ETV Bharat / bharat

Fake License Scam: 500ಕ್ಕೂ ಹೆಚ್ಚು ನಕಲಿ ಡ್ರೈವಿಂಗ್ ಲೈಸನ್ಸ್​ಗಳು ವಶಕ್ಕೆ, ಇಬ್ಬರು ಆರೋಪಿಗಳು ಅಂದರ್ - ವಾಹನಗಳ ಲೈಸನ್ಸ್​ಗಳು

ಅಹಮದಾಬಾದ್ ಅಪರಾಧ ವಿಭಾಗವು ನಕಲಿ ಸೇನಾ ದಾಖಲೆಗಳ ಮೇಲೆ ಡ್ರೈವಿಂಗ್ ಲೈಸನ್ಸ್ ಮಾಡುವ ದಂಧೆಯನ್ನು ಭೇದಿಸಿದೆ. ಪೊಲೀಸರು, 556 ಡ್ರೈವಿಂಗ್ ಲೈಸನ್ಸ್​ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿ ಬಳಿಯಿದ್ದ ನಕಲಿ ಕ್ಯಾಂಟೀನ್ ಕಾರ್ಡ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

Scam of Fake license
500ಕ್ಕೂ ಹೆಚ್ಚು ನಕಲಿ ಡ್ರೈವಿಂಗ್ ಲೈಸೆನ್ಸ್​ಗಳನ್ನು ವಶಕ್ಕೆ, ಇಬ್ಬರು ಆರೋಪಿಗಳು ಅಂದರ್..!
author img

By

Published : Jun 24, 2023, 4:57 PM IST

ಅಹಮದಾಬಾದ್ ( ಗುಜರಾತ್): ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಾದ ಉರಿ, ಪುಲ್ವಾಮಾ, ಅಂತನಾಗ್, ಬಾರಾಮುಲ್ಲಾದ ಸೇನಾ ಕಂಟೋನ್ಮೆಂಟ್‌ಗಳ ವಿಳಾಸಗಳಿರುವ ನಕಲಿ ಡ್ರೈವಿಂಗ್ ಲೈಸೆನ್ಸ್​ಗಳನ್ನು ಜಮ್ಮುವಿನ ಜನರಿಗೆ ನೀಡಲು ತಯಾರಿಸಲಾಗಿತ್ತು. ಪ್ರಸ್ತುತ ಈ ನಕಲಿ ದಾಖಲೆಗಳನ್ನು ಗಾಂಧಿನಗರದಲ್ಲಿ ಪೊಲೀಸ್​ ತಂಡ ವಶಪಡಿಸಿಕೊಂಡಿದೆ.

ಆರೋಪಿಗಳ ವಿಚಾರಣೆ ವೇಳೆ, ಈ ವ್ಯಕ್ತಿಗಳು 5 ರಿಂದ 9 ಸಾವಿರ ರೂಪಾಯಿ ತೆಗೆದುಕೊಂಡು ನಕಲಿ ದಾಖಲೆಗಳನ್ನು ನೀಡುತ್ತಿದ್ದರು. ಇನ್ನು ತನಿಖೆಯಲ್ಲಿ ಜಮ್ಮುವಿನ ಮೂವರು ಹಾಗೂ ಗಾಂಧಿ ನಗರದ ಮೂವರ ಹೆಸರುಗಳು ಬಯಲಿಗೆ ಬಂದಿವೆ. ಬಳಿಕ ಜಮ್ಮುವಿಗೆ ತೆರಳಲು ಪೊಲೀಸ್​ ತಂಡವನ್ನು ಸಿದ್ಧಪಡಿಸಲಾಗಿದೆ. ಮಿಲಿಟರಿ ಇಂಟೆಲಿಜೆನ್ಸ್ ಪುಣೆ, ಅಹಮದಾಬಾದ್ ಕ್ರೈಂ ಬ್ರಾಂಚ್‌ಗೆ ಮಾಹಿತಿ ನೀಡಿದೆ. ಅದರ ಆಧಾರದ ಮೇಲೆ ಗಾಂಧಿನಗರ ಆರ್‌ಟಿಒದಲ್ಲಿ ಕೆಲಸ ಮಾಡುವ ಏಜೆಂಟ್‌ಗಳಾದ ಸಂತೋಷ್ ಚೌಹಾಣ್ ಮತ್ತು ಧವಲ್ ರಾವತ್ ಅವರನ್ನು ಬಂಧಿಸಲಾಗಿದೆ.

