಹಾಗೂ ಎರಡು ತಿಂಗಳ ಮಗು ಸಾವನ್ನಪ್ಪಿದ್ದಾರೆ. 8 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಹಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾ ಜಾಗರನಾಥ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಸೇನಾ ಯೋಧನನ್ನು ಹಿಮಾಂಶು ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆ ಬಳಿಕ ಪರಾರಿಯಾಗಿದ್ದ ಯೋಧ : ಸೇನಾ ಯೋಧ ತನ್ನ ಪತ್ನಿ ಮತ್ತು ಮಗುವನ್ನು ಸಜೀವ ದಹನ ಮಾಡಿದಾಗ ಈ ಘಟನೆಯ ನಂತರ ಅವರ ಕುಟುಂಬದಲ್ಲಿ ಗೊಂದಲ ಉಂಟಾಗಿತ್ತು. ಪತ್ನಿ ಮತ್ತು ಮಗುವನ್ನು ಕೊಂದು ಆರೋಪಿ ಜವಾನ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ನಂತರ ಈ ಭಾಗದ ಜನರಲ್ಲಿ ಆತಂಕ ಮೂಡಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಯೋಧನ ಹುಡುಕಾಟದಲ್ಲಿ ತೊಡಗಿದ ಪೊಲೀಸರು : ಘಟನೆ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಯ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಈ ಘಟನೆಯ ನಂತರ ಪೊಲೀಸರು ಯೋಧನ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದಾರೆ.
ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಆರೋಪ: ಅಕ್ರಮ ಸಂಬಂಧದ ಕಾರಣಕ್ಕೆ ಪತಿ ಹಾಗೂ ಸಂಬಂಧಿಕರೇ ಆಕೆಯನ್ನು ಕೊಂದಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಬ್ಯಾಂಕ್ ಉದ್ಯೋಗಿಯೊಂದಿಗೆ ಯೋಧ ಅಕ್ರಮ ಸಂಬಂಧ ಹೊಂದಿದ್ದು, ಪತ್ನಿಯಿಂದ ವಿಚ್ಛೇದನ ಬಯಸಿದ್ದ. ಆದರೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಹೊಂದಿರುವ ಕಾರಣ, ವಿಚ್ಛೇದನದಲ್ಲಿ ಸಮಸ್ಯೆ ಉಂಟಾಗಿದೆ. ಹೀಗಾಗಿ, ಯೋಧ ಮತ್ತು ಇತರೆ ಮಹಿಳೆ ಸೇರಿ ನನ್ನ ಮಗಳನ್ನು ಸುಟ್ಟು ಕೊಂದಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಜೋಧ್‌ಪುರದಲ್ಲಿ ಕೆಲಸ ಮಾಡುತ್ತಿರುವ ಹಿಮಾಂಶು : ಯೋಧ ತನ್ನ ಇಬ್ಬರು ಮಕ್ಕಳು ಮತ್ತು ಹೆಂಡತಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಮಹಿಳೆ ಮತ್ತು ಒಂದು ಮಗು ಸಾವನ್ನಪ್ಪಿದೆ. ಇನ್ನೋರ್ವ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಗೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘಟನೆಗೆ ಸಂಬಂಧಿಸಿದಂತೆ ಅಹಿಯಾಪುರ ಪೊಲೀಸ್ ಠಾಣೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಯೋಧ ಹಿಮಾಂಶು ಕುಮಾರ್ ಸದ್ಯ ರಾಜಸ್ಥಾನದ ಜೋಧ್‌ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
''ಮೃತಳ ಹೆಸರು ಸೋನಾಲ್ ಪ್ರಿಯಾ. ಮಹಿಳೆಯ ಕುಟುಂಬಸ್ಥರ ಪ್ರಕಾರ, ಆಕೆಯ ಪತಿ, ಅತ್ತೆ ಮತ್ತು ಇನ್ನೊಬ್ಬ ಮಹಿಳೆ ಸೇರಿ ಸೋನಾಲ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರ ಇಬ್ಬರು ಮಕ್ಕಳಿಗೂ ಬೆಂಕಿ ಹಚ್ಚಿದ್ದಾನೆ. ಸೋನಾಲ್ ಪತಿಯೊಂದಿಗೆ ಇನ್ನೋರ್ವ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಅದಕ್ಕಾಗಿಯೇ ಈ ಘಟನೆ ನಡೆದಿದೆ" ಎಂದು ಎಸ್‌ಕೆಎಂಸಿಎಚ್ ಒಪಿ ಉಸ್ತುವಾರಿ ವಿಜಯಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೃತಪಟ್ಟ ಪತಿಯ ಶವ ಮನೆಯಲ್ಲೇ ಸುಟ್ಟು ಹಾಕಿದ ಪತ್ನಿ!