ETV Bharat / bharat

ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು.. ನಟ ನಟಿಯರಿಂದ ಭಾರತಕ್ಕೆ ಅಭಿನಂದನೆ ಮಹಾಪೂರ - ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು

ವಿಶ್ವಕಪ್ ಪಂದ್ಯಾಟದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಸಿನಿಮಾ ರಂಗದ ನಟ ನಟಿಯರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

cricket-world-cup-2023-bollywood-hails-indias-sensational-win-over-arch-rivals-pakistan
ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು : ನಟ ನಟಿಯರಿಂದ ಭಾರತಕ್ಕೆ ಅಭಿನಂದನೆ ಮಹಾಪೂರ
author img

By ETV Bharat Karnataka Team

Published : Oct 15, 2023, 12:11 PM IST

ಅಹಮದಾಬಾದ್​(ಗುಜರಾತ್​): ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಸತತ ಎಂಟನೇ ಬಾರಿಗೆ ಸೋಲಿಸುವ ಮೂಲಕ ಮತ್ತೆ ಪಾಕಿಸ್ತಾನಕ್ಕೆ ನಿರಾಸೆ ಮೂಡಿಸಿದೆ. ರೋಹಿತ್​ ಶರ್ಮಾ ಅವರ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದ ಭಾರತವು 3 ವಿಕೆಟ್​ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

ನಟ ನಟಿಯರಿಂದ ಭಾರತಕ್ಕೆ ಅಭಿನಂದನೆ ಮಹಾಪೂರ : ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಸಿನಿಮಾರಂಗದಿಂದ ಅಭಿನಂದನೆಯ ಮಹಾಪೂರ ಹರಿದುಬಂದಿದೆ. ಬಾಲಿವುಡ್​ ನಟರಾದ ಅಜಯ್​ ದೇವ್​ಗನ್​, ಸನ್ನಿ ಡಿಯೋಲ್​,ವಿಕ್ಕಿ ಕೌಶಲ್​, ಅನಿಲ್​ ಕಪೂರ್​, ಆಯುಷ್ಮಾನ್​ ಖುರಾನ, ಪ್ರಿನ್ಸ್ ಮಹೇಶ್​ ಬಾಬು, ಫರ್ದೀನ್​ ಖಾನ್, ನಟಿ ಕೀರ್ತಿ ಸುರೇಶ್​, ಕರೀನಾ ಕಪೂರ್, ಶಾರ್ವರಿ ವಾಗ್​ ಸೇರಿ ಹಲವು ನಟ ನಟಿಯರು ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬಾಲಿವುಡ್​ ನಟಿ ಕರೀನಾ ಕಪೂರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಟೀಮ್​ ಇಂಡಿಯಾಗೆ ಶುಭಾಶಯ ಕೋರಿದ್ದು, ಕಂಗ್ರಾಜುಲೇಷನ್​ ಇಂಡಿಯಾ ಎಂದು ಸ್ಟೋರಿ ಹಾಕಿದ್ದಾರೆ. ಬಾಲಿವುಡ್​ ನಟ ಅಜಯ್ ದೇವಗನ್ ಕೂಡ ಭಾರತ ತಂಡದ ಗೆಲುವಿಗಾಗಿ ಅಭಿನಂದಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ "ಅತ್ಯುತ್ತಮ ಬೌಲಿಂಗ್ ದಾಳಿ, ಅತ್ಯುತ್ತಮ ಬ್ಯಾಟಿಂಗ್ ಲೈನ್-ಅಪ್, ನಾವು ಎಲ್ಲವನ್ನೂ ಹೊಂದಿದ್ದೇವೆ! ವಿಶ್ವಕಪ್ ಟ್ರೋಫಿ.. ನಾವು ಇಲ್ಲಿಗೆ ಬಂದಿದ್ದೇವೆ" ಎಂದು ಬರೆದಿದ್ದಾರೆ.

ಭಾರತ - ಪಾಕಿಸ್ತಾನ ಪಂದ್ಯ : ಭಾರತ ಮತ್ತು ಪಾಕಿಸ್ತಾನ ಪಂದ್ಯ ಹಿನ್ನೆಲೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 42.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 191 ರನ್​ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ ಬಾಬರ್​ ಅಜಂ 50 ರನ್​, ಮೊಹಮ್ಮದ್​ ರಿಜ್ವಾನ್​ 49 ರನ್​, ಇಮಾಮ್​ ಉಲ್​ಹಕ್​ 36 ರನ್​ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಬಳಿಕ ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡ ಕೇವಲ 31.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 192 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ಭಾರತದ ಪರ ಸ್ಫೋಟಕ ಬ್ಯಾಟರ್​ ರೋಹಿತ್​ ಶರ್ಮಾ (86) ಭರ್ಜರಿ ಬ್ಯಾಟಿಂಗ್​ ನಡೆಸಿದರು. ಬಳಿಕ ಪ್ರಮುಖ ಎರಡು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್​ ಮತ್ತು ಕೆ ಎಲ್​ ರಾಹುಲ್​ ಆಸರೆಯಾದರು. ಶ್ರೇಯಸ್​ ಅರ್ಧ ಶತಕ (53ರನ್​) ಗಳಿಸಿದರೆ, ರಾಹುಲ್​ 19 ರನ್​ ಗಳಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನದ ವಿರುದ್ಧ ಭಾರತ ಜಯ ಗಳಿಸಿ ತನ್ನ ವಿಶ್ವಕಪ್​ನಲ್ಲಿ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ಇದನ್ನೂ ಓದಿ : ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮಾಡಿದ ದಾಖಲೆಗಳಿವು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.