ಈವರೆಗೆ 2,000ಕ್ಕೂ ಹೆಚ್ಚು ನಕಲಿ ಲೈಸನ್ಸ್​ಗಳು ಸಿದ್ಧ: ಈ ಏಜೆಂಟರು ಕಳೆದ ಮೂರು ವರ್ಷಗಳಿಂದ ನಕಲಿ ಸೇನಾ ದಾಖಲೆಗಳ ಮೇಲೆ ಲೈಸನ್ಸ್​ಗಳನ್ನು ತಯಾರಿಸುತ್ತಿದ್ದರು. ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದ 2,000ಕ್ಕೂ ಹೆಚ್ಚು ನಿವಾಸಿಗಳ ಲೈಸನ್ಸ್​ಗಳನ್ನು ಮಾಡಲಾಗಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಈ ಲೈಸನ್ಸ್​ಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿರುವ ಶಂಕೆಯ ಮೇಲೆ ತನಿಖೆ ಆರಂಭಿಸಲಾಗಿದೆ. ಬಂಧಿತ ಆರೋಪಿ ಸಂತೋಷ್ ಸಿಂಗ್ ಚೌಹಾಣ್‌ನ ತನಿಖೆಯ ವೇಳೆ, ಆತ 1991ರಿಂದ 2012ರವರೆಗೆ ಭಾರತೀಯ ನೌಕಾ ಆಸ್ಪತ್ರೆ ಐಎನ್‌ಎಚ್‌ಎಸ್ ಅಶ್ವಿನಿಯಲ್ಲಿ ನಿರ್ವಹಣಾ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದಿದೆ.

2015ರಿಂದ ಗಾಂಧಿನಗರದಲ್ಲಿ ವಾಸವಾಗಿದ್ದು, ಆರ್‌ಟಿಒದಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಸಮಯದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ಅಶ್ಫಾಕ್, ನಜೀರ್, ವಾಸಿಂ ಹಾಗೂ ಇತರ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದರು. ಅವರು ಈ ನಕಲಿ ಡ್ರೈವಿಂಗ್ ಲೈಸನ್ಸ್ ನೀಡಲು ಪ್ರಾರಂಭಿಸಿದರು. ಈ ಸಂಬಂಧ ಅಹಮದಾಬಾದ್ ಕ್ರೈಂ ಬ್ರಾಂಚ್​ದಿಂದ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದೆ. ಆರೋಪಿಗಳಿಂದ 556 ಡ್ರೈವಿಂಗ್ ಲೈಸನ್ಸ್ ವಶಪಡಿಸಿಕೊಳ್ಳಲಾಗಿದೆ.

ಅಪರಾಧ ವಿಭಾಗದ ಪಿಐ ಮಿತೇಶ್ ತ್ರಿವೇದಿ ಮಾಹಿತಿ: ಬಂಧಿತರಿಂದ ಇತರೆ ನಕಲಿ ದಾಖಲೆಗಳು ಹಾಗೂ ಕ್ಯಾಂಟೀನ್ ಕಾರ್ಡ್‌ಗಳು ಪತ್ತೆಯಾಗಿದ್ದು, ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಅವರೊಂದಿಗೆ ಅಪರಾಧದಲ್ಲಿ ಭಾಗಿಯಾಗಿರುವ ಜಮ್ಮು ಮತ್ತು ಕಾಶ್ಮೀರದ ಆರೋಪಿಗಳನ್ನು ಬಂಧಿಸಲು ಅಪರಾಧ ವಿಭಾಗದ ತಂಡವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಇದೀಗ ಜಮ್ಮು-ಕಾಶ್ಮೀರದಿಂದ ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಈ ವಿಚಾರದಲ್ಲಿ ಇನ್ನಷ್ಟು ವಿಷಯಗಳು ಬಯಲಿಗೆ ಬರಲಿವೆ. ಈ ಸಂಬಂಧ ಅಪರಾಧ ವಿಭಾಗದ ಪಿಐ ಮಿತೇಶ್ ತ್ರಿವೇದಿ ಮಾತನಾಡಿ, ಆರೋಪಿಗಳ ವಿಚಾರಣೆಯಲ್ಲಿ ಇನ್ನೂ 556 ವಾಹನಗಳ ಲೈಸನ್ಸ್​ಗಳು ಪತ್ತೆಯಾಗಿವೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ. ಆ ಆರೋಪಿಗಳ ಬಂಧನದ ನಂತರ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Manipur Violence: ಮಣಿಪುರ ಸಚಿವರ ಗೋಡೌನ್​ಗೆ ಬೆಂಕಿ ಹೆಚ್ಚಿದ ಗುಂಪು: ₹ 120 ಕೋಟಿ ಮೌಲ್ಯದ ಪ್ಲಾಸ್ಟಿಕ್ ಪೈಪ್‌ಗಳು ಸುಟ್ಟು ಭಸ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.