ಹಲವಾರು ರಸ್ತೆ ಅಪಘಾತಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರವಾದ ಅಪಘಾತವೊಂದು ಜರುಗಿದೆ. ಕೆರಳಿದ ಹಸುವೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಬೈಕ್ ರೈಡರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯೂಟ್ಯೂಬ್ ಚಾನೆಲ್ ವೈರಲ್ಹಾಗ್ (ViralHog) ಯೂಟ್ಯೂಬ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕೆರಳಿದ ಹಸು ರಸ್ತೆಗೆ ಬಂದು ಕೊಂಬಿನಿಂದ ಬೈಕ್ ಅನ್ನು ಎತ್ತಿ ಬಿಸಾಡಿದೆ. ಈ ಘಟನೆಯನ್ನು ಕಂಡು ಎಲ್ಲರೂ ಶಾಕ್ಗೆ ಒಳಗಾಗಿದ್ದಾರೆ.
- " class="align-text-top noRightClick twitterSection" data="">
ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಈ ಘಟನೆ ಅಕ್ಟೋಬರ್ 27ರಂದು ಬ್ರೆಜಿಲ್ನ ಸ್ಯಾಂಟಾ ಕ್ಯಾಟರೀನಾದಲ್ಲಿ ನಡೆದಿದ್ದು, ಕಾರಿನಲ್ಲಿದ್ದ ವ್ಯಕ್ತಿಯೋರ್ವ ಈ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ಯೂಟ್ಯೂಬ್ ವಿಡಿಯೋ ವೈರಲ್ಲಾಗಿದೆ.
ಇದನ್ನೂ ಓದಿ: 29 ವಿಧಾನಸಭೆ, 3 ಲೋಕಸಭಾ ಉಪಚುನಾವಣೆ ಫಲಿತಾಂಶ: ಆಂಧ್ರದಲ್ಲಿ YSRCP ಗೆಲುವು, ತೆಲಂಗಾಣದಲ್ಲಿ ಬಿಜೆಪಿ ಮುನ್ನಡೆ