ETV Bharat / bharat

23 ರಾಜ್ಯಗಳಿಗೆ ಕೇಂದ್ರದಿಂದ 7,274 ಕೋಟಿ ರೂ. SDRF ನಿಧಿ ಬಿಡುಗಡೆ - SDRF

ಈ ಹಣದಲ್ಲಿ ರಾಜ್ಯ ಸರ್ಕಾರಗಳು ಕೋವಿಡ್​ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ.

Amit shah
amit shah
author img

By

Published : Oct 1, 2021, 4:45 PM IST

ನವದೆಹಲಿ: ಕೇಂದ್ರ ಸರ್ಕಾರ 23 ರಾಜ್ಯಗಳಿಗೆ ಎರಡನೇ ಹಂತದ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್‌) ಬಿಡುಗಡೆ​​ ಮಾಡಿದೆ. ಮುಂಗಡವಾಗಿ ಎರಡನೇ ಕಂತಿನ 7,274.40 ಕೋಟಿ ರೂ. ನೀಡಲು ಇದೀಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಧಿ ಬಿಡುಗಡೆಗೆ ಅನುಮೋದನೆ ನೀಡಿದ್ದು, ಕೋವಿಡ್ ಪರಿಹಾರವಾಗಿ ಈ ಹಣ ಬಳಕೆಯಾಗಲಿದೆ.

ಇದನ್ನೂ ಓದಿ: ಸ್ವಚ್ಛ ಭಾರತ ಮಿಷನ್​​ 2.0ಗೆ ಚಾಲನೆ: ಇದು ಮಾತೃಭೂಮಿ ಮೇಲೆ ಪ್ರೀತಿ ಹೊಂದಿರುವ ಅಭಿಯಾನ-ಮೋದಿ ಬಣ್ಣನೆ

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಈಗಾಗಲೇ ಐದು ರಾಜ್ಯಗಳಿಗೆ ಎರಡನೇ ಕಂತಿನ ಹಣ 1,599.20 ಕೋಟಿ ರೂ. ನೀಡಲಾಗಿದೆ. ಇದೀಗ 23 ರಾಜ್ಯಗಳಿಗೆ ಉಳಿದ ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಬಳಿ 23,186.40 ಕೋಟಿ ಎಸ್​ಡಿಆರ್​ಎಫ್​ ಹಣ ಉಳಿದುಕೊಂಡಿದೆ.

ಈ ಹಣದಲ್ಲಿ ರಾಜ್ಯ ಸರ್ಕಾರಗಳು ಕೋವಿಡ್​ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ನೀಡಿರುವ ಮಾಹಿತಿ ಪ್ರಕಾರ ಎಸ್​​ಡಿಆರ್​ಎಫ್ ಮೂಲಕ 50 ಸಾವಿರ ರೂ ಪರಿಹಾರ ನೀಡಲಾಗುವುದು ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.